Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹುಣಸೆ ಹಣ್ಣಿನ ಈ ಹುಳಿ ಮಾಡಿದ್ರೆ ತಟ್ಟೆ ಅನ್ನ ಖಾಲಿಯಾಗುತ್ತೆ..! ಹೊಸ ರೀತಿ ರೆಸಿಪಿ ಇದು..!
ನೀವು ಊಟದ ಜೊತೆಗೆ ಬಗೆ ಬಗೆಯ ಸಾರು, ಹುಳಿ, ಸಾಂಬಾರ್, ರಸಂ ಮಾಡುವುದು ಸಾಮಾನ್ಯ. ಈ ರೀತಿಯ ರುಚಿರಕ ಖಾದ್ಯವಿದ್ದರೆ ಊಟದ ರುಚಿಯೂ ಹೆಚ್ಚಾಗುತ್ತೆ. ಆದ್ರೆ ಮನೆಯಲ್ಲಿ ಕಡಿಮೆ ವಸ್ತುಗಳು ಇದ್ದಾಗ ಅಥವಾ ಕಡಿಮೆ ಸಮಯದಲ್ಲಿ ರುಚಿ ರುಚಿಯಾಗಿ ಯಾವುದಾದರು ಹುಳಿ ಮಾಡಿ ಸವಿಯು ನಿಮ್ಮ ಬಯಕೆ ಇದ್ದರೆ ರಸಂ ಮಾಡಿ ಸವಿಯೋದು ಕಾಮನ್.
ರಸಂನಲ್ಲಿ ಹತ್ತು ಹಲವು ಬಗೆ ನೋಡಬಹುದು. ಅದರಲ್ಲೂ ಕೆಲವೊಂದು ರಸಂ ನಿಮ್ಮ ಬಾಯಲ್ಲಿ ನೀರು ತರಿಸುವಷ್ಟು ರುಚಿಯಾಗಿರುತ್ತವೆ. ಆದ್ರೆ ನಾವಿಂದು ಹುಣಸೆ ಹಣ್ಣಿನ ಹುಳಿ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಹುಣಸೆ ಹಣ್ಣನ್ನು ಬಳಸಿಕೊಂಡು ಈ ರೀತಿ ರಸಂ ಮಾಡಿದರೆ ಅನ್ನದ ಜೊತೆಗೆ ಸವಿಯಲು ಬಹಳ ರುಚಿಯಾಗಿರುತ್ತೆ.

ಹುಣಸೆ ಹಣ್ಣು ಹಾಗೆ ಟೊಮೆಟೋ ಸೇರಿಸಿ ಈ ರಸಂ ಮಾಡಬಹುದು. ಇದನ್ನು ಮಾಡೋದು ಕೂಡ ತುಂಬಾನೆ ಸುಲಭ ಹಾಗೆ ಮನೆಯಲ್ಲಿರುವ ಕಡಿಮೆ ವಸ್ತುಗಳ ಬಳಸಿಕೊಂಡು ಈ ಹುಳಿ ಮಾಡಬಹುದು. ಅನ್ನದ ಜೊತೆಗಂತು ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ರಸಂ ಮಾಡೋದು ಹೇಗೆ? ಹುಣಸೆ ಹಣ್ಣಿನ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹುಣಸೆ ಹಣ್ಣಿನ ಹುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹುಣಸೆಹಣ್ಣು
- ಟೊಮೊಟೋ ಹಣ್ಣು- 2
- ಜೀರಿಗೆ
- ಕಾಳು ಮೆಣಸು
- ಮೆಂತ್ಯ ಕಾಳು
- ದನಿಯಾ ಕಾಳು
- ಬೆಳ್ಳುಳ್ಳಿ
- ಅರಿಶಿಣದ ಪುಡಿ
- ಒಣ ಮೆಣಸಿನಕಾಯಿ -5
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಸಾಸಿವೆ
- ಬೆಲ್ಲ
- ಇಂಗು
- ಉಪ್ಪು
- ಎಣ್ಣೆ
ಹುಣಸೆ ಹಣ್ಣಿನ ಹುಳಿ ಮಾಡುವ ವಿಧಾನವೇನು?
ಮೊದಲು ಎರಡು ಟೊಮೆಟೋವನ್ನು ಮಧ್ಯದಲ್ಲಿ ಭಾಗ ಮಾಡಿಕೊಂಡು ಬೇಯಿಸಿಕೊಳ್ಳಿ. ಅದು ಸ್ವಲ್ಪ ಮೆತ್ತಗಾಗುವಷ್ಟು ಬೇಯಿಸಿದರೆ ಸಾಕು. ನೀರು ಕುದಿಯಲು ಆರಂಭಿಸಿ 5 ನಿಮಿಷ ಆದರೆ ಟೊಮೆಟೋ ಬೇಯುತ್ತದೆ. ನಂತರ ನಿಂಬೆ ಗಾತ್ರದ ಹುಣಸೆ ಹಣ್ಣನ್ನು ಒಂದು ಬೌಲ್ಗೆ ಹಾಕಿ ನೀರು ಹಾಕಿ ನೆನೆಸಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ಗೆ ಜೀರಿಗೆ, ಕಾಳು ಮೆಣಸು, ಮೆಂತ್ಯ ಕಾಳು, ಧನಿಯಾ ಕಾಳು, ಬೆಳ್ಳುಳ್ಳಿ, ಅರಶಿಣ ಪುಡಿ, ಒಣ ಮೆಣಸು, ಕರಿಬೇವು ಹಾಕಿಕೊಂಡು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಈಗ ಬೇಯಿಸಿಕೊಂಡಿರುವ 2 ಟೊಮೆಟೋ ಅನ್ನು ಅದೇ ನೀರಿನಲ್ಲಿ ಕಿವುಚಿ ಪುಡಿ ಮಾಡಿಕೊಳ್ಳಿ. ಅದರ ಸಿಪ್ಪೆ ತೆಗೆದು ಎಸೆಯಿರಿ. ಈಗ ಹುಣಸೆ ಹಣ್ಣನ್ನು ಕೂಡ ಕಿವುಚಿ ಹುಳಿ ನೀರು ತೆಗೆದಿಟ್ಟುಕೊಳ್ಳಿ.
ಈಗ ಟೊಮೆಟೋ ನೀರು ಇರುವ ಪಾತ್ರೆಗೆ ಈ ಹುಣಸೆ ನೀರು ಹಾಕಿ ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು, ಹಾಗೆ ಮಿಕ್ಸಿಯಲ್ಲಿ ರುಬ್ಬಿದ್ದ ಪುಡಿಯನ್ನು ಕೂಡ ಇದಕ್ಕೆ ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಟೊಮೆಟೋ ಹಾಗೂ ಹುಣಸೆ ಹಣ್ಣಿನ ನೀರನ್ನು ಈ ಬಾಣಲೆಗೆ ಹಾಕಿಕೊಳ್ಳಬೇಕು.
ಹಾಗೆ ಇದಕ್ಕೆ ಸ್ವಲ್ಪ ಪುಡಿ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಬೇಕು. ಕುದಿಬಂದ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ರುಚಿ ನೋಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹುಣಸೆ ಹಣ್ಣಿನ ರಸಂ ರೆಡಿಯಾಗುತ್ತದೆ, ಊಟಕ್ಕೆ ಹಾಗೆ ಕುಡಿಯಲು ಕೂಡ ಅದ್ಭುತವಾಗಿರುತ್ತೆ.



Click it and Unblock the Notifications
