Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತೂಕ ಇಳಿಸಬೇಕಾ? ರಾಗಿ ಮತ್ತು ಸಿಹಿ ಗೆಣಸಿನ ಪರೋಟ ಹೀಗೆ ಮಾಡಿ.. ಹೊಟ್ಟೆ ತುಂಬುತ್ತೆ
ಡಯಟ್ ಫ್ರೆಂಡ್ಲಿ ಬ್ರೇಕ್ಫಾಸ್ಟ್. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸಿಹಿ ಗೆಣಸು ಪರೋಟ ರೆಸಿಪಿ. ಈ ಬೆಳಗಿನ ತಿಂಡಿ ತೂಕ ಇಳಿಸುವವರಿಗೆ ಬೆಸ್ಟ್. ಹೌದು, ಆರೋಗ್ಯಕರ ತಿಂಡಿಗಾಗಿ ಸಿಹಿ ಗೆಣಸಿನ ಪರಾಠ (Sweet Potato Paratha) ಉತ್ತಮ ಆಯ್ಕೆಯಾಗಿದೆ. ಇದನ್ನು ಮಧ್ಯಾಹ್ನದ ಊಟಕ್ಕೂ ತೆಗೆದುಕೊಂಡು ಹೋಗಬಹುದು. ಮೊಸರಿನೊಂದಿಗೆ ಸವಿಯಲು ಇದು ಇನ್ನೂ ರುಚಿಯಾಗಿರುತ್ತದೆ. ಸಿಹಿ ಗೆಣಸು ಪರೋಟ ತಯಾರಿಸುವ ಸಂಪೂರ್ಣ ವಿಧಾನ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕರ ಜೀವನಶೈಲಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿದಿನ ಬೇಳೆಕಾಳು, ಅನ್ನ, ರೊಟ್ಟಿ-ಪಲ್ಯ ತಿನ್ನುವ ಬದಲು ವಿಭಿನ್ನ ಹಾಗೂ ಆರೋಗ್ಯಕರವಾದದ್ದನ್ನು ಸೇವಿಸಲು ಬಯಸುತ್ತಾರೆ. ಗ್ಲುಟೆನ್ ಮುಕ್ತ ಆಹಾರಗಳ ಸೇವನೆಯೂ ಈಗ ಹೆಚ್ಚಾಗುತ್ತಿದೆ. ಗೋಧಿ ಹಿಟ್ಟಿನ ಬದಲು ರಾಗಿ, ಜೋಳ ಮತ್ತು ಭತ್ತದ ಹಿಟ್ಟಿಗೆ ಜನರು ಆದ್ಯತೆ ನೀಡುತ್ತಿದ್ದಾರೆ.

