Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಹಬ್ಬಕ್ಕೆ ರುಚಿ ರುಚಿಯ ಕಜ್ಜಾಯ ಮಾಡೋದು ಹೇಗೆ? ಈ ಸಿಹಿ ಸವಿದು ನೋಡಿ
ಹಬ್ಬದ ದಿನಗಳು ಹತ್ತಿರವಾಗುತ್ತಿದ್ದಂತೆ ಸಿಹಿ ತಿಂಡಿಗಳ ಮಾಡಿಯೇ ಮಾಡುತ್ತಾರೆ. ಆದ್ರೆ ಯಾವ ತಿಂಡಿ ಮಾಡಬೇಕು ಅನ್ನೋದು ಎಲ್ಲರ ಪ್ರಶ್ನೆಯಾಗಿರುತ್ತೆ. ಅದ್ರಲ್ಲೂ ಈಗ ಗಣೇಶನ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆ ಯಾವುದಾದರು ಒಂದು ಸಿಹಿ ಮಾಡಿಯೇ ಮಾಡುತ್ತೇವೆ. ಆದ್ರೆ ಹಬ್ಬದ ದಿನವಂತು ಸಿಹಿ ಮಾಡಲು ಸಾಧ್ಯವಿಲ್ಲ ಆದ್ರೆ ಹಬ್ಬಕ್ಕಿಂತ ಮುನ್ನ ದಿನವೇ ಯಾವುದಾದರು ಸಿಹಿ ತಿಂಡಿ ಆ ದಿನ ಸವಿಯಬಹುದು.
ಇಂತಹ ಹಬ್ಬಕ್ಕಾಗಿಯೇ ನಾವು ಕಜ್ಜಾಯ ಮಾಡಿ ಸವಿಯೋಣ. ಕಜ್ಜಾಯ ಅತ್ಯಂತ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿ ಮಾಡಬಹುದಾದ ಸಿಹಿ ತಿಂಡಿ, ಅದ್ರಲ್ಲೂ ಗಣೇಶನ ಹಬ್ಬದಲ್ಲಿ ಈ ತಿಂಡಿ ಮಾಡೋದು ಹೆಚ್ಚು. ಇದರ ರುಚಿಗೆ ಮತ್ತೆ ಮತ್ತೆ ಮಾಡಬೇಕು ಅನಿಸೋದು ಪಕ್ಕಾ. ಹಾಗಾದ್ರೆ ನಾವಿಂದು ಈ ಕಜ್ಜಾಯ ಮಾಡುವುದು ಹೇಗೆ? ಇದಕ್ಕೆ ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನೋಡೋಣ.

ಕಜ್ಜಾಯ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು -2 ಕಪ್
- ಬೆಲ್ಲ - 1 ಕಪ್
- ಬಿಳಿ ಎಳ್ಳು
- ಸೋಡಾ
- ಎಣ್ಣೆ
ಕಜ್ಜಾಯ ಮಾಡುವುದು ಹೇಗೆ?
ಒಂದು ಬೌಲ್‌ನಲ್ಲಿ 2 ಕಪ್ ಅಕ್ಕಿ ಅದನ್ನು ಚೆನ್ನಾಗಿ ತೊಳೆದು ನೆನೆಸಿಡಬೇಕು. 10 ಗಂಟೆಗಳ ಕಾಲ ನೆನೆಸಿಡಬೇಕು. ಬಳಿಕ ಮಾರನೆ ದಿನ ನೀರು ತೆಗೆದು ಅಕ್ಕಿಯನ್ನು ಒಂದು ಬಟ್ಟೆ ಮೇಲೆ ಒಣಗಿಸಲು ಹಾಕಿ. ನೀರಿನ ಅಂಶ ಚೆನ್ನಾಗಿ ಹೋಗಬೇಕು. ಅಕ್ಕಿ ಒಣಗಿಸಲು ಬಿಸಿಲಿನಲ್ಲೂ ಇಡಬಹುದು. ಬಿಸಿಲಿನಲ್ಲಿ ಇಟ್ಟರೆ ಅರ್ಧ ಗಂಟೆ ಸಾಕಾಗುತ್ತದೆ.
