Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗ್ಯಾಸ್ ಹಚ್ಚದೆಯೇ ರುಚಿ ರುಚಿ ಸ್ವೀಟ್ ಮಾಡಿ..! 5 ನಿಮಿಷ ಸಾಕು!
ಅಕ್ಟೋಬರ್ನಲ್ಲಿ ಸಾಲು ಸಾಲು ಹಬ್ಬಗಳಿವೆ. ದಸರಾ, ದೀಪಾವಳಿಯಂತಹ ಹಬ್ಬಗಳು ಮಾತ್ರವಲ್ಲದೆ, ಸಂಕಷ್ಟಿ, ಏಕಾದಶಿಯಂತಹ ಹಲವು ಹಬ್ಬಗಳು ಈ ತಿಂಗಳು ಬರುವುದು ನೋಡಬಹುದು. ಇನ್ನು ಹಬ್ಬ ಅಂದರೆ ಅಲ್ಲಿ ಸಿಹಿ ತಿಂಡಿಗಳು ಇರಲೇಬೇಕು. ಸಿಹಿ ತಿಂಡಿಗಳ ಮಾಡಿ ಸವಿದರೇನೆ ಹಬ್ಬದ ಕಳೆ ಹೆಚ್ಚಾಗಲಿದೆ. ಹಾಗೆ ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ಸಿಹಿಯನ್ನು ಮಾಡಿ ಮುಗಿಸಿ.
ಇನ್ನು ತಿಂಡಿ ಅಂದ್ರೆ ಸುಲಭವಾಗಿ ಎಲ್ಲರು ಸವಿಯುವಂತೆ ಮಾಡುವುದು ನೋಡಬಹುದು. ಕೆಲವೇ ವಸ್ತುಗಳ ಬಳಸಿಕೊಂಡು ಮಾಡುವ ರುಚಿಕರ ಸಿಹಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ನಾವಿಂದು ಗ್ಯಾಸ್ ಹಚ್ಚದೆಯೇ ಅದ್ಭುತ ರುಚಿಯ ಸ್ವೀಟ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಸ್ವಿಟ್ ಅನ್ನು ಒಲೆ ಹೊತ್ತಿಸದೆ ಮಾಡಬಹುದು.

ನೀವು ಯಾವುದೇ ಅಡುಗೆ ಮಾಡಬೇಕಾದ್ರೂ ಗ್ಯಾಸ್ ಹಚ್ಚಬೇಕು. ಆದ್ರೆ ಈ ಸ್ವೀಟ್ ಅನ್ನು ಒಲೆ ಹೊತ್ತಿಸದೆ ಸುಲಭವಾಗಿ ಮಾಡಿ ಮುಗಿಸಬಹುದು. ಹಾಗಾದ್ರೆ ಈ ಸ್ವಿಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗ್ಯಾಸ್ ಇಲ್ಲದೆ ಸ್ವೀಟ್ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ಗೆ ಅಳತೆ ಕಪ್ನಲ್ಲಿ ಮುಕ್ಕಾಲು ಭಾಗದಷ್ಟು ಸಕ್ಕರೆ ಹಾಕಿ ಒಂದು ಏಲಕ್ಕಿ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ನುಣ್ಣಗೆ ಇರಬೇಕು, ನುಣ್ಣಗಾಗದೆ ಇದ್ದರೆ ಜರಡಿ ಹಿಡಿದು ಮಾಡಿಕೊಳ್ಳಿ. ಈಗ ಈ ಪುಡಿಯನ್ನು ಬೌಲ್ಗೆ ಹಾಕಿ ಇದಕ್ಕೆ 5 ಸ್ಪೂನ್ ಹಾಲು ಹಾಕಿ ಮಿಕ್ಸ್ ಮಾಡಿ. ಇದು ಕ್ರೀಮ್ ರೀತಿ ಬರಬೇಕು ಈ ಹದಕ್ಕೆ ಹಾಕು ಹಾಕಿ ಮಿಕ್ಸ್ ಮಾಡಿ. ಬೆಣ್ಣೆಯಂತಹ ಹದಕ್ಕೆ ಬರಲಿದೆ.
