ಕಣ್ಣಿನ ದೃಷ್ಟಿ ಸುಧಾರಿಸುವ ಸಿಹಿ ಕುಂಬಳ ಪಲ್ಯ! ಚಪಾತಿಗೆ ಇದು ಬೆಸ್ಟ್ ರೆಸಿಪಿ

Posted By:

ಊಟದೊಂದಿಗೆ ಹಾಗೆ ತಿಂಡಿಯೊಂದಿಗೆ ಸವಿಯಲು ಬಹಳ ರುಚಿ ರುಚಿಯಾದ ಪಲ್ಯ ಮಾಡುವುದು ಕಾಮನ್. ಅದ್ರಲ್ಲೂ ಬಹಳಷ್ಟು ತರಕಾರಿಗಳ ಪಲ್ಯವು ಊಟದೊಂದಿಗೆ ರುಚಿ ಹೆಚ್ಚಿಸಲಿದೆ. ನಾವಿಂದು ಕುಂಬಳಕಾಯಿಯಲ್ಲಿ ಮಾಡುವ ವಿಶೇಷ ರುಚಿಯ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಈ ಸಿಹಿ ಕುಂಬಳ ಪಲ್ಯ ಅಂದ್ರೆ ಊಟದೊಂದಿಗೆ ಹಾಗೆ ತಿಂಡಿಯೊಂದಿಗೆ ಸವಿಯಲು ಈ ಪಲ್ಯ ಮಾಡಬಹುದು.

ಸಿಹಿ ಕುಂಬಳಕಾಯಿಯ ಪಲ್ಯವು ಬಹಳ ರುಚಿಕರವಾಗಿರಲಿದೆ. ಚಪಾತಿ, ಪೂರಿ, ದೋಸೆ ಹೀಗೆ ಎಲ್ಲಾ ತಿನಿಸುಗಳ ಜೊತೆಗೂ ಇದನ್ನು ಸವಿಯಬಹುದು. ಹಾಗಾದ್ರೆ ಸುಲಭವಾಗಿ ಈ ಕುಂಬಳಕಾಯಿಯ ಪಲ್ಯ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಕುಂಬಳಕಾಯಿ ಪಲ್ಯ ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ. ಹಲವು ರೀತಿಯ ಸಮಸ್ಯೆಗಳಿಗೆ ಕುಂಬಳಕಾಯಿಯಲ್ಲಿ ಪರಿಹಾರಗಳಿವೆ.

Sweet Pumpkin Palya

ಕುಂಬಳಕಾಯಿಯಲ್ಲಿ ವಿಟಮಿನ್ A, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ ಹೇರಳವಾಗಿದೆ. ಇದು ಅಧಿಕರಕ್ತದೊತ್ತಡ, ಕಣ್ಣಿನ ದೃಷ್ಟಿ ಸುಧಾರಿಸಲಿದೆ. ಹಾಗೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹ ಇದು ಸಹಕಾರಿಯಾಗಿರಲಿದೆ. ಇದರಲ್ಲಿನ ಅಂಶವು ನಿಮ್ಮ ಕೂದಲು ಉದುರುವಿಕೆಗೆ ನೆರವಾಗಲಿದೆ. ಇನ್ನು ಸಿಹಿ ಕುಂಬಳದಲ್ಲಿ ಮಾಡುವ ಹಲವು ರೀತಿಯ ಖಾದ್ಯಗಳು ಬಹಳ ರುಚಿಕರವಾಗಿರಲಿದೆ.

ನಾವಿಂದು ಸುಲಭವಾಗಿ ಈ ಕುಂಬಳದ ಪಲ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಸಿಹಿ ಕುಂಬಳ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.


