Latest Updates
-
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್
ರೆಸಿಪಿ: ಮನೆಯಲ್ಲಿ ಮಾಡಬಹುದು ರೆಸ್ಟೋರೆಂಟ್ ರುಚಿಯ ತಂದೂರಿ ಚಿಕನ್
ನಿಮ್ಮ ಮನೆಯಲ್ಲಿಯೇ ಓವನ್ ಇದೆಯೇ ಅಥವಾ ಸೌದೆ ಒಲೆ ಅಥವಾ ಮರದ ಇದ್ದಿಲು ಇದೆಯೇ ಹಾಗಾದರೆ ಈ ತಂದೂರಿ ರೆಸಿಪಿ ಟ್ರೈ ಮಾಡಬಹುದು.

ಗ್ರಿಲ್ಡ್ ತಂತಿ ಇದ್ದರೆ ಗ್ಯಾಸ್ನಲ್ಲಿಯೂ ಮಾಡಬಹುದು. ರೆಸ್ಟೋರೆಂಟ್ ರುಚಿಯ ತಂದೂರಿ ಚಿಕನ್ ಮಾಡುವುದು ಹೇಗೆ ಎಂದು ನೋಡೋಣ:
ತಂದೂರಿ ಚಿಕನ್ ರೆಸಿಪಿ
ಬೇಕಾಗುವ ಸಾಮಗ್ರಿ
1/2 ಕೆಜಿ ಚಿಕನ್
1/2 ಕಪ್ ಗ್ರೀಕ್ ಯೋಗರ್ಟ್
3/4 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1ಚಮಚ ಗರಂ ಮಸಾಲ
1 ಚಮಚ ಖಾರದ ಪುಡಿ (ಕಾಶ್ಮೀರಿ ಅಥವಾ ಬ್ಯಾಡಗಿ)
1/4 ಚಮಚ ತರಿತರಿ ಪುಡಿ ಮಾಡಿದ ಕಾಳು ಮೆಣಸಿನ ಪುಡಿ
1 ಚಮಚ ಕೊತ್ತಂಬರಿ ಪುಡಿ
1/4 ಚಮಚ ಉಪ್ಪು
1/4 ಚಮಚ ಅರಿಶಿಣ ಪುಡಿ
1 ಚಮಚ ಕಸೂರಿ ಮೇತಿ
1 ಚಮಚ ನಿಂಬೆರಸ
11/2 ಚಮಚ ಎಣ್ಣೆ
ಆಕರ್ಷಕ ಬಣ್ಣಕ್ಕೆ
ಕಡಿಮೆ ಖಾರದ ಸ್ವಲ್ಪ ಅಧಿಕ ಬಣ್ಣ ಇರುವ ಮೆಣಸಿನ ಪುಡಿ (ಕಾಶ್ಮೀರಿ ಚಿಲ್ಲಿಪುಡಿ
ಬಳಸಬಹುದು)
2 ಚಮಚ ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಚಿಕನ್ ಅನ್ನು ಮಿಕ್ಸ್ ಮಾಡಿಡಿ, ಅದಕ್ಕೆ ಈ ಮಿಶ್ರಣ ರೆಡಿ ಮಾಡಿ
* ಒಂದು ಬೌಲ್ಗೆ ಮೊಸರು ಹಾಕಿ, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ
ಪುಡಿ, ಖಾರದ ಪುಡಿ, ಉಪ್ಪು, ಅರಿಶಿಣ ಪುಡಿ, ಕಸೂರಿ ಮೇತಿ, ಖಾರದ
ಪುಡಿ,ಕೊತ್ತಂಬರಿ ಪುಡಿ ಹಾಕಿ.
*ಈಗ ಸ್ವಲ್ಪ ಎಣ್ಣೆ ಹಾಗೂ ನಿಂಬೆರಸ ಹಾಕಿ ಮಿಕ್ಸ್ ಮಾಡಿ.
* ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಮಿಶ್ರಣ ಗಟ್ಟಿಯಾಗಿರಬೇಕು. ಈಗ ರುಚಿಗೆ
ತಕ್ಕ ಉಪ್ಪು, ಮೆಣಸಿನ ಪುಡಿ ಸೇರಿಸಿ.
* ಈಗ ಚಿಕನ್ ಮೀಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಡಿ.
*ಮಸಾಲೆ ಮಿಕ್ಸ್ ಚಿಕನ್ ಅನ್ನು 6 ಗಂಟೆ ಫ್ರಿಡ್ಜ್ನಲ್ಲಿಡಿ.
ತಂದೂರಿ ಚಿಕನ್ ಮಾಡುವುದು ಹೇಗೆ?
* ಮೈಕ್ರೋಓವನ್ ಅನ್ನು 15-20 ನಿಮಿಷ ಬಿಸಿ ಮಾಡಿ. ಅಂದರೆ 240 ಡಿಗ್ರಿC
ಬಿಸಿಯಾಗಿರಬೇಕು.
*ಈಗ ಓವನ್ ಟ್ರೇ ಮೇಲೆ ಫಾಯಿಲ್ ಹಾಕಿ, ನಂತರ ಎಣ್ಣೆ ಸವರಿದ ತಂತಿಯ ಟ್ರೇ
ಇಡಿ.
