Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಶಿವರಾತ್ರಿಗೆ ಸ್ಪೆಷಲ್ ತಂಬಿಟ್ಟು ಮಾಡಿ..! ಮನೆಮಂದಿ ಕುಳಿತು ಸವಿಯುವ ಸಿಹಿ..!
ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಈ ಫೆಬ್ರವರಿಯ 26ರಂದು ದೇಶದಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತೆ. ಶಿವರಾತ್ರಿಯಂದು ಹಬ್ಬದ ಜೊತೆಗೆ ನಾವು ಹಲವು ಬಗೆಯ ಸಿಹಿ ತಿಂಡಿಗಳ ಮಾಡುವುದು ಕೂಡ ನೋಡಬಹುದು. ಅದರಲ್ಲೂ ಹಬ್ಬದಲ್ಲಿ ವಿಶೇಷವಾಗಿ ನೈವೇದ್ಯ ಮಾಡಲು ಹಾಗೆ ಮನೆಯಲ್ಲಿ ಪೂಜೆಯ ಬಳಿಕ ಸವಿಯಲೆಂದು ಕೆಲವು ವಿಶೇಷ ಸಿಹಿ ತಿಂಡಿ ಮಾಡುತ್ತಾರೆ.
ನಾವಿಂದು ಹಬ್ಬದ ಸಂಭ್ರಮ ಹೆಚ್ಚಿಸುವಂತಹ ಸಿಹಿ ತಿಂಡಿಯಾದ ತಂಬಿಟ್ಟು ಉಂಡೆ ಮಾಡುವ ಕುರಿತು ತಿಳಿದುಕೊಳ್ಳೋಣ. ತಂಬಿಟ್ಟು ಉಂಡೆ ಶಿವರಾತ್ರಿಯ ಸ್ಪೆಷಲ್ ಸಿಹಿ ಎನ್ನಬಹುದು. ಮಕ್ಕಳಿಗಂತು ಇದರ ರುಚಿಗೆ ಫಿದಾ ಆಗುತ್ತಾರೆ. ಕೇಳಿ ಕೇಳಿ ಸವಿಯುತ್ತಾರೆ. ಹಾಗೆ ಮಾಡೋದು ಕೂಡ ಬಹಳ ಸುಲಭ. ಕಡಿಮೆ ವಸ್ತು ಬಳಸಿ, ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು.

ಶಿವರಾತ್ರಿಗೆ ಹೆಚ್ಚಾಗಿ ಈ ತಂಬಿಟ್ಟು ಉಂಡೆ ಮಾಡಿದರೆ ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಹಾಗಾದ್ರೆ ಈ ತಂಬಿಟ್ಟು ಉಂಡೆ ಮಾಡುವುದು ಹೇಗೆ?, ಮಾಡಲು ಎಷ್ಟು ಸಮಯ ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಂಬಿಟ್ಟು ಉಂಡೆ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಹೆಸರು ಬೇಳೆ
- ಹುರಿಗಡಲೆ
- ಕಪ್ಪು ಎಳ್ಳು
- ಕಡಲೆ ಬೀಜ
- ಏಲಕ್ಕಿ ಪುಡಿ
- ಒಣ ಕೊಬ್ಬರಿ
- ಬೆಲ್ಲ
ತಂಬಿಟ್ಟು ಉಂಡೆ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು 1 ಕಪ್ ಅಕ್ಕಿ ಹಾಕಿಕೊಂಡು ಹುರಿದುಕೊಳ್ಳಬೇಕು. 5 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಅಕ್ಕಿ ಸುವಾಸನೆ ಬರುವಂತೆ ಸ್ವಲ್ಪ ಬಣ್ಣ ಬದಲಾಗುವಂತೆ ಹುರಿದುಕೊಳ್ಳಿ. ನಂತರ ಒಂದು ಪ್ಲೇಟ್ಗೆ ಹಾಕಿ ತಣ್ಣಗಾಗಲು ಬಿಡಿ. ಮತ್ತೆ ಅದೇ ಬಾಣಲೆಗೆ ಸ್ವಲ್ಪ ಹೆಸರು ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ.
3ರಿಂದ4 ನಿಮಿಷ ಹುರಿದರೆ ಸಾಕು ನಂತರ ಹೆಸರು ಬೇಳೆಯನ್ನು ಅಕ್ಕಿ ಜೊತೆಗೆ ಹಾಕಿ ತಣ್ಣಗಾಗಲು ಬಿಡಿ. ಅನಂತರ ಮತ್ತೆ ಅದೇ ಬಾಣಲೆಗೆ ಸ್ವಲ್ಪ ಕಡಲೆ ಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಸಿಪ್ಪೆ ಬಿಡುವವರೆಗೆ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ಇದೇ ಬಾಣಲೆಗೆ 2 ಸ್ಪೂನ್ ಕಪ್ಪು ಎಳ್ಳು ಹಾಕಿ ಹುರಿದುಕೊಳ್ಳಿ. ಇದನ್ನು ಫ್ರೈ ಮಾಡಿ ಬದಿಗಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ಗೆ ಅಕ್ಕಿ ಮತ್ತು ಹೆಸರು ಬೇಳೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿ ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಮಿಕ್ಸಿ ಜಾರ್ಗೆ ಹುರಿದ ಕಡಲೆ ಹಾಗೂ ಸ್ವಲ್ಪ ಹುರಿಗಡಲೆಯನ್ನು ಕೂಡ ಹಾಕಿಕೊಡು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಕೂಡ ಅಕ್ಕಿ ಹಿಟ್ಟಿನ ಬೌಲ್ಗೆ ಹಾಕಿ ನಂತರ ಕಪ್ಪು ಎಳ್ಳು, ಹಾಗೂ ಒಣ ಕೊಬ್ಬರಿ ತುರಿಯನ್ನು ಕೂಡ ಅದೇ ಬೌಲ್ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಚಿಟಿಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೌಲ್ ಅನ್ನು ಬದಿಗೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಸಣ್ಣ ಪಾತ್ರೆ ಇಟ್ಟು ಅದಕ್ಕೆ ಬೆಲ್ಲ ಪುಡಿ ಮಾಡಿಕೊಂಡು ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲದ ಪಾಕ ಮಾಡಬೇಡಿ. ಬೆಲ್ಲ ಕರಗಿದರೆ ಸಾಕು. ನಂತರ ಅದನ್ನು ಜರಡಿ ಹಿಡಿದು ಬೆಲ್ಲದ ನೀರನ್ನು ಅಕ್ಕಿ ಹಿಟ್ಟಿನ ಬೌಲ್ಗೆ ಹಾಕಿ ಮಿಕ್ಸ್ ಮಾಡಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಶಿವರಾತ್ರಿಗೆ ತಂಬಿಟ್ಟು ಉಂಡೆ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
