Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
10 ನಿಮಿಷದಲ್ಲಿ ರಸಗುಲ್ಲ ಮಾಡಿ..! 2 ವಸ್ತು ಸಾಕು..!
ದೀಪಾವಳಿಯಲ್ಲಿ ಸಹಿ ತಿಂಡಿ ಕಾಮನ್. ಎಲ್ಲರ ಮನೆಯಲ್ಲೂ ತಿಂಡಿ ಮಾಡಿಯೇ ಮಾಡುತ್ತೇವೆ. ಅದ್ರಲ್ಲೂ ವಿಶೇಷ ರುಚಿ ನೀಡುವಂತಹ ಹಾಗೆ ಈ ಸಮಯದಲ್ಲಿ ಮನೆಗೆ ಯಾರಾದರು ಅತಿಥಿಗಳು, ಸ್ನೇಹಿತರು, ನೆರ ಹೊರೆಯವರು ಬಂದಾಗ ಅವರಿಗೆ ನೀಡಲು ಸಹ ಯಾವುದಾದರು ರುಚಿ ರುಚಿಯ ತಿಂಡಿಯನ್ನು ಮಾಡಿಯೇ ಮಾಡಿರುತ್ತೇವೆ.
ದೀಪಾವಳಿಯಲ್ಲಿ ಸಾಮಾನ್ಯವಾಗಿ ಹೋಳಿಗೆ, ಕಜ್ಜಾಯ, ಕರ್ಜಿಕಾಯಿ, ಲಾಡುವಿನಂತಹ ತಿಂಡಿಯನ್ನೇ ಹೆಚ್ಚಾಗಿ ಮಾಡುವುದು ನೋಡಬಹುದು. ಹಾಗೆ ದೀಪಾವಳಿಯಲ್ಲಿ ಮಾಡುವ ಸಿಹಿಯು ಎಲ್ಲರು ಇಷ್ಟಪಟ್ಟು ಸವಿಯುವಂತೆ ಮಾಡುವುದು ನೋಡಬಹುದು. ಹಾಗೆ ನಾವಿಂದು ದೀಪಾವಳಿಗಾಗಿ ನೀವು ರಸಗುಲ್ಲ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ನೀವು ಬೇಕರಿಗಳಲ್ಲಿ ಸಿಗುವಂತಹ ರುಚಿ ರುಚಿಯ ರಸಗುಲ್ಲ ಸವಿದಿರುತ್ತೀರಿ. ಕೆಲವರಿಗೆ ರಸಗುಲ್ಲ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಅಷ್ಟು ರುಚಿಯಾದ ಈ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ದೀಪಾವಳಿಗೂ ಸಹ ಈ ಸಿಹಿ ತಿಂಡಿಯನ್ನು ಮನೆಯಲ್ಲೇ ಮಾಡಿ ಸವಿಯುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ರಸಗುಲ್ಲ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಸಗುಲ್ಲ ಮಾಡಲು ಬೇಕಾಗುವ ವಸ್ತುಗಳು
ಪನೀರ್
ಸಕ್ಕರೆ
ಏಲಕ್ಕಿ
ರಸಗುಲ್ಲ ಮಾಡುವ ಸುಲಭದ ವಿಧಾನವೇನು?
ಮೊದಲು ಪನೀರ್ ಅನ್ನು ತಟ್ಟೆಗೆ ಹಾಕಿಕೊಂಡು ಚೆನ್ನಾಗಿ ಒತ್ತಿಕೊಳ್ಳುತ್ತಾ ಹದ ಮಾಡಿಕೊಳ್ಳಬೇಕು. ಅಂಗಡಿಯಿಂದ ತಂದಿರುವ ಪನೀರ್ ಆಗಲಿ ಅಥವಾ ಮನೆಯಲ್ಲೇ ರೆಡಿ ಮಾಡಿಕೊಂಡ ಪನೀರ್ ಆಗಲಿ, ಎರಡನ್ನೂ ಬೆಣ್ಣೆಯಷ್ಟು ಮೃದುವಾಗಿ ಬರುವಂತೆ ಹದ ಮಾಡಿಕೊಳ್ಳಬೇಕು. ಚೆನ್ನಾಗಿ ಮಸೆದುಕೊಳ್ಳುತ್ತಾ ಇರಬೇಕು.
ನಂತರ ಈ ಪನೀರ್ ಅನ್ನು ಸಣ್ಣ ನಿಂಬೆ ಗಾತ್ರದಂತೆ ಉಂಡೆ ಮಾಡಿಕೊಳ್ಳಿ. ಎಲ್ಲಾ ಉಂಡೆಗಳು ಜಾಮೂನ್ನಂತೆ ಬರಬೇಕು. ಗೆರೆ ಅಥವಾ ಒಡಕುಗಳು ಬರಬಾರದು. ಈ ರೀತಿ ಪನೀರ್ ಅನ್ನು ಉಂಡೆ ಕಟ್ಟಿ ಇಟ್ಟುಕೊಳ್ಳಿ. ಈಗ ಮತ್ತೊಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 1 ಕಪ್ ಸಕ್ಕರೆ ಹಾಕಿಕೊಂಡು ಬಳಿಕ ಎರಡೂವರೆ ಕಪ್ ನೀರು ಹಾಕಿ ಮಿಕ್ಸ್ ಮಾಡುತ್ತಾ ಇರಿ.
ಚೆನ್ನಾಗಿ ಸಕ್ಕರೆ ಕರಗಬೇಕು ಹಾಗೆ ಮಾಡಿಕೊಳ್ಳಿ. ಸಕ್ಕರೆ ಕರಗಲು ಬಿಡಿ. ಹಾಗೆ ಕುದಿಬರಲು ಬಿಡಿ. ಬೇಕಿದ್ದರೆ ಏಲಕ್ಕಿ ಕೂಡ ಈಗ ಹಾಕಿಕೊಳ್ಳಬಹುದು. ಇದು ಕುದಿಯಲು ಆರಂಭಿಸಿದಾಗ ಉರಿ ಸಣ್ಣ ಮಾಡಿ ರಸಗುಲ್ಲವನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಮುಚ್ಚಳ ಮುಚ್ಚಿ 10 ನಿಮಿಷ ಹಾಗೆಯೇ ಬಿಡಿ. ಈ ಪನೀರ್ ಉಂಡೆಗಳು ಮೊದಲಿದ್ದ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾಗುತ್ತವೆ. 10 ನಿಮಿಷ ಬಿಟ್ಟು ನಂತರ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ದೀಪಾವಳಿ ಸಂಭ್ರಮದಲ್ಲಿ ಸವಿಯಲು ರುಚಿ ರುಚಿಯ ರಸಗುಲ್ಲ ರೆಡಿಯಾಗುತ್ತೆ. ನೀವು ಸಹ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