* ಅದರ ಮೇಲೆ ಚಿಕನ್ ಪೀಸ್ಗಳನ್ನು ಹಾಕಿ 15 ನಿಮಿಷ ಬೇಯಿಸಿ. ಚಿಕನ್
ಹೊರತೆಗೆಯಿರಿ.
* ನಂತರ ಮಸಾಲೆ ಮಿಕ್ಸ್ ಬಾಕಿ ಇದ್ದರೆ ಅದಕ್ಕೆ ಇನ್ನೂ ಸ್ವಲ್ಪ ಕೆಂಪು ಬಣ್ಣದ
ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಅದನ್ನು ಮತ್ತೆ ಚಿಕನ್ ಮೇಲ್ಭಾಗಕ್ಕೆ ಹಚ್ಚಿ
ನಂತರ ಮತ್ತೆ 10 ನಿಮಿಷ ಬೇಯಿಸಿ.
* ಕೊನೆಯ 5 ನಿಮಿಷ broil modeನಲ್ಲಿಡಿ.
* ನಂತರ ತೆಗೆದು ಅದರಲ್ಲಿ ಮೇಲೆ ಬ್ರೆಷ್ನಿಂದ ಎಣ್ಣೆ ಸವರಿ.
* ಈಗ ಕೆಂಡ ಬಿಸಿ ಮಾಡಿ ಅದರಲ್ಲಿ ಚಿಕನ್ ಅನ್ನು ಮತ್ತೆ 5 ನಿಮಿಷ ತಿರುಗಿಸುತ್ತಾ
ರೋಸ್ಟ್ ಮಾಡಿದರೆ ತಂದೂರಿ ಚಿಕನ್ ರೆಡಿ. ಇದನ್ನು ಪುದೀನಾ ಚಟ್ನಿ ಜೊತೆ
ಸವಿಯಿರಿ.
ತಂದೂರಿ ಮಾಡಲು ಟಿಪ್ಸ್
1. ಪ್ಯಾನ್ ಫ್ರೈಯಿಂಗ್ ವಿಧಾನ
ನೀವು ಪ್ಯಾನ್ ಫ್ರೈ ಮಾಡುವುದಾದರೆ ಪ್ಯಾನ್ಗೆ ಬೆಣ್ಣೆ ಸವರಿ, ನಂತರ ಲೋ
ಪ್ಲೇಮ್ನಲ್ಲಿ ಬೇಯಿಸಿ, ಆಗ ಮಾತ್ರ ಅದರೊಳಗೆ ಚೆನ್ನಾಗಿ ಬೇಯಿಸಿ. ಸ್ಮೋಕಿ
ಫ್ಲೇವರ್ಗಾಗಿ ಒಂದು ಕಟ್ಟಿಗೆ ಇದ್ದಿಲು(ಮಸಿ) ತೆಗೆದು ಬಿಸಿ ಮಾಡಿ ಅದಕ್ಕೆ
ಸ್ವಲ್ಪ ತುಪ್ಪ ಸೇರಿಸಿ ತಂದೂರಿ ಚಿಕನ್ ಒಳಗಡೆ ಇಡಿ. ಚಿಕನ್ ಘಮ್ ಅಂತ ವಾಸನೆ
ಬೀರುವುದು.
2. ಗ್ಯಾಸ್ ಮೇಲೆ ತಂದೂರಿ ಮಾಡುವುದಾದರೆ
ಇದು ತುಂಬಾ ಸುಲಭವಾದ ವಿಧಾನ. ನಿಮ್ಮ ಬಳಿ ಮೆಟಲ್ ರ್ಯಾಕ್ ಇದ್ದರೆ ಸಾಕು,
ಅದಕ್ಕೆ ಸ್ವಲ್ಪ ಎಣ್ಣೆ ಸವರಿ, ಅದರ ಮೇಲೆ ಚಿಕನ್ ಪೀಸ್ ಇಟ್ಟು ನಂತರ ಆಗಾಗ
ರೊಟೇಟ್ ಮಾಡುತ್ತಾ ಕಡಿಮೆ ಉರಿಯಲ್ಲಿ ಬೇಯಿಸಿ.
3. ಕೆಂಡದಲ್ಲಿ ಮಾಡುವುದಾದರೆ
ಇದು ತುಂಬಾ ರುಚಿಕರವಾದ ವಿಧಾನ. ಚಿಕನ್ ಅನ್ನು ಒಂದು ಬಕೆಟ್ನಿಂದ ಕವರ್ ಮಾಡಿ
ಅದರ ಸುತ್ತ ಹಸಿ ಮಣ್ಣಿನಿಂದ ಮುಚ್ಚಿ ನಂತರ ಬೆಂಕಿ ಹಾಕಿ 15 ನಿಮಿಷ ಬೇಯಿಸಿ.
4. ಏರ್ ಫ್ರೈಯಿಂಗ್
ಯಾರಿಗೆ ಎಣ್ಣೆ ಬಳಸಲು ಇಷ್ಟವಿಲ್ಲವೋ ಅವರು ಏರ್ ಫ್ರೈಯಿಂಗ್ ಟ್ರೈ
ಮಾಡಬಹುದು.



Click it and Unblock the Notifications
