Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಕುರುಂಕುರುಂ ಸಿಹಿಗೆಣಸಿನ ಚಿಪ್ಸ್: ಮಾಡುವುದು ಬಲು ಸುಲಭ, ಮಕ್ಕಳು ಇಷ್ಟಪಟ್ಟು ತಿಂತಾರೆ
ಸಿಹಿ ಗೆಣಸು ಚಳಿಗಾಲದಲ್ಲಿ ತಿನ್ನಲೇಬೇಕಾದ ಆಹಾರವಾಗಿದೆ. ಚಳಿಗಾಲದಲ್ಲಿ ದೇಹವನ್ನು ಸಂರಕ್ಷಣೆ ಮಾಡುತ್ತದೆ. ಇದನ್ನು ಬೇಯಿಸಿ ತಿನ್ನಬಹುದು, ಹಸಿ ತಿನ್ನಬಹುದು, ಬೇಕಾದ ರುಚಿಯಲ್ಲಿ ತಿನ್ನಬಹುದು, ಮಕ್ಕಳ ಬೆಳವಣಿಗೆಗೆ ಅಂತೂ ತುಂಬಾ ಒಳ್ಳೆಯದು.
ಬೇಯಿಸಿ ಕೊಟ್ಟರೆ ಒಂದು ದಿನ ತಿಂತಾರೆ ಮತ್ತೆ ಬೇಡ ಅಂತಾರೆ, ಅದೇ ನೀವು ಚಿಪ್ಸ್ ಮಾಡಿದರೆ ಅಮ್ಮಾ ಚಿಪ್ಸ್ ಕೊಡು ಅಂತ ಕೇಳಿ ತಿಂತಾರೆ. ಈ ಸಿಹಿ ಗೆಣಸಿನ ಚಿಪ್ಸ್ ಆಲೂಗಡ್ಡೆ ಚಿಪ್ಸ್ಗಿಂತ ತುಂಬಾ ರುಚಿಯಾಗಿರುತ್ತದೆ, ಬನ್ನಿ ಈ ಸಿಹಿ ಗೆಣಸಿನ ಚಿಪ್ಸ್ ಮಾಡುವ ಸುಲಭ ವಿಧಾನ ತಿಳಿಯೋಣ..'

ಸಿಹಿ ಗೆಣಸು
ಎಣ್ಣೆ
ಉಪ್ಪು
ಖಾರದ ಪುಡಿ 1/2 ಚಮಚ
ಚಿಟಿಕೆಯಷ್ಟು ಚಾಟ್ ಮಸಾಲ
ಚಿಟಿಕಯಷ್ಟು ಜೀರಿಗೆ ಪುಡಿ
ಮಾಡುವ ವಿಧಾನ
- ಸಿಹಿ ಗೆಣಸು ಚೆನ್ನಾಗಿ ತೊಳೆಯಿರಿ, ಅದರ ಮಣ್ಣು ಸಂಪೂರ್ಣ ಹೋಗಬೇಕು, ನಂತರ ಸಿಪ್ಪೆ ಸಹಿತ ವೃತ್ತಾಕಾರವಾಗಿ ಕಟ್ ಮಾಡಿ.
- ಸಿಪ್ಪೆ ಬೇಡ ಎಂದರೆ ತೆಗೆದು ಕತ್ತರಿಸಬಹುದು, ಆದರೆ ಸಿಪ್ಪೆಯಲ್ಲಿಯೂ ತುಂಬಾ ಪೋಷಕಾಂಶ ಇರುವುದರಿಂದ ಸಿಪ್ಪೆ ಸಹಿತ ಕತ್ತರಿಸಿ
- ಅದನ್ನು ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ (ಒಂದು ಕೆಜಿ ಸಿಹಿ ಗೆಣಸಿಗೆ ಅರ್ಧ ಚಮಚಕ್ಕಿಂತ ಸ್ವಲ್ಪ ಕಡಿಮೆಯೇ ಉಪ್ಪು ಸೇರಿಸಿ ಮಿಕ್ಸ್ ಮಾಡಿ)
- ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ಮೇಲೆ ಕತ್ತರಿಸಿದ ಸಿಹಿ ಗೆಣಸು ಹಾಕಿ ಫ್ರೈ ಮಾಡಿ
- ಬಳಿಕ ತಟ್ಟೆಗೆ ಹಾಕಿ ಮೆಣಸಿನ ಪುಡಿ, ಚಾಟ್ ಮಸಾಲ ಪುಡಿ, ಜೀರಿಗೆ ಪುಡಿ ಉದುರಿಸಿ ಮಿಕ್ಸ್ ಮಾಡಿ, ನಂತರ ಸವಿದು ನೋಡಿ ರುಚಿ ಸೂಪರ್ ಆಗಿರುತ್ತದೆ.
