Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಹೋಟೆಲ್ ರುಚಿಯ ತಂದೂರಿ ಚಿಕನ್ ಮನೆಯಲ್ಲೆ ಮಾಡಿ..! ಗ್ರಿಲ್, ಓವನ್ ಯಾವುದೂ ಬೇಡ..!
ನೀವು ನಾನ್ ವೆಜ್ ಪ್ರಿಯರಾಗಿದ್ದರೆ ಚಿಕನ್, ಮಟನ್‌ನಲ್ಲಿ ಹಲವಾರು ರುಚಿಯ ಖಾದ್ಯ ಸವಿದಿರುತ್ತೀರಿ, ಚಿಕನ್‌ನಲ್ಲಿ ಹತ್ತಾರು ಬಗೆಯ ಖಾದ್ಯ ಈಗ ಸಿಗುತ್ತೆ. ನಾನ್ ವೆಜ್ ಹೋಟೆಲ್‌ನಲ್ಲಿ ನಿಮ್ಮ ಬಾಯಲ್ಲಿ ನೀರು ತರಿಸುವಂತಹ ಅದ್ಭುತ ಖಾದ್ಯಗಳು ನಿಮ್ಮ ಕಣ್ಣುಕುಕ್ಕಿರಬಹುದು. ಹಾಗೆ ಮನೆಯಲ್ಲೂ ಕೂಡ ಹಲವು ಬಗೆಯ ಚಿಕನ್ ರೆಸಿಪಿಯನ್ನು ನೀವು ಮಾಡಿ ಸವಿದಿರುತ್ತೀರಿ.
ಹಾಗೆ ಚಿಕನ್ ರೆಸಿಪಿಗಳಲ್ಲಿ ಅತ್ಯಂತ ರುಚಿಕರ ಹಾಗೂ ಎಲ್ಲರು ಇಷ್ಟಪಟ್ಟು ಸವಿಯುವ ಒಂದು ಬಗೆ ಅಂದ್ರೆ ಅದು ತಂದೂರಿ ಚಿಕನ್. ನೀವು ಹೋಟೆಲ್, ಡಾಬಾ, ರೆಸ್ಟೊರೆಂಟ್‌ನಲ್ಲಿ ಹೊರಗೆ ತಂದೂರಿ ಚಿಕನ್ ಮಾಡಿ ಕೊಡುವುದು ನೋಡಿರಬಹುದು. ತಂದೂರಿಯ ಮೇಲೆ ನಿಂಬೆ ರಸ ಹಾಗೂ ಕಾಳು ಮೆಣಸಿನ ಪುಡಿ ಹಾಕಿಕೊಂಡು ಸವಿದರೆ ರುಚಿಗೆ ಬಾಯಲ್ಲಿ ನೀರು ಬರುತ್ತೆ.

ಇಷ್ಟೊಂದು ರುಚಿಕರ ಚಿಕನ್ ತಂದೂರಿಯನ್ನು ನಾವು ಮನೆಯಲ್ಲೂ ಕೂಡ ಮಾಡಬಹುದು. ಆದ್ರೆ ಈ ತಂದೂರಿ ಮಾಡಲು ಓವನ್, ದೊಡ್ಡ ದೊಡ್ಡ ಗ್ರಿಲ್‌ಗಳ ಅವಶ್ಯಕತೆ ಇಲ್ಲ. ಸುಲಭವಾಗಿ ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಬಹುದು. ಹೋಟೆಲ್‌ನಲ್ಲಿ ತಂದೂರಿಗೆ ದುಬಾರಿ ಬೆಲೆ ನೀಡಬೇಕು ಆದ್ರೆ ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ಅಷ್ಟೇ ರುಚಿಯಾಗಿ ತಂದೂರಿ ಚಿಕನ್ ಮಾಡಬಹುದು.
ಹಾಗಾದ್ರೆ ಮನೆಯಲ್ಲೇ ತಂದೂರಿ ಚಿಕನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡಲು ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮನೆಯಲ್ಲಿ ತಂದೂರಿ ಚಿಕನ್ ಮಾಡಲು ಯಾವೆಲ್ಲಾ ವಸ್ತು ಬೇಕು?
