Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಪಾತಿ ಸವಿಯೋಕೆ ತಮಿಳುನಾಡು ಸ್ಟೈಲ್‌ನ ವೈಟ್ ಕುರ್ಮ ಮಾಡಿ: ಇಲ್ಲಿದೆ ಸಖತ್ ರುಚಿ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಚಪಾತಿ ಮಾಡಿದ ದಿನ ಅದರ ಜೊತೆಗೆ ಸವಿಯಲು ಏನು ಮಾಡುತ್ತೀರಿ. ಸಾಮಾನ್ಯವಾಗಿ ಚಟ್ನಿ, ಯಾವುದಾದರು ಪಲ್ಯ ಮಾಡುವುದು ಕಾಮನ್. ಚಪಾತಿಗೆ ಕೆಲವು ಚಟ್ನಿಗಳು ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಹೀಗಾಗಿ ಎಲ್ಲರು ಚಪಾತಿಗೆ ಹೆಚ್ಚಾಗಿ ಚಪಾತಿ, ಕುರ್ಮ ಸವಿಯುವುದು ನೋಡಬಹುದು. ಚಪಾತಿ ಜೊತೆಗೆ ಸವಿಯಲು ಎಲ್ಲಾ ಖಾದ್ಯಗಳು ರುಚಿಕರವಾಗಿರುತ್ತವೆ.
ಆದರೆ ನಾವಿಂದು ವಿಶೇಷವಾಗಿ ಚಪಾತಿ ಸವಿಯಲೆಂದೇ ಮಾಡುವಂತಹ ಅದ್ಭುತ ರುಚಿಯ ತಮಿಳುನಾಡು ಶೈಲಿಯ ಈ ಬಿಳಿ ಕುರ್ಮ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಪರೋಟ ಹಾಗೂ ಚಪಾತಿಗೆ ಈ ವೈಟ್ ಕುರ್ಮ ಬಹಳ ರುಚಿ ನೀಡುತ್ತೆ. ಹಾಗೆ ನೀವು ಚಪಾತಿಯನ್ನು ಮತ್ತೆ ಮತ್ತೆ ಸವಿಯುಂತೆ ಮನಸ್ಸಾಗೋದು ಖಚಿತ.

ತಮಿಳುನಾಡಿನಲ್ಲಿ ಪರೋಟ ಹಾಗೂ ಚಪಾತಿಗೆ ಈ ವೈಟ್ ಕುರ್ಮ ಇದ್ದೇ ಇರುತ್ತೆ. ಚಪಾತಿ ಹಾಗೆ ಊಟದ ಸಮಯದಲ್ಲು ಇದನ್ನು ಸವಿಯಬಹುದಾಗಿದ್ದು, ಹೀಗಾಗಿ ಎಲ್ಲರು ಮಾಡಿ ಸವಿಯಲು ಮುಂದಾಗುತ್ತಾರೆ. ಹಾಗಾದ್ರೆ ಚಪಾತಿಗಾಗಿ ಮಾಡುವ ಈ ವೈಟ್ ಕುರ್ಮ ಮಾಡುವುದು ಹೇಗೆ? ಈ ಕುರ್ಮ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಮಿಳುನಾಡು ಶೈಲಿಯ ಈ ಕುರ್ಮ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬಟಾಣಿ- ಕಾಲು ಕಪ್
- ಬೀನ್ಸ್
- ಕ್ಯಾರೆಟ್
- ಹೂಕೋಸು
- ಆಲೂಗಡ್ಡೆ
- ಈರುಳ್ಳಿ
- ಟೊಮೆಟೋ
- ತೆಂಗಿನಕಾಯಿ
- ಕಡಲೆ ಕಾಯಿ
- ಹಸಿ ಮೆಣಸಿನಕಾಯಿ
- ಸೋಂಪು
- ಗೋಡಂಬಿ
- ಬೆಳ್ಳುಳ್ಳಿ
- ಸಾಸಿವೆ
- ಉದ್ದು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ತಮಿಳುನಾಡು ಶೈಲಿಯ ಈ ಕುರ್ಮ ಮಾಡುವುದು ಹೇಗೆ?
ಮೊದಲಿಗೆ ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಸಣ್ಣದಾಗೊ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ, ಸ್ವಲ್ಪ ಉಪ್ಪು ಕೂಡ ಸೇರಿಸಿಕೊಂಡು ಫ್ರೈ ಮಾಡಿಕೊಳ್ಳಿ.
ಟೊಮೆಟೋ ಬೇಯುವವರೆಗೂ ಫ್ರೈ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನ ಕಾಯಿ, ಕಡಲೆ ಕಾಳು, ಹಸಿ ಮೆಣಸು, ಸೋಂಪು ಕಾಳು, ಗೋಡಂಬಿ, ಬೆಳ್ಳುಳ್ಳಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ, ನುಣ್ಣಗೆ ರುಬ್ಬಿಕೊಂಡ ಬಳಿಕ ಇದನ್ನ ಒಲೆ ಮೇಲಿನ ಪಾತ್ರೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಹೂಕೋಸು, ಬೀನ್ಸ್, ನೆನೆಸಿಟ್ಟ ಬಟಾಣಿ, ಆಲೂಗಡ್ಡೆ, ಕ್ಯಾರೆಟ್ ಅನ್ನು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ.
ಇದಕ್ಕೆ ಬಳಿಕ ಉಪ್ಪು ಬೇಕಾದರೆ ಖಾರದ ಪುಡಿ ಸ್ವಲ್ಪ ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ. 10 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ತರಕಾರಿ ಬೇಯಲು ಬಿಡಿ. ತರಕಾರಿಗಳು ಚೆನ್ನಾಗಿ ಬೆಂದ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ವೈಟ್ ಕುರ್ಮ ರೆಡಿಯಾಗುತ್ತೆ. ಚಪಾತಿಗೆ ಇದು ಹೇಳಿ ಮಾಡಿಸಿದ ಖಾದ್ಯ. ಚಪಾತಿ ತಿನ್ನಲು ಇಷ್ಟಪಡದವರು ಕೂಡ ಈ ಕುರ್ಮದ ಜೊತೆಗೆ ಮತ್ತಷ್ಟು ಚಪಾತಿ ಸವಿಯಲು ಮುಂದಾಗೋದು ಖಚಿತ.



Click it and Unblock the Notifications