ನೀವು ಗ್ಲುಟೆನ್ ಮುಕ್ತ ಮತ್ತು ರುಚಿಕರವಾದ ಆರೋಗ್ಯಕರ ತಿಂಡಿ ಹುಡುಕುತ್ತಿದ್ದರೆ, ರಾಗಿಯ ಸೇರ್ಪಡೆಯೊಂದಿಗೆ ಸಿಹಿ ಗೆಣಸಿನ ಸ್ಟಫಿಂಗ್ ಪರೋಟ ಒಮ್ಮೆ ಟ್ರೈ ಮಾಡಿ. ರಾಗಿ ಮತ್ತು ಸಿಹಿ ಗೆಣಸು ಎರಡೂ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ನಿಮ್ಮ ಬೆಳಗಿನ ಟಿಫನ್ (Breakfast) ಅಥವಾ ಮಕ್ಕಳ ಮಧ್ಯಾಹ್ನದ ಲಂಚ್ಗೆ (lunch box) ಸೂಕ್ತವಾದ ಅಡುಗೆಯಾಗಿದೆ. ಸಿಹಿ ಗೆಣಸಿನ ಪರಾಠವನ್ನು (Sweet Potato Paratha Recipe) ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.
ಸಿಹಿ ಗೆಣಸಿನ ಪರೋಟ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ರಾಗಿ ಹಿಟ್ಟು
• ಸಿಹಿ ಗೆಣಸು (ಬೇಯಿಸಿ)
• ಗೋಧಿ ಹಿಟ್ಟು
• ಕೊತ್ತಂಬರಿ ಸೊಪ್ಪು
• ಈರುಳ್ಳಿ
• ಹಸಿಮೆಣಸು
• ಶುಂಠಿ ಪೇಸ್ಟ್
• ಜೀರಿಗೆ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ತುಪ್ಪ
ಸಿಹಿ ಗೆಣಸಿನ ಪರೋಟ ಮಾಡುವ ವಿಧಾನ
ಮೊದಲು ಸ್ವಲ್ಪ ಸಿಹಿ ಗೆಣಸುಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಈಗ ಕುಕ್ಕರ್ನಲ್ಲಿ 2 ಅಥವಾ 3 ವಿಸಿಲ್ ಬರುವವರೆಗೆ ಬೇಯಿಸಿ. ಬಳಿಕ ಒಂದು ಬಾಣಲೆಯಲ್ಲಿ 2 ಕಪ್ ನೀರನ್ನು ಬಿಸಿ ಮಾಡಿ. ಅದಕ್ಕೆ ತುಪ್ಪ ಹಾಕಿ. ನಂತರ ರಾಗಿ ಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಈಗ ಬೇಯಿಸಿದ ಸಿಹಿ ಗೆಣಸನ್ನು ಸಿಪ್ಪೆ ತೆಗೆದು ಹಿಸುಕಿ. ಇದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ಅವುಗಳನ್ನು ಕೈಗಳಿಂದ ಚಪ್ಪಟೆ ಮಾಡಿ. ಸಿಹಿ ಗೆಣಸಿನ ಸ್ಟಫಿಂಗ್ ತುಂಬಿ ಚಪಾತಿ ರೀತಿ ಲಟ್ಟಿಸಿ.

ಲಟ್ಟಿಸುವಾಗ ಸ್ವಲ್ಪ ಹಿಟ್ಟನ್ನು ಬಳಸಿ, ಇದರಿಂದ ಪರೋಟ ತವಾಗೆ (ಕಾವಲಿ) ಅಂಟಿಕೊಳ್ಳುವುದಿಲ್ಲ. ಈಗ ತವಾ ಬಿಸಿ ಮಾಡಿ, ಪರೋಟ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಪರೋಟ ಇನ್ನೊಂದು ಬದಿಯಲ್ಲಿ ಬೆಂದ ನಂತರ ತುಪ್ಪ ಹಾಕಿ ಬೇಯಿಸಿ. ಇಷ್ಟು ಮಾಡಿದರೆ, ಈಗ ಆರೋಗ್ಯಕರ ಮತ್ತು ಗ್ಲುಟೆನ್ ಮುಕ್ತ ಸಿಹಿ ಗೆಣಸಿನ ಪರೋಟ ಸಿದ್ಧ. ಇದನ್ನು ಮೊಸರು, ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಸವಿಯಬಹುದು.
ಜಿಮ್ ಪ್ರಿಯರಿಗೆ ಉತ್ತಮ ಆಯ್ಕೆ
ಈ ಸಿಹಿ ಗೆಣಸಿನ ಪರೋಟ ವರ್ಕ್ಔಟ್ ಮಾಡುವವರಿಗೆ ಅಥವಾ ಜಿಮ್ ಪ್ರಿಯರಿಗೆ ಸೂಕ್ತವಾಗಿದೆ. ಇದನ್ನು ವ್ಯಾಯಾಮದ ನಂತರ ಸೇವಿಸಬಹುದು. ಇದರಲ್ಲಿ ಅಧಿಕ ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇರುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಅಲ್ಲದೆ, ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ.



Click it and Unblock the Notifications
