Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತಮಿಳುನಾಡು ಶೈಲಿಯ ಸ್ಪೆಷಲ್ ಸಾಂಬಾರ್ ರೈಸ್; ನೀವು ಕೂಡ ಫ್ಯಾನ್ ಆಗೋದು ಪಕ್ಕಾ!
ನೀವು ಬೆಳಗ್ಗೆ ತಿಂಡಿ ಸಮಯಕ್ಕೆ ಯಾವ ಖಾದ್ಯ ಮಾಡಿ ಸವಿಯಬೇಕು ಎಂಬ ಕುರಿತಾಗಿ ದೊಡ್ಡ ಚಿಂತೆಯಲ್ಲಿದ್ದರೆ ಅಥವಾ ಗಡಿಬಿಡಿಯಲ್ಲಿ ಯಾವುದಾದರು ಸುಲಭದ ತಿಂಡಿಯನ್ನು ಮಾಡಿ ಸವಿಯುವ ಬಯಕೆಯಲ್ಲಿದ್ದರೆ ಹಲವು ತಿಂಡಿಗಳು ನಿಮ್ಮ ನೆನಪಿಗೆ ಬರಬಹುದು. ಅದ್ರಲ್ಲೂ ಸುಲಭವಾಗಿ ಮಾಡಿ ಮುಗಿಸುವಂತಹ ತಿಂಡಿಯನ್ನೇ ನೀವು ಸವಿಯಲು ಇಷ್ಟಪಡುತ್ತೀರಿ.
ರೈಸ್ ಬಳಸಿ ಮಾಡುವ ತಿಂಡಿಗಳೆಂದರೆ ಕೂಡ ಬಹಳ ಇಷ್ಟವಾಗುತ್ತೆ. ಇನ್ನು ಹೊಸ ರೀತಿಯಾದ, ನೀವೆಂದು ಸವಿದಿರದ ಖಾದ್ಯಗಳೆಂದರೆ ಎಲ್ಲರಿಗೂ ಇಷ್ಟವಾಗೋದು ನೋಡಬಹುದು. ಹಾಗೆ ನಾವಿಂದು ವಿಶೇಷ ರುಚಿಯ ತಮಿಳು ನಾಡು ಶೈಲಿಯ ವಿಶೇಷ ಖಾದ್ಯವೊಂದನ್ನು ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ರೈಸ್ನಿಂದ ಮಾಡುವಂತಹ ಹಲವು ಖಾದ್ಯಗಳಲ್ಲಿ ಈ ಸಾಂಬಾರ್ ರೈಸ್ ಕೂಡ ಒಂದು. ನೀವು ಉಡುಪಿ ಹೋಟೆಲ್ ಶೈಲಿಯ ಬಿಸಿ ಬೇಳೆ ಬಾತ್ ಸವಿದಿರಬಹುದು. ಇದೇ ರೀತಿ ತಮಿಳುನಾಡಿನಲ್ಲಿ ಬಹಳ ಫೇಮಸ್ ಆಗಿರುವ ಸಾಂಬಾರ್ ರೈಸ್ ಅಥವಾ ಕದಂಬಮ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಸಾಂಬಾರ್ ಬಳಸಿಕೊಂಡು ಮಾಡುವ ಈ ರೈಸ್, ಸವಿಯಲು ಬಿಸಿಬೇಳೆ ಬಾತ್ ಟೇಸ್ಟ್ ನೀಡಲಿದೆ. ಬೆಳಗ್ಗೆ ತಿಂಡಿಯ ಸಮಯದಲ್ಲಿ ಮಾತ್ರವಲ್ಲ ಮಧ್ಯಾಹ್ನದ ಊಟದ ಸಮಯಕ್ಕೂ ಇದು ಹೇಳಿ ಮಾಡಿಸಿದ ಖಾದ್ಯ. ಹಾಗಾದ್ರೆ ತಮಿಳುನಾಡು ಶೈಲಿಯ ಈ ಸಾಂಬಾರ್ ರೈಸ್ ಮಾಡುವ ಕುರಿತಾಗಿ ಮಾಡುವ ಕುರಿತಾಗಿ ತಿಳಿದುಒಳ್ಳೋಣ.
