Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ತಮಿಳುನಾಡು ಶೈಲಿಯ ಸಾಂಬಾರ್ ಈರುಳ್ಳಿ ಚಟ್ನಿ ಮಾಡಿ..! ಎಲ್ಲಾ ತಿಂಡಿ, ಊಟಕ್ಕೂ ಸೈ!
ನೀವು ಊಟದ ಜೊತೆಗೆ ಹಾಗೆ ಬೆಳಗ್ಗೆ ತಿಂಡಿಯ ಜೊತೆಗೆ ರುಚಿಗಾಗಿ ಯಾವುದಾದರು ಚಟ್ನಿ ಮಾಡಿ ಸವಿಯುವುದು ಸಾಮಾನ್ಯ, ಏಕೆಂದರೆ ನೀವು ತಿಂಡಿಯನ್ನಾಗಲಿ ಊಟವನ್ನಾಗಲಿ ರುಚಿಯಾಗಿ ಸವಿಯಲು ಮಸಾಲೆ ಭರತ ಅಥವಾ ಖಾರಖಾರದ ಚಟ್ನಿ ಇದ್ದರೆ ಅದಕ್ಕೆ ಬೆಲೆ ಬರುತ್ತೆ. ಹಾಗೆ ಎಲ್ಲಾ ಚಟ್ನಿಗಳನ್ನು ನೀವು ಒಮ್ಮೆಯಾದರು ಮಾಡಿ ಸವಿಯಲು ಮುಂದಾಗುತ್ತೀರಿ. ಕೆಲವೊಮ್ಮೆ ತೆಂಗಿನಕಾಯಿ ಚಟ್ನಿ, ನೆಲಗಡಲೆ ಚಟ್ನಿ, ಹುರಿಗಡಲೆ ಚಟ್ನಿ, ತರಕಾರಿಗಳಿಂದ ಮಾಡುವಂತಹ ರುಚಿ ರುಯಚಿ ಚಟ್ನಿ ಸವಿಯುವುದು ಕಾಮನ್.
ಹಾಗೆ ಟೊಮೆಟೋ, ಈರುಳ್ಳಿಯ ಚಟ್ನಿ ಕೂಡ ಬಹಳ ರುಚಿ ನೀಡುತ್ತೆ. ಬರೀ ಟೊಮೆಟೋ ಮೆಣಸು ಹಾಕಿ ಮಾಡುವಂತಹ ರುಚಿ ಚಟ್ನಿಯನ್ನು ಹಲವು ದಿನ ಇಟ್ಟು ನೀವು ಸವಿಯುತ್ತೀರಿ. ಹಾಗೆ ಸಾಂಬಾರ್ ಈರುಳ್ಳಿಯಲ್ಲಿ ಮಾಡುವ ಚಟ್ನಿಯು ಕೂಡ ನಿಮ್ಮ ಊಟ ತಿಂಡಿಯ ರುಚಿ ದುಪ್ಪಟ್ಟಾಗಿಸುತ್ತೆ. ಈ ಈರುಳ್ಳಿ ಚಟ್ನಿಯನ್ನು ಹೆಚ್ಚಾಗಿ ತಮಿಳುನಾಡು ಭಾಗದಲ್ಲಿ ಮಾಡುತ್ತಾರೆ.

ಬೆಳಗ್ಗೆ ತಿಂಡಿಯ ಸಮಯದಲ್ಲಿ ತಮಿಳುನಾಡಿನ ಬಹುತೇಕ ಕಡೆಗಳಲ್ಲಿ ಈ ರೀತಿ ಈರುಳ್ಳಿ ಚಟ್ನಿಯನ್ನು ಸವಿಯುವುದು ನೋಡಬಹುದು. ಈ ಈರುಳ್ಳಿ ಚಟ್ನಿ ಇಡ್ಲಿ, ದೋಸೆ, ಕಡಬು, ರೊಟ್ಟಿ, ಚಪಾತಿ, ಪೂರಿ ಹೀಗೆ ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು. ಹೆಚ್ಚಾಗಿ ಈ ರೀತಿ ಚಟ್ನಿಯು ತಮಿಳುನಾಡಿನಲ್ಲಿ ಮಾಡುತ್ತಾರೆ.
ಹಾಗಾದ್ರೆ ನಾವಿಂದು ಈ ತಮಿಳುನಾಡು ಶೈಲಿಯ ರುಚಿಕರ ಈರುಳ್ಳಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಹಾಗೆ ಯಾವೆಲ್ಲಾ ಪದಾರ್ಥಗಳು ಇದಕ್ಕೆ ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಮಿಳುನಾಡು ಶೈಲಿಯ ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ಸಾಂಬಾರ್ ಈರುಳ್ಳಿ
- ಸಾಸಿವೆ
- ಜೀರಿಗೆ
- ಕರಿಬೇವು
- ಕಡಲೆ ಬೀಜ
- ಹಸಿ ಮೆಣಸು
- ಒಣ ಮೆಣಸು
- ಕೊತ್ತಂಬರಿ ಸೊಪ್ಪು
- ಉದ್ದಿನ ಬೇಳೆ
- ಉಪ್ಪು
- ಎಣ್ಣೆ
ತಮಿಳುನಾಡು ಶೈಲಿಯ ಈರುಳ್ಳಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಬಿಸಿಯಾದಾಗ ಎಣ್ಣೆ ಹಾಕಿಕೊಂಡು ಬಳಿಕ 10ರಿಂದ 12 ತೆಗೆದುಕೊಂಡು ಮಧ್ಯದಲ್ಲಿ ಕತ್ತರಿಸಿಕೊಂಡು ಇಲ್ಲವೆ ಇಡಿಯಾಗಿ ಇದಕ್ಕೆ ಹಾಕಿಕೊಳ್ಳಿ. ಹಾಗೆ ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಸಿ ಮೆಣಸು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ. 3ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ.
ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಪದಾರ್ಥಗಳು ಸಂಪೂರ್ಣ ತಣ್ಣಗಾದ ಬಳಿಕ ಅದನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಫ್ರೈ ಮಾಡಿ ಸಿಪ್ಪೆ ತೆಗೆದಿಟ್ಟುಕೊಂಡಿರುವ ಸ್ವಲ್ಪ ಕಡಲೆ ಬೀಜವನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಅರ್ಧ ಕಪ್ ಹುರಿಗಡಲೆ, ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿಕೊಳ್ಳಬೇಕು, ನಿಮಗೆ ಬಹಳ ನೀರು ಬೇಕಾದರೆ ನೀರು ಹೆಚ್ಚು ಹಾಕಿಕೊಂಡು ರುಬ್ಬಿ. ಗಟ್ಟಿ ಚಟ್ನಿ ಬೇಕಾದರೆ ನೀರು ಕಡಿಮೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈಗ ರುಬ್ಬಿದ ಚಟ್ನಿಯನ್ನು ಒಂದು ಬೌಲ್ನಲ್ಲಿ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಂಡು ಈ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿಕೊಳ್ಳಿ. ಹಾಗೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸಾಂಬಾರ್ ಈರುಳ್ಳಿಯ ಅದ್ಭುತ ರುಚಿಯ ಚಟ್ನಿ ರೆಡಿಯಾಗುತ್ತದೆ. ನೀವು ಯಾವುದೇ ತಿಂಡಿ ಮಾಡಿದ್ದರೂ ಕೂಡ ಈ ಚಟ್ನಿ ಜೊತೆ ಸವಿಯಬಹುದು.



Click it and Unblock the Notifications