Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬೊಂಬಾಟ್ ರುಚಿಯ ತಾಲಿಪಟ್ಟು ಮಾಡಿ ನೋಡಿ..! ವಿಶಿಷ್ಟ ತಿಂಡಿ ರೆಸಿಪಿ ಇಲ್ಲಿದೆ
ಉತ್ತರ ಕರ್ನಾಟಕದ ವಿಶಿಷ್ಟ ಖಾದ್ಯಗಳಲ್ಲಿ ತಾಲಿಪಟ್ಟು ಸಹ ಒಂದು. ಚಪಾತಿ, ರೊಟ್ಟಿ, ಮುದ್ದೆಗಿಂತಲೂ ರುಚಿಕರವೂ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ರುಚಿಕರ ಅಡುಗೆ ಖಾದ್ಯದಲ್ಲಿ ತಾಲಿಪಟ್ಟು ಸಹ ಒಂದಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ತಾಲಿಪಟ್ಟು ಇಷ್ಟ ಪಡದವರೇ ಇಲ್ಲ.
ಊಟದ ಜೊತೆಗೆ ಒಂದು ತಾಲಿಪಟ್ಟು ಇದ್ದರೆ ಆ ಊಟದ ರುಚಿಯೇ ಬೇರೆಯಾಗುತ್ತದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ತಾಲಿಪಟ್ಟು ಖಾದ್ಯ ಮನೆ ಮನೆಯಲ್ಲೂ ಫೇಮಸ್ ಆಗಿದೆ. ಇದನ್ನು ಬೆಳಗ್ಗೆ ತಿಂಡಿಗೆ, ಇಲ್ಲವೆ ಊಟಕ್ಕೂ ಮಾಡಬಹುದು, ಜೊತೆಗೆ ಸಂಜೆಯ ಸ್ನ್ಯಾಕ್ಸ್‌ಗೂ ಹೇಳಿ ಮಾಡಿಸಿದ ತಿಂಡಿ ಇದು.

ಹಾಗಾದ್ರೆ ನಾವಿಂದು ಈ ತಾಲಿಪಟ್ಟು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬ ಕುರಿತು ತಿಳಿದುಕೊಳ್ಳೋಣ.
ತಾಲಿಪಟ್ಟು ಮಾಡಲು ಬೇಕಾಗುವ ವಸ್ತುಗಳು
- ಜೋಳದ ಹಿಟ್ಟು - 1 ಬೌಲ್ (200 ಗ್ರಾಮ್)
- ಗೋಧಿ ಹಿಟ್ಟು- 50 ಗ್ರಾಮ್
- ಕಡಲೆ ಹಿಟ್ಟು- 50 ಗ್ರಾಮ್
- ಜೀರಿಗೆ
- ಅರಶಿಣ
- ಬಿಳಿ ಎಳ್ಳು,
- ಅಜ್ವೈನಾ
- ಹಸಿಮೆಣಸಿನ ಕಾಯಿ - (ಚಿಕ್ಕದಾಗಿ ಹೆಚ್ಚಿಕೊಂಡಿರುವ 3)
- ಖಾರದ ಪುಡಿ
- ಈರುಳ್ಳಿ - 1
- ಕ್ಯಾರೆಟ್
- ಕರಿಬೇವು
- ಕೊತ್ತಂಬರಿ
- ಉಪ್ಪು
- ಎಣ್ಣೆ
ತಾಲಿಪಟ್ಟು ಮಾಡುವ ವಿಧಾನ
ಒಂದು ಪಾತ್ರೆಗೆ ಬೌಲ್‌ನಲ್ಲಿ ಜೋಳದ ಹಿಟ್ಟು ಹಾಕಿ. ಇದಕ್ಕೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಅರಶಿಣ, ಬಿಳಿ ಎಳ್ಳು, ಅಜ್ವೈನಾ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕ್ಯಾರೆಟ್, ಕರಿಬೇವು, ಕೊತ್ತಂಬರಿ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಿಸಿಕೊಳ್ಳಿ. ಹಿಟ್ಟು ನೀರಾದರೆ ಗೋಧಿ ಹಿಟ್ಟು ಅಥವಾ ಜೋಳದ ಹಿಟ್ಟು ಹಾಕಿಕೊಂಡು ಗಟ್ಟಿಯಾಗಿ ಬರುವಂತೆ ಮಾಡಿ. ಹಿಟ್ಟು ಕಲಸಿದ ಬಳಿಕ 10 ನಿಮಿಷ ಹಾಗೆಯೇ ಇಡಿ.
ಇದಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ದೊಡ್ಡ ಗಾತ್ರದ ಉಂಡೆ ಮಾಡಿಕೊಳ್ಳಿ. ಈಗ ಪ್ಲಾಸ್ಟಿಕ್ ಮೇಲೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆ ಇಟ್ಟು ಚೆನ್ನಾಗಿ ತಟ್ಟಿಕೊಳ್ಳಿ. ಕೈಗೆ ಎಣ್ಣೆ ಹಚ್ಚಿಕೊಳ್ಳುತ್ತಾ ತಾಲಿಪಟ್ಟು ತಟ್ಟಿಕೊಳ್ಳಿ. ರೊಟ್ಟಿ ತಟ್ಟಿದಂತೆಯೇ ಇದನ್ನೂ ಸಹ ತಟ್ಟಿಕೊಳ್ಳಿ.
ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಳ್ಳಿ. ಕಾವಲಿ ಕಾದ ಬಳಿಕ ಅದರ ಮೇಲೆ ತಾಲಿಪಟ್ಟು ಹಾಕಿ. ಎರಡೂ ಕಡೆ ತಾಲಿಪಟ್ಟು ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತಾಲಿಪಟ್ಟು ರೆಡಿಯಾಗುತ್ತದೆ. ಇದಕ್ಕೆ ಕಾಯಿ ಚಟ್ನಿ, ಕಡಲೆ ಚಟ್ನಿ, ಹುರಿಗಡಲೆ ಚಟ್ನಿ ಹಾಗೂ ಟೊಮೆಟೋ ಚಟ್ನಿ ಸಹ ರುಚಿ ಹೆಚ್ಚಿಸುತ್ತದೆ. ಇದನ್ನು ಬೆಳಗ್ಗೆಯ ನಾಷ್ಟಕ್ಕೆ ಸುಲಭವಾಗಿ ಮಾಡಿ ನೋಡಿ.
ಇದಕ್ಕೆ ಕಡಲೆ ಬೀಜದ ಚಟ್ನಿ ತುಂಬಾನೆ ರುಚಿ ನೀಡಲಿದೆ. ಈ ರೆಸಿಪಿಯನ್ನು ನಾವು ಮೊದಲೇ ನೀಡಿದ್ದೇವೆ. ಉದ್ದಿನ ಬೇಳೆ, ಕಡಲೆ ಬೀಜ, ಬೆಳ್ಳುಳ್ಳಿ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ಈ ರೀತಿ ನೀರು ಹಾಕಿದ ಮೇಲೆ ಅದಕ್ಕೆ ಹುಣಸೆ ಹುಳಿ ಹಿಂಡುಕೊಳ್ಳಿ ಬಳಿಕ ಉಪ್ಪು ಹಾಕಿ ಕುದಿಯಲು ಬಿಡಿ. 5 ನಿಮಿಷ ಕುದಿಯಲು ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇದಾದ ಬಳಿಕ ತಣ್ಣಗಾಗಲು ಕೆಲ ಹೊತ್ತು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಿದರೆ ಚಟ್ನಿ ರೆಡಿಯಾಗಿರುತ್ತದೆ.



Click it and Unblock the Notifications