Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಈ ಹುಳಿ ಮಾಡಲು ತರಕಾರಿ ಬೇಡ..ಈರುಳ್ಳಿಯೂ ಬೇಡ..!! 10 ನಿಮಿಷದಲ್ಲಿ ರೆಡಿ ಮಾಡಬಹುದು!
ಬೇಸಿಗೆಯ ಸಮಯದಲ್ಲಿ ದೇಹಕ್ಕೆ ತಂಪಾಗುವಂತಹ ಖಾದ್ಯಗಳನ್ನೇ ಊಟದ ಜೊತೆಗೆ ಸವಿಯಲು ಮುಂದಾಗುವುದು ನೋಡಬಹುದು. ಅದರಲ್ಲೂ ಊಟದ ಜೊತೆಗೆ ಸುಲಭವಾಗಿ ಮಾಡಬಹುದಾದ ಹಾಗೆ ದೇಹಕ್ಕೆ ತಂಪು ನೀಡುವ ರಸ ಮಾಡಿ ಸವಿಯುವುದು ನೋಡಬಹುದು. ಅದರಲ್ಲೂ ಊಟದ ಜೊತೆಗೆ ತಿಳಿಸಾರಿನಂತಹ ಹುಳಿ ಮಾಡಿದರೆ ರುಚಿ ಅದ್ಭುತವಾಗಿರುತ್ತೆ.
ಹಾಗೆ ನೀವು ಊಟಕ್ಕೆ ಯಾವಾಗಲು ತಿಳಿಸಾರು ಮಾಡಿ ಸವಿಯುತ್ತಿದ್ದರೆ ಬೇಜಾರಾಗಬಹುದು. ಹೀಗಾಗಿ ಈ ತಿಳಿಸಾರಿನ ಬದಲಾಗಿ ಹೊಸ ರೀತಿಯಲ್ಲಿ ಹುಳಿಯೊಂದನ್ನು ಮಾಡಲು ಪ್ರಯತ್ನಿಸಿ. ಅದರಲ್ಲೂ ಹುಣಸೆ ಹಣ್ಣಿನಿಂದ ಮಾಡುವಂತಹ ಹುಳಿ ದೇಹಕ್ಕೆ ತಂಪು ತರುವ ಜೊತೆಗೆ ರುಚಿಯೂ ಕೂಡ ಅದ್ಭುತವಾಗಿರುತ್ತೆ.

ಹಾಗಾದ್ರೆ ಸುಲಭವಾಗಿ ಈ ಹುಣಸೆ ಹಣ್ಣಿನ ಹುಳಿ ಮಾಡುವುದು ಹೇಗೆ? ಊಟದ ಜೊತೆಗೆ ಮಸಾಲೆಭರಿತ ರುಚಿ ನೀಡಬೇಕು ಅಂದ್ರೆ ಯಾವೆಲ್ಲಾ ವಸ್ತುಗಳ ಹಾಕಿ ಈ ಹುಳಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಅದರಲ್ಲೂ ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಿದ್ದರೆ ಅಥವಾ ತರಕಾರಿ ಸಾಂಬಾರ್ ಮಾಡಲು ಸಮಯ ಇಲ್ಲದಿದ್ದರೆ ಈ ಹುಳಿ ಥಟ್ ಅಂತ ಮಾಡಬಹುದು.
ಹುಣಸೆ ಹಣ್ಣಿನ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುಣಸೆ ಹಣ್ಣಿನ ಹುಳಿ ಮಾಡಲು ಬೇಕಾಗುವ ವಸ್ತುಗಳು
- ಹುಣಸೆ ಹಣ್ಣು
- ಟೊಮೊಟೋ
- ಜೀರಿಗೆ- 2
- ಕಾಳು ಮೆಣಸು
- ಗುಂಟೂರು ಮೆಣಸಿನಕಾಯಿ
- ಬೆಳ್ಳುಳ್ಳಿ
- ಎಣ್ಣೆ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಅರಿಶಿಣ ಪುಡಿ
- ಸಾಸಿವೆ
- ಇಂಗು
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಹುಣಸೆ ಹಣ್ಣಿನ ಹುಳಿ ಮಾಡುವ ವಿಧಾನವೇನು?
ಮೊದಲು ಎರಡು ನಿಂಬೆ ಹಣ್ಣಿನ ಗಾತ್ರದಲ್ಲಿ ಹುಣಸೆ ಹಣ್ಣನ್ನು ತೆಗದಿಟ್ಟುಕೊಳ್ಳಿ. ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎರಡು ಕಪ್ ನೀರು ಹಾಕಿ ಅದಕ್ಕೆ ಎರಡು ನಿಂಬೆ ಹಣ್ಣು ಗಾತ್ರದ ಹುಣಸೆ ಹುಳಿಯನ್ನು ಹಾಕಿಕೊಳ್ಳಿ. ಹಾಗೆ ಎರಡು ಟೊಮೆಟೋವನ್ನು ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷ ಬೇಯಲು ಬಿಡಿ. ಚೆನ್ನಾಗಿ ಕುದಿಬಂದು ಬೇಯಬೇಕು.
5 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಜೀರಿಗೆ, ಕಾಳು ಮೆಣಸು ಹಾಕಿ 2 ನಿಮಿಷ ಹುರಿದುಕೊಳ್ಳಿ. ಅದರಿಂದ ಘಮ್ ಎನ್ನುವಂತ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಂಡು ಬೌಲ್ಗೆ ಹಾಕಿಟ್ಟುಕೊಳ್ಳಿ.
ಹಾಗೆ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ರೆಡಿಯಾಗಿಟ್ಟುಕೊಳ್ಳಿ. ಈಗ ಬೆಂದಿರುವ ಟೊಮೆಟೋ ಹಾಗು ಹುಣಸೆಯನ್ನು ನೀರಿನಿಂದ ತೆಗೆದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಆ ಬೇಯಿಸಿದ ನೀರನ್ನು ಎಸೆಯಬೇಡಿ ಹಾಗೆ ಇಟ್ಟುಕೊಳ್ಳಿ. ಈ ಟೊಮೆಟೋವನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಈ ಪೇಸ್ಟ್ ಅನ್ನು ಬೇಯಿಸಿದ ನೀರಿನ ಜೊತೆಗೆ ಸೇರಿಸಿಕೊಂಡು ಅದಕ್ಕೆ ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು, ಕರಿಬೇವು, ಜಜ್ಜಿ ಕೊಂಡಿದ್ದ ಬೆಳ್ಳುಳ್ಳಿ, ಗುಂಟೂರು ಮೆಣಸು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಟೊಮೆಟೋ, ಹುಣಸೆ ಹಣ್ಣಿನ ನೀರನ್ನು ಇದಕ್ಕೆ ಹಾಕಿ, ಹಾಗೆ ಅರಶಿಣ ಪುಡಿ ಹಾಗೂ ಮಿಕ್ಸಿಯಲ್ಲಿ ರುಬ್ಬಿದ್ದ ಜಿರಗೆ ಪದಾರ್ಥ ಕೂಡ ಹಾಕಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಕುದಿಬರಲು ಬಿಡಿ. 5 ನಿಮಿಷ ಕುದಿ ಬಂದರೆ ನಿಮ್ಮ ಮುಂದೆ ಹುಣಸೆ ಹಣ್ಣಿನ ಹುಳಿ ಸಿದ್ಧವಾಗುತ್ತೆ.



Click it and Unblock the Notifications