ಕುಂಬಳಕಾಯಿಯ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು

  • ಕುಂಬಳಕಾಯಿ
  • ತೆಂಗಿನಕಾಯಿ ತುರಿ
  • ಸಾಸಿವೆ
  • ಈರುಳ್ಳಿ
  • ಹಸಿ ಮೆಣಸು
  • ಕರಿಬೇವು
  • ಕೊತ್ತಂಬರಿ ಸೊಪ್ಪು
  • ಉಪ್ಪು
  • ಎಣ್ಣೆ
  • ಕಡಲೆ ಬೇಳೆ

ಕುಂಬಳಕಾಯಿಯ ಪಲ್ಯ ಮಾಡುವುದು ಹೇಗೆ?

ಮೊದಲು ಸಿಹಿ ಕುಂಬಳವನ್ನು ತೊಳೆದುಕೊಂಡು ನಿಮಗೆ ಬೇಕಾದ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಪಲ್ಯಕ್ಕೆ ಸಣ್ಣಗೆ ಹೆಚ್ಚಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 3 ಸ್ಪೂನ್ ಎಣ್ಣೆ ಸೇರಿಸಿಕೊಂಡು ಅದಕ್ಕೆ ಸಾಸಿವೆ, ಕಡಲೆ ಬೇಳೆ, ಕರಿಬೇವು, ಹಸಿ ಮೆಣಸು ಹಾಗೆ ಈರುಳ್ಳಿಯನ್ನು ಹೆಚ್ಚಿ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಈಗ ಹೆಚ್ಚಿಕೊಂಡಿರುವ ಕುಂಬಳಕಾಯಿಯನ್ನು ಸಹ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಇದಕ್ಕೆ ಉಪ್ಪು ಸಹ ಹಾಕಿ ಮಿಶ್ರಣ ಮಾಡಿ. ಹಾಗೆ ಮುಚ್ಚಳ ಮುಚ್ಚಿ ಬೇಯಲು ಬಿಡಬೇಕು. ಆಗಾಗ ಮಿಕ್ಸ್ ಮಾಡುತ್ತಾ ಇರಬೇಕು. 10 ನಿಮಿಷ ಆದರೂ ಬಿಡಬೇಕು. ಇದು ಮೃದುವಾಗಬೇಕು. ಹಾಗೆ ಇದಕ್ಕೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಸಹ ಸೇರಿಸಿಕೊಂಡು ಮತ್ತೆ ಮಿಕ್ಸ್ ಮಾಡಿ ಚೆನ್ನಾಗಿ ಫ್ರೈ ಆಗಲು ಬಿಡಿ.

ಇದಕ್ಕೆ ನೀರು ಹಾಕದೆಯೇ ಚೆನ್ನಾಗಿ ಪಲ್ಯ ಸಿದ್ದಮಾಡಬೇಕು. ಒಟ್ಟು 15 ನಿಮಿಷಗಳ ಕಾಲ ಕುಂಬಳಕಾಯಿ ಬೇಯಲು ಬಿಡಿ. ಬಹಳ ರುಚಿ ರುಚಿಯಾಗಿ ಬರುವವರೆಗೂ ಬೇಯಿಸಿ. ಕೆಲವರು ಇದಕ್ಕೆ ಬೆಲ್ಲ ಅಥವಾ ಸ್ಪೂನ್ ಸಕ್ಕರೆ ಕೂಡ ಹಾಕಿಕೊಳ್ಳುತ್ತಾರೆ, ನಿಮಗೆ ಸಿಹಿ ಬೇಕಿದ್ದರೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿರುಚಿಯಾದ ಕುಂಬಳಕಾಯಿ ಪಲ್ಯ ಸಿದ್ದವಾಗುತ್ತೆ. ಚಪಾತಿಯೊಂದಿಗೆ ಈ ಪಲ್ಯ ಇದ್ದರೆ ಎಲ್ಲರಿಗೂ ಇಷ್ಟವಾಗುತ್ತೆ.

[ of 5 - Users]
Story first published: Wednesday, February 25, 2026, 13:35 [IST]
X
Desktop Bottom Promotion