Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಊಟದ ರುಚಿ ದುಪ್ಪಟ್ಟಾಗಿಸುವ ಬೀಟ್ರೂಟ್ ರಸ; ಮಾಡೋದು ಬಹಳ ಸುಲಭ!
ಊಟದೊಂದಿಗೆ ನೀವು ರುಚಿ ರುಚಿಯಾದ ರಸಂ, ಸಾಂಬಾರ್, ಗ್ರೇವಿ ಸವಿಯಲು ಇಷ್ಟಪಡುತ್ತೀರಿ. ಹಾಗೆ ಹಲವು ರುಚಿಯಲ್ಲಿ ಮಾಡುವ ರಸಂ ಅಥವಾ ರಸಗಳು ಎಲ್ಲರಿಗೂ ಇಷ್ಟವಾಗುತ್ತದೆ. ತರಕಾರಿಯನ್ನು ಬೇಯಿಸುವಾಗ ಅದರಿಂದ ಬರುವ ರಸವನ್ನು ಬಳಸಿಯೂ ಸಾರು ಮಾಡಲಾಗುತ್ತದೆ. ಹೀಗೆ ನಾವಿಂದು ಬೀಟ್ರೂಟ್ ಪಲ್ಯ ಮಾಡುವಾಗ ಅಥವಾ ಸಾಂಬಾರ್ ಮಾಡುವಾಗ ಸಿಗುವಂತಹ ರಸವನ್ನು ಬಳಸಿಕೊಂಡು ನಾವು ರುಚಿ ರುಚಿಯಾದ ಬೀಟ್ರೂಟ್ ರಸಂ ಮಾಡಬಹುದು.
ಬೀಟ್ರೂಟ್ ಎಷ್ಟು ರುಚಿಕರ ಹಾಗೆ ಎಷ್ಟೆಲ್ಲಾ ಆರೋಗ್ಯಕರ ಅಂಶ ತನ್ನಲ್ಲಿಟ್ಟುಕೊಂಡಿದೆ ಎಂಬುದು ನಿಮಗೂ ತಿಳಿದಿರಬಹುದು. ಹಲವು ಆರೋಗ್ಯಕರ ಅಂಶ ತನ್ನಲ್ಲಿಟ್ಟುಕೊಂಡಿರುವ ಈ ಬೀಟ್ರೂಟ್ನಿಂದ ನೀವು ಹಲವು ರುಚಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದೇ ರೀತಿ ನಾವಿಂದು ಸುಲಭವಾಗಿ ಬೀಟ್ರೂಟ್ ರಸಂ ಮಾಡುವ ಕುರಿತಾಗಿ ತಿಳಿದುಕೋಳ್ಳೋಣ. ಇದನ್ನು ಮಾಡೋದು ಬಹಳ ಸುಲಭ ಹಾಗೆ ರುಚಿಯಂತು ಅದ್ಭುತ.

ನೀವು ಸಹ ಸುಲಭವಾಗಿ ಈ ರಸಂ ಮಾಡಲು ಪ್ರಯತ್ನಿಸಲು ನಾವಿಂದು ಅದರ ರೆಸಿಪಿ ಹೇಳಲಿದ್ದೇವೆ. ಈ ಬೀಟ್ರೂಟ್ ರಸಂ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬ ಕುರಿಯಾದ ಮಾಹಿತಿಯನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಬೀಟ್ರೂಟ್ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ಬೀಟ್ರೂಟ್
- ಟೊಮೆಟೊ - 2
- ಹುಣಸೆ (ನೀರಿನಲ್ಲಿ ನೆನೆಸಿಡುವುದು)
- ಒಣ ಕೆಂಪು ಮೆಣಸಿನಕಾಯಿ - 5
- ಕರಿಬೇವು
- ಹಸಿರು ಮೆಣಸಿನಕಾಯಿ
- ಜೀರಿಗೆ
- ಕಾಳು ಮೆಣಸು- 05
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಇಂಗು - ಅರ್ಧ ಚಮಚ
- ಸಾಸಿವೆ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬೀಟ್ರೂಟ್ ರಸಂ ಮಾಡುವ ವಿಧಾನವೇನು?
ಮೊದಲು ಬೀಟ್ರೂಟ್ ಅನ್ನು ಹೆಚ್ಚಿಕೊಂಡು ಕುಕ್ಕರ್ಗೆ ಹಾಕಿ ಟೊಮೆಟೋ ಹಾಕಿ ನೀರು ಹಾಕಿ 2 ಸೀಟಿ ಹೊಡೆಯಲು ಬಿಡಬೇಕು. ಅನಂತರ ಕುಕ್ಕರ್ ತಣ್ಣಗಾದ ಬಳಿಕ ಈ ಬೆಂದಿರುವ ಬೀಟ್ರೂಟ್ ಹಾಗೂ ಟೊಮೆಟೋವನ್ನು ಒಂದಿ ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಕುಟಾಣಿಗೆ ಜೀರಿಗೆ, ಮೆಣಸು, ಅರಶಿಣ, ಇಂಗು ಹಾಕಿ ಕುಟ್ಟಿಕೊಳ್ಳಬೇಕು. ಇಲ್ಲವೆ ಮಿಕ್ಸಿ ಜಾರ್ಗೂ ಹಾಕಿ ರುಬ್ಬಿಕೊಳ್ಳಬಹುದು. ಈ ಪುಡಿಗೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಸಹ ಹಾಕಿ ರುಬ್ಬಿಕೊಂಡು ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಒಣ ಮೆಣಸು, ಕರಿಬೇವು, ಹಾಗೆ ಕುಟ್ಟಿ ಪುಡಿ ಮಾಡಿದ ಮಸಾಲೆಗಳು, ಹಸಿ ಮೆಣಸು ಹಾಕಿ ಫ್ರೈ ಮಾಡಿ. 1 ನಿಮಿಷ ಬಿಟ್ಟು ಇದಕ್ಕೆ ನೆನೆಸಿಟ್ಟ ಹುಣಸೆ ಹುಳಿಯ ನೀರ ಹಾಕಿ. ನಂತರ ಮಿಕ್ಸಿಯಲ್ಲಿ ರುಬ್ಬಿದ್ದ ಬೀಟ್ರೂಟ್ ಟೊಮೆಟೋ ಪೇಸ್ಟ್ ಹಾಕಿ. ಹಾಗೆ ಬೀಟ್ರೂಟ್ ಬೇಯಿಸಿ ಉಳಿದ ನೀರು ಸಹ ಇದಕ್ಕೆ ಹಾಕಿಕೊಳ್ಳಿ.
ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಬರಲು ಬಿಡಿ. 4ರಿಂದ 5 ನಿಮಿಮಷದಲ್ಲಿ ಕುದಿಬರಲಿದೆ. ಕೊನೆಯಲ್ಲಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಬೀಟ್ರೂಟ್ ರಸಂ ಸಿದ್ದವಾಗುತ್ತೆ. ಇದನ್ನು ಊಟದೊಂದಿಗೆ ಮಾತ್ರವಲ್ಲ ತಿಂಡಿಯೊಂದಿಗೂ ಸಹ ಸವಿಯಲು ಬಳಸಬಹುದು. ಊಟದೊಂದಿಗೆ ಮಾತ್ರವಲ್ಲದೆ ನೀವು ಈ ರಸವನ್ನು ಒಂದು ಗ್ಲಾಸ್ಗೆ ಹಾಕಿಕೊಂಡು ಕುಡಿಯಲೂ ಬಹುದು.



Click it and Unblock the Notifications