Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ರಾಗಿ ಹಲ್ವಾ ಮಾಡಿ ಸವಿದಿದ್ದೀರಾ? ಎಷ್ಟು ಸುಲಭ ಗೊತ್ತಾ?
ರಾಗಿಯಿಂದ ನೀವು ಹಲವು ಬಗೆಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ರಾಗಿಯಿಂದ ಮಾಡುವ ಮುದ್ದೆ, ಗಂಜಿ, ದೋಸೆ, ಇಡ್ಲಿ, ರೊಟ್ಟಿ ಹೀಗೆ ಹತ್ತು ಹಲವು ರೀತಿಯ ಖಾದ್ಯಗಳ ಸವಿದು ನೋಡಿರುತ್ತೀರಿ. ಹಾಗೆ ರಾಗಿ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಅಂಶವಾಗಿದೆ. ರಾಗಿಯಲ್ಲಿನ ಫೈಬರ್ ಅಂಶವು ಜೀರ್ಣಕ್ರಿಯೆ ಹಾಗೆ ತೂಕ ಇಳಿಸಲು ಸಹಕಾರಿಯಾಗಲಿದೆ.
ಇನ್ನು ಹಲವು ರೀತಿಯಲ್ಲಿ ನೀವು ರಾಗಿಯ ರುಚಿ ರುಚಿ ಖಾದ್ಯ ಸವಿದಿರುತ್ತೀರಿ. ನಾವಿಂದು ರಾಗಿಯಿಂದ ಮಾಡುವಂತಹ ರುಚಿ ರುಚಿಯ ಹಲ್ವಾ ಕುರಿತಾಗಿ ತಿಳಿದುಕೊಳ್ಳೋಣ. ಈ ರುಚಿಕರ ಹಲ್ವಾವನ್ನು ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದು ಬಹಳ ಇಷ್ಟಪಟ್ಟು ಸವಿಯುವುದು ನೋಡಬಹುದು.

ನೀವು ಸಹ ಹಲವು ವಸ್ತುಗಳಿಂದ ಹಲ್ವಾ ಮಾಡಿ ಸವಿದಿರುತ್ತೀರಿ. ಹಲ್ವ ಎಂದರೆ ಹಲವರ ಬಾಯಲ್ಲಿ ನೀರು ಬರಲಿದೆ. ಆದರೆ ಎಂದಾದ್ರು ಈ ರವೆ ಹಲ್ವಾ ಮಾಡಿ ಸವಿದಿದ್ದೀರಾ? ರವೆ ಹಲ್ವಾ ಬಾಯಲ್ಲಿ ಇಟ್ಟರೆ ಕರಗುವಂತೆ ಇರಲಿದೆ. ಹಾಗೆ ವಿಶೇಷವಾಗಿಯೂ ಕಾಣಲಿದೆ. ಇನ್ನು ಅತಿಥಿಗಳು ಬಂದಾಗ, ಶುಭ ಕಾರ್ಯವಿದ್ದಾಗ ಈ ಸಿಹಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ.
ಹಾಗಾದ್ರೆ ಈ ರಾಗಿ ಹಲ್ವಾ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರಾಗಿ
- ಬೆಲ್ಲ
- ತುಪ್ಪ
- ಏಲಕ್ಕಿ ಪುಡಿ
- ಉಪ್ಪು
- ಎಣ್ಣೆ
ರಾಗಿ ಹಲ್ವಾ ಮಾಡುವುದು ಹೇಗೆ?
ಮೊದಲು ರಾಗಿಯನ್ನು ತೊಳೆದು ನೆನೆಸಿಡಬೇಕು. ಒಂದು ರಾತ್ರಿ ಪೂರ್ತಿ ನೆನೆಸಿಡಬೇಕು. ಈಗ ಮಾರನೆ ದಿನ ರಾಗಿಯಿಂದ ನೀರು ಬೇರ್ಪಡಿಸಿ ಬರೀ ರಾಗಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟ್ ಅನ್ನು ಒಂದು ಪಾತ್ರೆಯ ಬಾಯಿಗೆ ಕಾಟನ್ ಬಟ್ಟೆ ಕಟ್ಟಿ ಅದರ ಮೇಲೆ ಹಾಕಬೇಕು.
