Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪಿತೃಪಕ್ಷಕ್ಕೆ 10 ನಿಮಿಷದಲ್ಲಿ ರುಚಿ ರುಚಿಯ ಕಜ್ಜಾಯ: ಮಾಡೋದು ಹೇಗೆ?
ಹಬ್ಬದ ಸಮಯದಲ್ಲಿ ನೀವು ರುಚಿ ರುಚಿಯ ತಿಂಡಿಯನ್ನು ಮಾಡಿ ಸವಿದಿರುತ್ತೀರಿ, ಅದ್ರಲ್ಲೂ ವಿಶೇಷ ಬಗೆಯ ತಿಂಡಿಗಳನ್ನು ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಹಬ್ಬದ ಸಮಯದಲ್ಲಿ ಸಹಿ ತಿಂಡಿ ಮಾಡುವುದು ಕಾಮನ್. ಶುಭ ದಿನಗಳಲ್ಲಿ ಮನೆಗೆ ಅತಿಥಿಗಳು ಬರುವ ಸೂಚನೆ ಇದ್ದಾಗಲು ಕೂಡ ನೀವು ಹೊಸ ರೀತಿಯ ತಿಂಡಿಗಳ ಮಾಡಿ ಸವಿಯೋದು ನೋಡಿರಬಹುದು.
ಹಾಗೆ ಈಗ ಪಿತೃಪಕ್ಷದ ಸಮಯದಲ್ಲಿ ಎಲ್ಲರು ಸವಿಯುವಂತಹ ತಿಂಡಿ ಅಂದರೆ ಕಜ್ಜಾಯ. ಪೂರ್ವಜರಿಗೆ ಬಹಳ ಇಷ್ಟದ ಸಿಹಿ ತಿಂಡಿ ಈ ಕಜ್ಜಾಯ ಆಗಿರಲಿದೆ. ಮಕ್ಕಳು, ಹಿರಿಯರು ಅನ್ನದೇ ಅಲ್ಲರು ಬಹಳ ಇಷ್ಟಪಟ್ಟು ಸವಿಯುವಂತಹ ಖಾದ್ಯ ಅಂದ್ರೆ ಅದು ಈ ಕಜ್ಜಾಯವಾಗಿದೆ. ನಾವಿಂದು ಬಹಳ ಸುಲಭವಾಗು ಕಜ್ಜಾಯ ಸವಿಯುವ ಕುರಿತು ತಿಳಿದುಕೊಳ್ಳೋಣ.

ಅದ್ರಲ್ಲೂ ಪಿತೃ ಪಕ್ಷದಲ್ಲಿ ಬಹುತೇಕರ ಮನೆಯಲ್ಲಿ ಈ ತಿಂಡಿ ಮಾಡುವುದು ಕಾಮನ್ ಆಗಿರಲಿದೆ. ಹಾಗೆ ಪೂರ್ವಜರ ಇಷ್ಟದ ಖಾದ್ಯ ಮಾಡುವ ಮಂದಿ ಇದನ್ನು ಕೂಡ ಮಾಡಿಯೇ ಮಾಡುತ್ತಾರೆ. ಆದ್ರೆ ಇದನ್ನು ಸುಲಭವಾಗಿ ಮಾಡುವ ವಿಧಾನ ಹಲವರಿಗೆ ತಿಳಿದಿರೋದಿಲ್ಲ. ನಾವಿಂದು ಸುಲಭ ವಿಧಾನದಲ್ಲಿ ಈ ಕಜ್ಜಾಯ ಮಾಡುವ ಕುರಿತು ತಿಳಿಯೋಣ.
ಕೇವಲ 10 ನಿಮಿಷದೊಳಗೆ ಈ ಕಜ್ಜಾಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಹಾಗೆ ಎಷ್ಟು ಸಮಯದಲ್ಲಿ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಜ್ಜಾಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೆಲ್ಲದ ಪುಡಿ - 1 ಕಪ್
- ತುಪ್ಪ - 1 ಚಮಚ
- ಬಿಳಿ ಎಳ್ಳು - 1 ಚಮಚ
- ಏಲಕ್ಕಿ ಪುಡಿ - 1/2 ಚಮಚ
- ಅಕ್ಕಿ ಹಿಟ್ಟು - 1 ಕಪ್
- ಗೋಧಿ ಹಿಟ್ಟು - 1/4 ಕಪ್
- ಅಡುಗೆ ಎಣ್ಣೆ
ಕಜ್ಜಾಯ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 1 ಕಪ್ ಬೆಲ್ಲ ಹಾಕಿ ಬಳಿಕ 1 ಕಪ್ ನೀರು ಹಾಕಿಕೊಂಡು ಕರಗಲು ಬಿಡಿ. ಪಾಕ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ತುಪ್ಪ, ಏಲಕ್ಕಿ ಪುಡಿ, ಬಿಳಿ ಎಳ್ಳು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ 1 ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಕಾಲು ಕಪ್ ಗೋಧಿ ಹಿಟ್ಟು ಹಾಕಿಕೊಂಡು ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಗಂಟು ಇಲ್ಲದಂತೆ ಮಿಕ್ಸ್ ಮಾಡಿ.
6 ನಿಮಿಷಗಳ ಕಾಲ ಕೈ ಬಿಡದೆ ಮಿಕ್ಸ್ ಮಾಡಬೇಕು. ಇದು ಸ್ವಲ್ಪ ಗಟ್ಟಿಯಾಗಿ ಪಾತ್ರೆಯಿಂದ ಬರುವಂತೆ ಹದಕ್ಕೆ ಬರಬೇಕು. ನಂತರ ಒಲೆ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ. ಹಾಗೆ 1 ಸ್ಪೂನ್ ತುಪ್ಪ ಹಾಕಿಕೊಂಡು ಹಿಟ್ಟನ್ನು ಮತ್ತೆ ಹದ ಮಾಡಿಕೊಳ್ಳಿ. ಈಗ ಒಂದು ಪ್ಲಾಸ್ಟಿಕ್ಗೆ ಎಣ್ಣೆ ಹಚ್ಚಿಕೊಳ್ಳಿ. ಹಾಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ.
ಪ್ಲಾಸ್ಟಿಕ್ ಮೇಲೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕಜ್ಜಾಯ ತಟ್ಟಿಕೊಂಡು ನಂತರ ಕಾದ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಎರಡೂ ಕಡೆ ಬೇಯಿಸಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಕಜ್ಜಾಯ ರೆಡಿಯಾಗುತ್ತದೆ. ಕೆಲವೊಮ್ಮೆ ಉಬ್ಬಿ ಬರಲಿದೆ. ಇದರ ಒಳಗಿನ ಹಿಟ್ಟು ಕೂಡ ಬೇಯಬೇಕು. ನಂತರ ಜರಡಿಯಲ್ಲಿ ಎಣ್ಣೆ ಇಳಿಯಲು ಬಿಟ್ಟು ನಂತರ ಸವಿಯಬಹುದು. ಈ ರುಚಿಯಲ್ಲಿ ನೀವು ಕೂಡ ಸುಲಭವಾಗಿ ಇದನ್ನು ಮಾಡಿ ನೋಡಿ.



Click it and Unblock the Notifications