ಸಲಹೆ: ಮಕ್ಕಳಿಗೆ ನೀಡುವಾಗ ಮಸಾಲೆ ನೀಡಬೇಕಾಗಿಲ್ಲ ಬರಿ ಉಪ್ಪು ಮಾತ್ರ ಸೇರಿಸಿ
ಚಿಪ್ಸ್ ಮಾಡಿಡಬಹುದು
ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಸಂಜೆ ಸ್ನ್ಯಾಕ್ಸ್ಗೆ
ಸವಿಯಬಹುದು.
ಎಣ್ಣೆ ಬೇಡ ಎಂದಾದರೆ
ಕೆಲವರಿಗೆ ಎಣ್ಣೆಯಲ್ಲಿ ಫ್ರೈ ಮಾಡಿ ತಿಂದರೆ ಮೈ ತೂಕ ಹೆಚ್ಚಾಗುತ್ತೆ ಎಂಬ
ಟೆನ್ಷನ್ ಇರುತ್ತದೆ ಅಂಥವರು ಮೈಕ್ರೋವೇವ್ನಲ್ಲಿ ಟ್ರೈ ಮಾಡಬಹುದು.
ನೀವು ಮೈಕ್ರೋವೇವ್ 250 ಡಿಗ್ರಿ F (121 C) ಪ್ರೀಹೀಟ್ ಮಾಡಿ
ನಂತರ ಓವನ್ ಗ್ರಿಲ್ಡ್ (Rack) ಇಡಿ
ನೀವು ಚಿಪ್ಸ್ ಅನ್ನು ತೆಳುವಾಗಿ ಚಿಕ್ಕದಾಗಿ ಕತ್ತರಿಸಬೇಕು.
ನೀವು Rack ಮೇಲಿಟ್ಟು ಆಲೀವ್ ಎಣ್ಣೆ ಸವರಿ ಬೇಯಿಸಿ, 10 ನಿಮಿಷಕ್ಕೊಮ್ಮೆ ಚೆಕ್
ಮಾಡಿ ಚಿಪ್ಸ್ ರೆಡಿ ಎಂದು ಕಂಡಾಗ ತೆಗಿಯಿರಿ
ಇಷ್ಟು ಮಾಡಿದರೆ ಕ್ರಿಸ್ಪಿ ಚಿಪ್ಸ್ ರೆಡಿ.
ಇತರ ಸಹೆ:
ಸಿಹಿ ಗೆಣಸು ಒಂದೇ ದಪ್ಪದಲ್ಲಿ ಕತ್ತರಿಸಿದರೆ ಒಳ್ಳೆಯದು
100 ಗ್ರಾಂ ಸಿಹಿ ಗೆಣಸಿನಲ್ಲಿ ಸಿಗುವ ಪೋಷಕಾಂಶ
ಕ್ಯಾಲೋರಿ 248
ಕಾರ್ಬೋಹೈಡ್ರೇಟ್ಸ್ 30. 2ಗ್ರಾಂ
ಪ್ರೊಟೀನ್ 2. 4ಗ್ರಾಂ
ಕೊಬ್ಬಿನಂಶ 13.6ಗ್ರಾಂ
ಸ್ಯಾಷುರೇಟಡ್ 1,9 ಗ್ರಾಂ
ಪಾಲಿಸ್ಯಾಚುರೇಟಡ್ ಕೊಬ್ಬಿನಂಶ 1.44 ಗ್ರಾಂ
ಮೋನೋಸ್ಯಾಚುರೇಟಡ್ ಕೊಬ್ಬಿನಂಶ 9.85ಗ್ರಾಂ
ಸೋಡಿಯಂ 83ಗ್ರಾಂ
ಪೊಟಾಷ್ಯಿಯಂ 506 ಮಿಗ್ರಾಂ
ನಾರಿನಂಶ 4.5ಗ್ರಾಂ
ವಿಟಮಿನ್ ಎ
ವಿಟಮಿನ್ ಸಿ
ಕ್ಯಾಲ್ಸಿಯಂ
ಕಬ್ಬಿಣದಂಶವಿದೆ



Click it and Unblock the Notifications