ನಂತರ ಈ ಹದದ ಸಕ್ಕರೆ ಪುಡಿಯನ್ನು ಬದಿಗಿಟ್ಟುಕೊಂಡು ಒಂದು ಮಿಕ್ಸಿ ಜಾರ್ಗೆ 1 ಕಪ್ ಹುರಿಗಡಲೆ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಕೂಡ ಜರಡಿ ಹಿಡಿದು ನುಣ್ಣನೆಯ ಪುಡಿ ಮಾತ್ರ ತೆಗೆದುಕೊಳ್ಳಿ. ಈ ಪುಡಿಯನ್ನು ಕೂಡ ಒಂದು ಬೌಲ್ಗೆ ಹಾಕಿ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೈಯಿಂದಲೇ ಮಿಕ್ಸ್ ಮಾಡಿ, ನಂತರ ಇದಕ್ಕೂ ಕೂಡ ಸ್ವಲ್ಪ ಸ್ವಲ್ಪ ಹಾಲು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು.
ಈ ಹಿಟ್ಟು ತೇವಾಂಶಭರಿತ ಆಗಬೇಕು. ಹುಡಿ ಹುಡಿಯಾಗಿಯೇ ಹಿಟ್ಟು ಇರಲಿ ಈ ಹಿಟ್ಟನ್ನು ಮೊದಲು ಮಾಡಿರುವ ಸಕ್ಕರೆ ಮಿಶ್ರಣಕ್ಕೆ ಹಾಕಿ ಒಮ್ಮೆ ಮಿಕ್ಸ್ ಮಾಡಿ. ಈಗ ಮಿಕ್ಸಿ ಜಾರ್ಗೆ ಡ್ರೈ ಫ್ರೋಟ್ಸ್ ಹಾಕಿ ಪುಡಿ ಮಾಡಿ ಸಹ ಈ ಹಿಟ್ಟುಗಳೊಂದಿಗೆ ಹಾಕಿ ಮಿಕ್ಸ್ ಮಾಡಿ. ಆಗಾಗ ಚೂರು ಹಾಲು ಹಾಕಿ ಮಿಕ್ಸ್ ಮಾಡುತ್ತಾ ಇರಿ.
ಈ ಹಿಟ್ಟು ಹೂರ್ಣದ ಹದಕ್ಕೆ ಬರುವವರೆಗೂ ಚಮಚದಲ್ಲಿ ಹಾಲು ಹಾಕುತ್ತಾ ಮಿಶ್ರಣ ಮಾಡುತ್ತೀರಿ. ಈಗ ಒಂದು ಪ್ಲಾಸ್ಟಿಕ್ ಡಬ್ಬಿ ಅಥವಾ ಸ್ಟೀಲ್ನ ಅಚ್ಚು ತೆಗೆದುಕೊಂಡು ಅದಕ್ಕೆ ತುಪ್ಪ ಇಲ್ಲವೆ ಎಣ್ಣೆ ಸವರಿಕೊಳ್ಳಿ. ಇದು ಆಯಾತಾಕಾರದಲ್ಲಿ ಇರಲಿ. ನಂತರ ಹಿಟ್ಟನ್ನು ಈ ಬೌಲ್ಗೆ ಹಾಕಿಕೊಂಡು ಮೇಲೆ ತಟ್ಟಿ ಸಮತಟ್ಟು ಮಾಡಿಕೊಳ್ಳಿ. ಇದು ಗಟ್ಟಿಯಾಗಲು 1 ಗಂಟೆ ಬಿಡಿ. ಫ್ರಿಡ್ಜ್ನಲ್ಲಾದರೆ 15 ನಿಮಿಷ ಬಿಡಿ. ಇದು ಗಟ್ಟಿಯಾದ ಬಳಿಕ ಕತ್ತರಿಸಿಕೊಳ್ಳಬಹುದು. ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ. ಇದರ ಮೇಲೆ ಡ್ರೈ ಫ್ರೂಟ್ಸ್ ಇಟ್ಟು ಸವಿಯಲು ನೀಡಬಹುದು.
ಇದನ್ನು ಮಾಡಲು ಒಲೆ ಹಚ್ಚುವ ಅಗತ್ಯವೇ ಇಲ್ಲ. ಕೇವಲ 5 ನಿಮಿಷದಲ್ಲಿ ಮಾಡಿ ಸವಿಯಬಹುದು. ಇದರ ರುಚಿ ಒಮ್ಮೆ ನೋಡಿದ್ರೆ ನೀವು ನಿತ್ಯವೂ ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications
