Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಮಾಮೂಲಿ ಅಲ್ಲ ಸಿಹಿ ಗೆಣಸಿನ ಅದ್ಭುತ ರುಚಿಯ ಚಪಾತಿ: ಥಟ್ ಅಂತ ಮಾಡಿಕೊಳ್ಳಿ!
ನೀವು ಬೆಳಗ್ಗೆ ತಿಂಡಿಗೆ ಯಾವ ಖಾದ್ಯ ಮಾಡಬೇಕು ಎಂಬ ಗೊಂದಲದಲ್ಲೇ ಸಮಯ ಕಳೆಯುವುದು ನೋಡಬಹುದು. ಅದ್ರಲ್ಲೂ ಬೆಳಗ್ಗೆ ಸಮಯದಲ್ಲಿ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬೇಕು ಅನ್ನೋದೇ ಬಹಳ ಗೊಂದಲ ತರುವ ವಿಚಾರ. ಆದ್ರೆ ಸುಲಭವಾಗಿ ಮಾಡಿ ಮುಗಿಸಬಹುದಾದ ತಿಂಡಿಗಳ ಸಾಲಿನಲ್ಲಿ ಚಪಾತಿ ಕೂಡ ಒಂದು. ಬಹಳ ಸುಲಭವಾಗಿ ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ತಿಂಡಿಯೂ ಇದಾಗಿದೆ.
ಹಾಗೆ ಚಪಾತಿಯಲ್ಲಿ ಬಹಳಷ್ಟು ವಿಧಗಳಿವೆ. ಹಲವು ವಸ್ತುಗಳ ಸೇರಿಸಿ ಮಾಡುವ ಚಪಾತಿ ಆರೋಗ್ಯದ ದೃಷ್ಟಿಯಲ್ಲು ಬಹಳ ಉತ್ತಮವಾಗಿರಲಿದೆ. ನಾವು ಸೊಪ್ಪು, ತರಕಾರಿ ಹಾಗೆ ಅನೇಕ ವಸ್ತುಗಳನ್ನು ಸೇರಿಸಿ ಚಪಾತಿ ಮಾಡಿ ಸವಿಯೋದು ನೋಡಬಹುದು. ಹಾಗೆ ಇಂತಹ ವಿಭಿನ್ನ ಚಪಾತಿಗಳ ಸಾಲಿನಲ್ಲಿ ನಾವಿಂದು ಸಿಹಿ ಗೆಣಸು ಬಳಸಿ ಮಾಡುವ ಚಪಾತಿ ಕುರಿತು ಹೇಳಲಿದ್ದೇವೆ.

ನೀವು ಸಿಹಿ ಗೆಣಸನ್ನು ಹಲವು ರೀತಿಯಲ್ಲಿ ಸವಿದಿರುತ್ತೀರಿ. ಅದನ್ನು ಬೇಯಿಸಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಅಂಶ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ನಾರಿನಾಂಶ, ವಿಟಮಿನ್ ಎ, ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಉತ್ತಮ ಅಂಶಗಳ ಹೊಂದಿದೆ.
ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಹಾಗೆ ನಾರಿನಾಂಶ ಹೊಂದಿರುವ ಕಾರಣ ಜೀರ್ಣಕ್ರಿಯೆಗೂ ಇದು ಬಹಳ ಪ್ರಯೋಜನಕಾರಿಯಾಗಲಿದೆ. ನಾವಿಂದು ಈ ಸಿಹಿ ಗೆಣಸು ಬಳಸಿ ಮಾಡುವ ಚಪಾತಿ ಕುರಿತು ತಿಳಿದುಕೊಳ್ಳೋಣ. ಗೆಣಸಿನ ಚಪಾತಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೆಣಸಿನ ಚಪಾತಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸಿಹಿ ಗೆಣಸು
- ಜೀರಿಗೆ ಪುಡಿ
- ಖಾರದ ಪುಡಿ
- ಅರಶಿಣ
- ಇಂಗು
- ಎಣ್ಣೆ
- ಉಪ್ಪು
- ಗೋಧಿ ಹಿಟ್ಟು
ಗೆಣಸಿನ ಚಪಾತಿ ಮಾಡುವ ವಿಧಾನವೇನು?
ಮೊದಲು ಗೆಣಸನ್ನು ಬೇಯಿಸಿಕೊಳ್ಳಬೇಕು. ಸಣ್ಣ ಸಣ್ಣದಾಗಿ ಎರಡು ತುಂಡುಗಳಾಗಿ ಮಾಡಿ ಬೇಯಿಸಿಕೊಳ್ಳಿ. ಗೆಣಸು ಬೆಂದ ಬಳಿಕ ಗೆಣಸಿನ ಸಿಪ್ಪೆ ತೆಗೆದು ಒಂದು ಬೌಲ್ೆ ಹಾಕಿ ಪುಡಿ ಮಾಡಿಕೊಳ್ಳಬೇಕು.
ಈಗ ಇನ್ನೊಂದು ಬೌಲ್ನಲ್ಲಿ 1 ಕಪ್ ಗೋಧಿ ಹಿಟ್ಟು, ಖಾರದ ಪುಡಿ, ಜಿರಿಗೆ ಪುಡಿ, ಗರಂ ಮಸಾಲ, ಅರಶಿಣ, ಇಂಗು, ಉಪ್ಪು ಸಹ ಹಾಕಿ ಡ್ರೈ ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪವೇ ಗೆಣಸಿನ ಹಿಟ್ಟು ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಹದ ಮಾಡಿಕೊಳ್ಳಿ. ಮಾಮೂಲಿ ಚಪಾತಿ ಮಾಡಲು ಬೇಕಾಗುವಂತಹ ಹದದಂತೆಯೇ ಈ ಹಿಟ್ಟು ಸಹ ಬರಬೇಕು. ಆ ರೀತಿ ಕಲಸಿಕೊಳ್ಳಿ.
ನಂತರ 1 ಸ್ಪೂನ್ ಎಣ್ಣೆ ಹಾಕಿ ಹಿಟ್ಟನ್ನು ಹದ ಮಾಡಿಕೊಳ್ಳಿ. ತೆಳುವಾದರೆ ಮತ್ತೆ ಹಿಟ್ಟು ಹಾಕಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಇಟ್ಟು ಮುಚ್ಚಳ ಮುಚ್ಚಿ 20 ನಿಮಿಷ ಬಿಡಿ.
ಅನಂತರ ಮತ್ತೆ ಒಮ್ಮೆ ಹಿಟ್ಟನ್ನು ಹದ ಮಾಡಿಕೊಂಡು ಚಪಾತಿ ಲಟ್ಟಿಸಿಕೊಳ್ಳಿ. ಚಪಾತಿಯನ್ನು ಗಟ್ಟಿಯಾಗಿ ಒತ್ತಿಕೊಳ್ಳುತ್ತಾ ಮಾಡಬೇಡಿ. ನಿಧಾನವಾಗಿ ಮದುವಾಗಿ ಲಟ್ಟಿಸಿಕೊಂಡು ಕಾವಲಿ ಮೇಲೆ ಹಾಕಿ ಎರಡೂ ಕಡೆ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸಿಹಿ ಗೆಣಸಿನ ಈ ಚಪಾತಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಒಂದು ದಿನ ಮಾಡಿ ಸವಿದರೆ ಪದೇ ಪದೇ ಸವಿಯೋದು ಖಚಿತ.



Click it and Unblock the Notifications