- ಚಿಕನ್- ದೊಡ್ಡದಾಗಿ ಕತ್ತರಿಸಿದ ಪೀಸ್‌ಗಳು
- ನಿಂಬೆ
- ಕಾಶ್ಮೀರಿ ಕೆಂಪು ಮೆಣಸಿನ ಪುಡಿ
- ಮೊಸರು
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ಕೊತ್ತಂಬರಿ ಪುಡಿ
- ತಂದೂರಿ ಮಸಾಲ ಪುಡಿ
- ಕರಿಮೆಣಸಿನ ಪುಡಿ
- ಕಸ್ತೂರಿ ಮೇಥಿ
- ಕೊತ್ತಂಬರಿ ಸೊಪ್ಪು
- ರುಚಿಗೆ ಉಪ್ಪು
- ಕೆಂಪು ಕಲರ್
- ಎಣ್ಣೆ
ಮನೆಯಲ್ಲಿ ತಂದೂರಿ ಚಿಕನ್ ಮಾಡುವ ವಿಧಾನ
ಮೊದಲು ಚಿಕನ್ ಅನ್ನು ತೊಳೆದು ಇಟ್ಟುಕೊಳ್ಳಿ. ಮಧ್ಯದಲ್ಲಿ ಸಣ್ಣ ಸಣ್ಣದಾಗಿ ಗೆರೆ ಎಳೆದಂತೆ ಕತ್ತರಿಸಿಕೊಳ್ಳಿ. ನಂತರ ಈ ಚಿನ್ ಮೇಲೆ ನಿಂಬೆ ಹುಳಿ ರಸ, ಅರ್ಧ ಕಪ್ ಮೊಸರು, ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ತಂದೂರಿ ಮಸಾಲೆ ಅಥವಾ ಚಿಕನ್ ಮಸಾಲೆ, ಕಸೂರಿ ಮೇಥಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೆಂಪು ಕಲರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ. ಅನಂತರ ಇದು ನೆನೆಯಲು ಅರ್ಧ ಗಂಟೆ ಹಾಗೆಯೆ ಇಡಬೇಕು.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಅನಂತರ ಅರ್ಧ ಗಂಟೆ ಇಟ್ಟಿರುವ ಚಿಕನ್ ಪೀಸ್‌ಗಳನ್ನು ಈ ಬಾಣಲೆ ಒಳಗೆ ಇಟ್ಟು ಕರಿಯಲು ಬಿಡಿ. ಮಧ್ಯಮ ಉರಿಯಲ್ಲಿ ಕರಿದುಕೊಳ್ಳಿ. 2 ನಿಮಿಷಗಳಿಗೊಮ್ಮೆ ತರಿಗಿಸಿಕೊಳ್ಳುತ್ತಾ ಇರಿ. ಚಿಕನ್‌ನ ಎಲ್ಲಾ ಭಾಗವೂ ಚೆನ್ನಾಗಿ ಬೇಯಬೇಕು. 15 ನಿಮಿಷ ಆದರೂ ಬೇಯಿಸಿಕೊಳ್ಳಿ.
ಚಿಕನ್ ಚೆನ್ನಾಗಿ ರೋಸ್ಟ್ ಆದ ಬಳಿಕ ಚಾಪತಿ ಅಥವಾ ರೊಟ್ಟಿಯನ್ನು ಮಾಡಲು ಬಳಸುವಂತಹ ಗ್ರಿಲ್ ಅನ್ನು ಒಲೆ ಮೇಲೆ ಇಟ್ಟು ಅದರ ಮೇಲೆ ಚಿಕನ್ ಪೀಸ್‌ಗಳನ್ನು ಇಟ್ಟುಕೊಳ್ಳಬೇಕು. ಬೆಂಕಿಯ ಉರಿಯಲ್ಲಿ ಚಿಕನ್ ಮತ್ತೆ ಬೇಯಲು ಬಿಡಬೇಕು. 1 ಅಥವಾ 2 ನಿಮಿಷ ಈ ಚಿಕನ್ ಬೇಯಿಸಿದರೆ ಸಾಕು. ನಂತರ ಒಲೆ ಆಫ್ ಮಾಡಿಕೊಂಡು ಈ ಚಿಕನ್ ಮೇಲೆ ಕಾಳು ಮೆಣಸಿನ ಪುಡಿಯನ್ನು ಹಾಕಿ ಸವಿಯಲು ನೀಡಬಹುದು.
ನೀವು ಕೂಡ ಮನೆಯಲ್ಲೇ ಈ ಚಿಕನ್ ತಂದೂರಿ ಮಾಡಿ ಸವಿಯಬಹುದು. ಒಮ್ಮೆ ಟ್ರೈ ಮಾಡಿ.



Click it and Unblock the Notifications
