Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತಂಪು ತಂಪಿನ ತಂಬುಳಿ ಮಾಡುವುದು ಹೇಗೆ? 5 ನಿಮಿಷದಲ್ಲಿ ಮಾಡಬಹುದು!
ನೀವು ಊಟಕ್ಕೆ ಹಲವು ರೀತಿ ಹುಳಿ, ಸಾರು, ಸಾಂಬಾರ್, ಗ್ರೇವಿ, ಚಟ್ನಿ ಸಹ ಮಾಡಿ ಸವಿದಿರುತ್ತೀರಿ, ಅನಕ್ಕೆ ಮಸಾಲೆಯುಕ್ತ ವಸ್ತುಗಳಿಂದ ಮಾಡಿದ ಖಾದ್ಯವೇ ಹೆಚ್ಚು ರುಚಿ ನೀಡಲಿದೆ. ಹೀಗಾಗಿ ಎಲ್ಲರು ಸಾಂಬಾರ್, ಸಾರು ಹೆಚ್ಚಾಗಿ ಮಾಡುತ್ತಾರೆ. ಇದರ ಜೊತೆಗೆ ಒಂದಿಷ್ಟು ಮಂದಿ ವಿಶೇಷ ರೀತಿಯಲ್ಲಿ ವಿಭಿನ್ನ ರುಚಿಯ ಹುಳಿ ಮಾಡುತ್ತಾರೆ.
ಅದರಲ್ಲೂ ತಂಬುಳಿ ಹೆಸರು ನೀವು ಕೇಳಿರಬಹುದು. ಮಜ್ಜಿಗೆ ಹುಳಿ ಹಾಗೂ ತಂಬುಳಿ ಎರಡೂ ಒಂದೇ ರೀತಿ ರುಚಿ ನೀಡಬಹುದು , ಆದರೆ ಮಾಡುವ ವಿಧಾನ ಸಂಪೂರ್ಣ ಬದಲಾಗಿರುತ್ತದೆ. ಅದರಲ್ಲೂ ತಂಬುಳಿ ಆರೋಗ್ಯಕ್ಕೆ ಬಹಳ ಒಳ್ಳೆಯ ಖಾದ್ಯ. ಇದಕ್ಕೆ ಹೆಚ್ಚು ಅರಶಿನ ಬೆರೆಸಿ ಮಾಡುವುದರಿಂದ ಆರೋಗ್ಯದ ದೃಷ್ಟಿಯಲ್ಲಿ ತಂಬುಳಿ ಉತ್ತಮ.

ಹಾಗೆ ಅರಶಿನದ ಎಲೆಯಿಂದಲೂ ತಂಬುಳಿ ಮಾಡುತ್ತಾರೆ. ಅನ್ನದ ಜೊತೆಗೆ ಈ ತಂಬುಳಿ ಅತ್ಯಂತ ರುಚಿಕರವಾಗಿರಲಿದೆ. ಆದ್ರೆ ನಾವಿಂದು ಮೊಸರು ಹಾಗೂ ಸೌತೆಕಾಯಿಯಿಂದ ರುಚಿ ರುಚಿಯಾಗಿ ಮಾಡುವ ತಂಬುಳಿ ಕುರಿತು ತಿಳಿದುಕೊಳ್ಳೋಣ. ಈ ಮೊಸರಿನ ತಂಬುಳಿ ಮಾಡುವುದು ಹೇಗೆ? ತಂಬುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಂಬುಳಿ ಮಾಡಲು ಬೇಕಾಗುವ ಪದಾರ್ಥಗಳು
- ಮೊಸರು ಅರ್ಧ ಕಪ್
- ಸೌತೆಕಾಯಿ 1
- ತೆಂಗಿನಕಾಯಿ ತುರಿ
- ಜೀರಿಗೆ
- ಹಸಿ ಶುಂಠಿ
- ಹಸಿಮೆಣಸಿನಕಾಯಿ 2
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಜೀರಿಗೆ
- ಉದ್ದಿನಬೇಳೆ
- ಒಣ ಮೆಣಸಿನಕಾಯಿ 2
- ಅರಿಶಿನ ಪುಡಿ
- ಉಪ್ಪು
- ಎಣ್ಣೆ
ತಂಬುಳಿ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಹಸಿ ಮೆಣಸು, ಕರಿಬೇವು, ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಅದನ್ನು ಸಹ ಹಾಕಿಕೊಳ್ಳಿ, ಜೊತೆಗೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪವೆ ನೀರು ಹಾಕಿಕೊಳ್ಳಿ.
ಈಗ ಒಂದು ಬೌಲ್ತೆಗೆದುಕೊಂಡು ಅದಕ್ಕೆ ಮೊಸರು ಹಾಕಿ, ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಮಜ್ಜಿಗೆ ರೀತಿ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆಗಳನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ, ಇದಕ್ಕೆ ಅರಶಿನ ಪುಡಿ, ಹಾಕಿ ನಂತರ ಒಗ್ಗರಣೆಯನ್ನು ತಂಬುಳಿಯ ಬೌಲ್ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ತಂಬುಳಿ ರೆಡಿಯಾಗಿರುತ್ತೆ. ಇದನ್ನು ಮನೆಯಲ್ಲಿ ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ. ಇದು ಅತ್ಯಂತ ತಂಪು ಕಾರಕವಾಗಿರುತ್ತೆ. ನೀವು ಸಹ ಮಾಡಿ ನೋಡಿ.



Click it and Unblock the Notifications
