Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತಮಿಳುನಾಡಿನ ಫೇವರಿಟ್ ಖುಶ್ಬೂ ಇಡ್ಲಿ ಮಾಡಿ ನೋಡಿ..ಹತ್ತಿಯಂತೆ ಮೃದು, ಹಾಲಿನಂತ ಬಣ್ಣ!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯಲ್ಲಿ ಇಡ್ಲಿ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಮೃದುವಾದ, ಹತ್ತಿಯಂತಹ ಇಡ್ಲಿ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಈ ರೀತಿ ಇಡ್ಲಿ ಮಾಡಿದ್ರೆ ನಿತ್ಯ 3 ತಿನ್ನುತ್ತಿದ್ದವರು ಐದಾರು ಸವಿಯುತ್ತಾರೆ. ಇಡ್ಲಿ ಮೃದುವಾಗಿದಷ್ಟು ಅವರ ರುಚಿ ಚೆನ್ನಾಗಿರಲಿದೆ. ಹಾಗೆ ಬೆಳಗ್ಗಿನ ಸಮಯದಲ್ಲಿ ಮೃದುವಾದ ಇಡ್ಲಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ.
ಅದ್ರಲ್ಲೂ ತಮಿಳುನಾಡು ಭಾಗದಲ್ಲಿ ಮೃದುವಾದ ಹತ್ತಿಯಂತಹ ಇಡ್ಲಿ ಮಾಡುತ್ತಾರೆ. ಖುಶ್ಬೂ ಇಡ್ಲಿ ಅಲ್ಲಿನ ಫೇಮಸ್ ಪ್ರಕಾರಗಳಲ್ಲಿ ಒಂದಾಗಿದೆ. ಸಾಮಾನ್ಯ ಇಡ್ಲಿಯಂತೆಯೇ ಇದು ಕೂಡ ಸುಲಭವಾಗಿ ಮಾಡಬಹುದು. ಆದ್ತೆ ಇದು ಹತ್ತಿಯಂತೆ ಮೃದುವಾಗಿರಲಿದೆ. ಹೀಗಾಗಿ ಖುಶ್ಬೂ ಇಡ್ಲಿ ಎಂದು ಕೂಡ ಕರೆಯುತ್ತಾರೆ.

ಈ ಇಡ್ಲಿಯನ್ನು ಅವಲಕ್ಕಿ, ಸಾಬೂದಾನಿಯ ಬಳಸಿ ಮಾಡಲಾಗುತ್ತದೆ. ಇದರ ರುಚಿ ಅದ್ಭುತವಾಗಿರುವ ಜೊತೆಗೆ ಇದು ಬಹಳ ಮೃದುವಾಗಿರಲಿದೆ. ಹೀಗಾಗಿ ಮನೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇದನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಅಲ್ಲದೆ ಕಡಿಮೆ ಎಣ್ಣೆ ಹಾಗೂ ಮಸಾಲೆ ರಹಿತ ವಸ್ತು ಆಗಿರೋದ್ರಿಂದ ಆರೋಗ್ಯಕ್ಕೂ ಇದು ಬಹಳ ಉತ್ತಮವಾಗಿದೆ.
ಹಾಗಾದ್ರೆ ಈ ಖುಶ್ಬೂ ಇಡ್ಲಿ ಮಾಡುವುದು ಹೇಗೆ? ಈ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳ ಅಗತ್ಯವಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖುಶ್ಬೂ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
- ಉದ್ದಿನ ಬೇಳೆ
- ಅನ್ನ 1 ಕಪ್
- ಇಡ್ಲಿ ರವೆ
- ಅಡುಗೆ ಸೋಡಾ
- ಉಪ್ಪು
- ಸಕ್ಕರೆ
ಖುಶ್ಬೂ ಇಡ್ಲಿ ಮಾಡುವುದು ಹೇಗೆ?