ಸಾಂಬಾರ್ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಈ ರೆಸಿಪಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಸಾಂಬಾರ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಹೆಸರು ಬೇಳೆ
- ಶೇಂಗಾ
- ಅರಶಿಣ
- ತೊಗರಿ ಬೇಳೆ
- ತರಕಾರಿಗಳು
- ಸಾಂಬಾರ್ ಪುಡಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಸಾಂಬಾರ್ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಗೆ ಅಕ್ಕಿ ಬೇಳೆ, ತೊಳೆದು ಇಟ್ಟುಕೊಳ್ಳಿ. ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ತೊಳೆದುಕೊಂಡಿದ್ದ ಹಸಿ ಕಡಲೆ ಅಥವಾ ಶೇಂಗಾ, ಕಾಲು ಕಪ್ ತೊಗರಿ ಬೇಳೆ, ಅರ್ಧ ಕಪ್ ನೀರು, ಅರಶಿಣ, ಎಣ್ಣೆ ಹಾಕಿ 2 ಸೀಟಿ ಹೊಡೆಯಲು ಬಿಡಬೇಕು. 2 ಸೀಟಿ ಆದ ಬಳಿಕ ಮುಚ್ಚಳ ತೆಗೆದು ಇದಕ್ಕೆ ಮೊದಲು ತೊಳೆದುಕೊಂಡಿದ್ದ ಅರ್ಧ ಕಪ್ ಅಕ್ಕಿ, ಕಾಲು ಕಪ್ ಹೆಸರು ಬೇಳೆ ಹಾಕಿ 2 ಕಪ್ ನೀರು ಹಾಕಿ ಮತ್ತೆ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಸಿಕೊಳ್ಳಿ.
ಈಗ ತರಕಾರಿಗಳ ಹೆಚ್ಚಾಗಿ ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳಿ. ಯಾವುದೇ ತರಕಾರಿ ಆದರೂ ನಡೆಯುತ್ತದೆ. ಈರುಳ್ಳಿ, ಟೊಮೆಟೋ ಜೊತೆಗೆ ಬೀನ್ಸ್, ಆಲೂಗಡ್ಡೆ, ಕ್ಯಾರೆಟ್ ಹೀಗೆ ಯಾವುದಾದರು ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಅನಂತರ ಪಾತ್ರೆಯೊಂದನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಲ್ಲಾ ತರಕಾರಿಗಳ ಹಾಕಿಕೊಂಡು ನೀರು ಹಾಕಿ ಬೇಯಿಸಿಕೊಳ್ಳಿ.
ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ. ಈಗ ಬೆಂದಿರುವ ತರಕಾರಿಯನ್ನು ಬೇಳೆ ಅಕ್ಕಿಯೊಂದಿಗೆ ನೀರಿನ ಸಮೇತ ಹಾಕಿಕೊಂಡು 2 ಸ್ಪೂನ್ ಸಾಂಬಾರ್ ಪುಡಿ ಹಾಕಿ, ನೀರು ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ ಕುದಿಬರಲು ಬಿಡಿ. ಈಗ ಕುಕ್ಕರ್ ಮುಚ್ಚಳ ಮುಚ್ಚುವುದು ಬೇಡ. ಮತ್ತೆ ಉಪ್ಪು ಮತ್ತು ಬೆಲ್ಲ ಸಹ ಹಾಕಿಕೊಳ್ಳಿ. ಹಾಗೆ ಕುದಿ ಬರಲು ಬಿಡಿ.
ಚೆನ್ನಾಗಿ ಕುದಿಬರಲು ಬಿಟ್ಟು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಕೊನೆಯಲ್ಲಿ ತುಪ್ಪ ಅಥವಾ ಎಣ್ಣೆ ಬಳಸಿಕೊಂಡು ಒಂದು ಒಗ್ಗರಣೆ ಕೊಡಿ. ಇಷ್ಟಾದರೆ ನಿಮ್ಮ ಮುಂದೆ ಸಾಂಬಾರ್ ರೈಸ್ ರೆಸಿಪಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications