Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಖಾರ ಖಾರ ಹುಳಿ ಹುಳಿಯ ಹುಣಸೆ ಹುಳಿ ಗೊಜ್ಜು..! ಎಲ್ಲಾ ಊಟಕ್ಕೂ ಸೈ.!
ಬೆಳಗ್ಗೆ ತಿಂಡಿಗೆ ಯಾವುದಾರು ಚಟ್ನಿ, ಗೊಜ್ಜು, ಪಲ್ಯ ಮಾಡಿ ಸವಿಯುವುದು ಸಾಮಾನ್ಯ. ಏಕೆಂದರೆ ಬೆಳಗ್ಗೆ ತಿಂಡಿಗೆ ಈ ರೀತಿಯಾಗಿ ಯಾವುದಾದರು ಪಲ್ಯ, ಗೊಜ್ಜು ಇದ್ದರೇನೆ ಆ ತಿಂಡಿಗೆ ಮತ್ತಷ್ಟು ರುಚಿ ಬರಲಿದೆ. ಹೀಗಾಗಿ ಕಾಳು ಪಲ್ಯ, ಗೊಜ್ಜು, ಚಟ್ನಿ ಮಾಡಿಯೇ ಮಾಡುತ್ತಾರೆ. ಆದ್ರೆ ನಿತ್ಯ ತಿಂಡಿಗೆ ನಿತ್ಯವೂ ಒಂದೊಂದು ಚಟ್ನಿ, ಮಾಡುವುದು ಅಂದ್ರೆ ಹೆಚ್ಚು ಕೆಲಸ ಹಿಡಿದಂತೆ.
ಆದ್ರೆ ನಾವೊಮ್ಮೆ ಮಾಡಿದ ಗೊಜ್ಜು ಹಲವು ವಾರ ಇಟ್ಟು ಸವಿಯಬಹುದಾಗಿದ್ದರೆ ಎಲ್ಲರು ಸಹ ಮಾಡಲು ಮುಂದಾಗುತ್ತಾರೆ. ಹೀಗಾಗಿ ನಾವಿಂದು ಹುಣಸೆ ಹುಳಿಯ ಖಾರ ಖಾರದ ಗೊಜ್ಜು ಮಾಡುವ ಕುರಿತು ತಿಳಿದುಕೊಳ್ಳೋಣ. ಹುಣಸೆ ಹುಳಿಯ ಈ ಗೊಜ್ಜು ಅತ್ಯಂತ ರುಚಿಕರವಾಗಿರುತ್ತೆ. ಈ ಗೊಜ್ಜನ್ನು ನೀವು ಚಪಾತಿ, ದೋಸೆ, ಇಡ್ಲಿ ಸೇರಿ ಎಲ್ಲಾ ತಿಂಡಿಗ ಜೊತೆಗೂ ಸವಿಯಬಹುದು.

ನಾವಿಂದು ಈ ಹುಣಸೆ ಹುಳಿ ಗೊಜ್ಜು ಮಾಡುವ ಕುರಿತು ತಿಳಿಯೋಣ. ಈ ಗೊಜ್ಜನ್ನು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು, ಹೀಗಾಗಿ ಈ ಗೊಜ್ಜು ನೀವು ಬೇಕಾದಾಗ ಮಾಡಿ ಇಟ್ಟು ಯಾವಾಗ ಬೇಕಾದರೆ ಆಗ ಸವಿಯಬಹುದು. ಹಾಗಾದ್ರೆ ಈ ಗೊಜ್ಜು ಮಾಡುವುದು ಹೇಗೆ? ಹುಣಸೆ ಹುಳಿ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುಣಸೆ ಹುಳಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಹುಣಸೆ ಹುಳಿ
- ಸಾಂಬಾರ್ ಈರುಳ್ಳಿ
- ಬೆಳ್ಳುಳ್ಳಿ
- ಜೀರಿಗೆ
- ಸಾಸಿವೆ
- ಮೆಂತ್ಯ
- ಕರಿಬೇವು
- ಒಣ ಮೆಣಸು
- ಟೊಮೆಟೋ
- ಖಾರದ ಪುಡಿ
- ಧನಿಯಾ ಪುಡಿ
- ಅರಶಿಣ
- ಎಣ್ಣೆ
- ತುಪ್ಪ
- ಬೆಲ್ಲ
- ಉಪ್ಪು
ಹುಣಸೆ ಹುಳಿ ಗೊಜ್ಜು ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಮೂರರಿಂದ ನಾಲ್ಕು ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಅನಂತರ ಇದಕ್ಕೆ ಸಾಸಿವೆ, ಜೀರಿಗೆ, ಮೆಂತ್ಯ ಕಾಳು, ಬೆಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇಡಿ ಸಾಂಬಾರ್ ಈರುಳ್ಳಿಯನ್ನು ಹಾಕಿಕೊಳ್ಳಿ. 10 ಸಾಂಬಾರ್ ಈರುಳ್ಳಿ ಹಾಕಿ ಸಾಂಬಾರ್ ಈರುಳ್ಳಿ ಇಲ್ಲದಿದ್ದರೆ 2 ಸಾಮಾನ್ಯ ಈರುಳ್ಳಿಯನ್ನು ಕತ್ತರಿಸಿಕೊಂಡು ಇದಕ್ಕೆ ಬಳಸಬಹುದು.
ಈಗ 2 ನಿಮಿಷ ಫ್ರೈ ಆದ ಬಳಿಕ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಮಿಕ್ಸಿ ಜಾರ್ಗೆ 2 ಟೊಮೆಟೋ ಹಾಕಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಆ ಪೇಸ್ಟ್ ಅನ್ನು ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ. 3 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಬೇಕು.
ಈಗ ಗಟ್ಟಿಯಾದ ಗೊಜ್ಜು ಕಾಣಿಸುತ್ತೆ. ಈಗ ಒಂದು ನಿಂಬೆ ಹಣ್ಣು ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿ ಅದರಿಂದ ಹುಳಿ ತೆಗೆದು ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಗ್ಲಾಸ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು 5 ನಿಮಿಷ ಕುದಿಬರಲು ಬಿಡಬೇಕು. ಕೊನೆಯದಾಗಿ ಇದಕ್ಕೆ ಸ್ವಲ್ಪ ಬೆಲ್ಲ, ಒಂದು ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿಕೊಂಡರೆ ಸಾಕಾಗುತ್ತದೆ. ನಿಮ್ಮ ಮುಂದೆ ಖಾರ ಖಾರದ ಈ ಹುಣಸೆ ಹುಳಿ ಗೊಜ್ಜು ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.
ಇದನ್ನು ಹಲವು ದಿನಗಳ ಕಾಲ ಇಟ್ಟು ಯಾವುದೇ ತಿಂಡಿ, ಊಟದ ಜೊತೆಗೂ ಕೂಡ ಬಳಸಬಹುದು. ಖಾರ ಖಾರ ಹುಳಿ ಹುಳಿಯಾದ ಇದರ ರುಚಿ ಅದ್ಭುತವಾಗಿರುತ್ತೆ.



Click it and Unblock the Notifications