ಏಕೆಂದರೆ ರಾಗಿಯಿಂದ ಹಾಲನ್ನು ಮಾತ್ರ ನಾವು ಈ ಹಲ್ವಾ ಮಾಡಲು ಬಳಸಬೇಕು. ಹೀಗಾಗಿ ಬಟ್ಟೆ ಮೇಲೆ ಪೇಸ್ಟ್ ಹಾಕಿ ಇಡಿ. ಅದು ನಿಧಾನವಾಗಿ ಪಾತ್ರೆಗೆ ಇಳಿಯುತ್ತಿರಲಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದ ತೆಂಗಿನಕಾಯಿಯನ್ನು ಸಹ ಹಾಕಿಕೊಳ್ಳಿ. ನಂತರ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ರಾಗಿ ಜೊತೆಗೆ ಈ ಕಾಯಿ ಹಾಕಿ ಕೈಯಿಂದ ಹಾಲನ್ನು ಹಿಂಡಿಕೊಳ್ಳಬೇಕು. ಬಟ್ಟೆಯನ್ನು ಚೆನ್ನಾಗಿ ಹಿಂಡಿಕೊಂಡು ಹಾಲನ್ನು ಪಾತ್ರೆಗೆ ಇಳಿಯುವಂತೆ ಮಾಡಿ. ನೀರು ಸಹ ಹಾಕಿ ರಾಗಿಯಿಂದ ಹಾಲು ಹಿಂಡಿಕೊಳ್ಳಿ. ರಾಗಿಯ ಜಿಗುಟನ್ನು ಮತ್ತೆ ಮಿಕ್ಸಿ ಜಾರ್‌ಗೆ ಹಾಕಿ ಮತ್ತೆ ರುಬ್ಬಿ ಹಾಲು ತೆಗೆದುಕೊಳ್ಳಿ. ಈಗ ಹಾಲನ್ನು ಒಂದು ಬೌಲ್‌ನಲ್ಲಿ ಹಾಕಿಡಿ.
ಈಗ ಒಂದು ಕಡಾಯಿ ಒಲೆ ಮೇಲೆ ಒಟ್ಟು ಈಗ ರಾಗಿ ಹಾಲನ್ನು ಅದಕ್ಕೆ ಹಾಕಿಕೊಳ್ಳಿ. ಇನ್ನೊಂದು ಕಡೆ ಸ್ವಲ್ಪ ಬೆಲ್ಲ ಹಾಗೂ ನೀರನ್ನು ಸಹ ಹಾಕಿಕೊಂಡು ಕರಗಲು ಬಿಡಿ. ಈಗ ಕರಗಿದ ಬೆಲ್ಲದ ನೀರನ್ನು ಕಡಾಯಿಯಲ್ಲಿನ ರಾಗಿ ಹಾಲಿಗೆ ಹಾಕಿಕೊಳ್ಳಿ. ನಂತರ ಉರಿಯಲ್ಲಿ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಕೈ ಬಿಡದೆ ಈ ಹಾಲನ್ನು ತಿರುಗಿಸುತ್ತಾ ಇರಬೇಕು. ಚಿಟಿಕೆ ಉಪ್ಪು ಸಹ ಹಾಕಿ ಮಿಕ್ಸ್ ಮಾಡುತ್ತಾ ಇರಿ. ಇದು ಸ್ವಲ್ಪ ಗಟ್ಟಿಯಾಗಲು ಆರಂಭಿಸಿದಾಗ 1 ಸ್ಪೂನ್ ತುಪ್ಪ, ಏಲಕ್ಕಿ ಪುಡಿ ಹಾಕಿಕೊಂಡು ಗಟ್ಟಿಯಾಗಲು ಬಿಡಿ. ಗಟ್ಟಿಯಾಗಲು ಆರಂಭಿಸಿ ಅಂಟು ಅಂಟಾಗಿ ಭಾರವಾದಾಗ ಒಲೆ ಆಫ್ ಮಾಡಿಕೊಳ್ಳಿ. ಈಗ ಇಂದು ಬಟ್ಟಲಿಗೆ ತುಪ್ಪ ಹಚ್ಚಿಕೊಂಡು ಆ ತಟ್ಟೆಗೆ ಹಾಕಿಕೊಂಡು ಹರಡಿಕೊಳ್ಳಿ.
ನಂತರ ಹಲ್ವಾ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರಾಗಿ ಹಲ್ವಾ ರೆಡಿಯಾಗುತ್ತದೆ.



Click it and Unblock the Notifications