ಒಂದು ಅಳತೆ ಗ್ಲಾಸ್ನಲ್ಲಿ 3 ಕಪ್ ಅಕ್ಕಿಯನ್ನು ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಅದೇ ಗ್ಲಾಸ್ನಲ್ಲಿ ಉದ್ದಿನ ಬೇಳೆ ಹಾಕಿಕೊಳ್ಳಿ. ಅರ್ಧ ಗ್ಲಾಸ್ ಸಬ್ಬಕ್ಕಿ ಸಹ ಹಾಕಿ ಮೂರು ಪದಾರ್ಥವನ್ನು ಬೇರೆ ಬೇರೆ ಪಾತ್ರೆಯಲ್ಲಿ ಹಾಕಿ ನೀರು ಹಾಕಿ ತೊಳೆದುಕೊಳ್ಳಿ. ಐದಾರು ಬಾರಿ ಚೆನ್ನಾಗಿ ತೊಳೆದು ನೀರು ಹಾಕಿ ನೆನೆಯಲು ಬಿಡಿ. ಸುಮಾರು 5 ಗಂಟೆಗಳ ಕಾಲ ನೆನೆಯಲು ಬಿಡಬೇಕು.
ಈಗ ನೆನೆಸಿರುವ ಈ ಪದಾರ್ಥಗಳನ್ನು ಮತ್ತೆ ಒಮ್ಮೆ ತೊಳೆದು ನೀರಿನಿಂದ ಬಸಿದು ತೆಗೆದಿಟ್ಟುಕೊಳ್ಳಿ. ಈಗ ಸಬ್ಬಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟು ರೆಡಿ ಮಾಡಿ ಅದನ್ನು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಉದ್ದಿನ ಬೇಳೆ ಹಾಗೆ ಅಕ್ಕಿಯನ್ನು ಕೂಡ ಇದೇ ರೀತಿ ವಿಧಾನದಲ್ಲಿ ಗಟ್ಟಿಯಾಗಿಯೇ ರುಬ್ಬಿಕೊಳ್ಳಬೇಕು.
ನಂತರ ರುಬ್ಬಿಕೊಂಡ ಹಿಟ್ಟನ್ನು ಕೈಗಳಿಂದಲೇ ಮಿಕ್ಸ್ ಮಾಡಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೆ ದಪ್ಪವಿದ್ದರೆ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬಿಸಿ ಇರುವ ಜಾಗದಲ್ಲಿ ಇಡಬೇಕು. ಹಿಟ್ಟು ಹುಳಿ ಬರಲು ಇಡೀ ರಾತ್ರಿ ಹಾಗೆಯೇ ಇಡಿ. ಈಗ ಮಾರನೆ ದಿನ ಬೆಳಗ್ಗೆ ಹಿಟ್ಟನ್ನು ಮತ್ತೆ ಕೈಯಿಂದ ಮಿಕ್ಸ್ ಮಾಡಬೇಕು. ಈ ಸಮಯದಲ್ಲಿ ಅಗತ್ಯವಿದ್ದರೆ ಮಾತ್ರವೇ ಸೋಡಾ ಬಳಸಿ.
ಈಗ ಇಡ್ಲಿ ಅಚ್ಚುಗಳಿಗೆ ಎಣ್ಣೆ ಅವರಿಕೊಂಡು ಅದರ ಮೇಲೆ ಹಿಟ್ಟು ಹಾಕಿ ಬೇಯಲು ಬಿಡಿ. ಸಾಮಾನ್ಯವಾಗಿ 12ರಿಂದ 15 ನಿಮಿಷದಲ್ಲಿ ಇಡ್ಲಿ ಬೇಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ತಮಿಳುನಾಡು ಶೈಲಿಯ ಈ ಖುಶ್ಬೂ ಇಡ್ಲಿ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ಮೃದುವಾದ ಇಡ್ಲಿ ಎಲ್ಲರಿಗೂ ಇಷ್ಟವಾಗುತ್ತೆ.



Click it and Unblock the Notifications