ಈಗ ಈ ಅಕ್ಕಿಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಎಷ್ಟು ಸಾದ್ಯವೋ ಅಷ್ಟು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಮತ್ತೆ ಈ ಹಿಟ್ಟನ್ನು ಜರಡಿ ಹಿಡಿದು ನುಣ್ಣಗೆ ಪೌಡರ್‌ನಂತಿರುವ ಹಿಟ್ಟನ್ನು ಎತ್ತಿಟ್ಟುಕೊಳ್ಳಿ. ಈಗ ಒಂದು ಪಾತ್ರೆ ಇಟ್ಟು ಅದಕ್ಕೆ 1 ಕಪ್ ಬೆಲ್ಲ ಹಾಕಿ ಬೆಲ್ಲ ಕರಗಲು ಸ್ವಲ್ಪ ನೀರು ಸಹ ಹಾಕಿಕೊಂಡು ಕರಗಲು ಬಿಡಿ.
ಬೆಲ್ಲ ಚೆನ್ನಾಗಿ ಪಾಕ ಬರಬೇಕು. ಅದಕ್ಕೆ ಬೆಲ್ಲದ ಒಂದು ಹನಿಯನ್ನು ನೀರಿಗೆ ಹಾಕಿದಾಗ ನೀರಿನೊಂದಿಗೆ ವೆಲ್ಲ ಬೆರೆಯಬಾರದು. ಈ ಹಂತಕ್ಕೆ ಪಾಕ ಬಂದಾಗ ಒಲೆ ಆಫ್ ಮಾಡಿ. ಈಗ ಇದೇ ಬೆಲ್ಲಕ್ಕೆ ಬಿಳಿ ಎಳ್ಳು, ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಅಕ್ಕಿ ಹಿಟ್ಟನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಬೆಲ್ಲದ ಪಾಕದ ಜೊತೆ ಅಕ್ಕ ಹಿಟ್ಟು ಚೆನ್ನಾಗಿ ಬೆರೆಯಬೇಕಾದರೆ ಬಹಳ ಸಮಯ ತಿರುಗಿಸುತ್ತಾ ಇರಬೇಕು. ಚೆನ್ನಾಗಿ ಮಿಕ್ಸ್ ಆದಾಗ ಹೂರ್ಣದಂತೆ ಆಗುತ್ತದೆ. ಹೀಗೆ ಮಾಡಿ ಮತ್ತೆ 10 ಗಂಟೆಗಳ ಕಾಲ ಇಡಬೇಕು. ಮತ್ತೆ ಮಾರನೆ ದಿನ ಮುಚ್ಚಳ ತೆಗೆದು ಪಾಕವನ್ನು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಈಗ ಉಂಡೆಗಳ ಕಟ್ಟಲು ಸಿದ್ಧತೆ ಮಾಡಿ.
ಈಗ ದೊಡ್ಡ ನಿಂಬೆ ಹಣ್ಣು ಗಾತ್ರದ ಹಿಟ್ಟು ತೆಗೆದುಕೊಂಡು ಉಂಡೆ ಕಟ್ಟಿಕೊಳ್ಳಿ. ಪಾಕವನ್ನು ಮೊದಲು ಉಂಡೆ ಕಟ್ಟಿಕೊಳ್ಳಿ. ನಂತರ ಈ ಉಂಡೆಯನ್ನು ತೆಗೆದುಕೊಂಡು ಪ್ಲಾಸ್ಟಿಕ್ ಮೇಲೆ ಎಣ್ಣೆ ಸವರಿ ಅದರ ಮೇಲೆ ಉಂಡೆ ಇಟ್ಟು ತಟ್ಟಿಕೊಳ್ಳಿ. ನಿಮಗೆ ಎಷ್ಟು ದೊಡ್ಡ ಬೇಕೋ ಅಷ್ಟು ದೊಡ್ಡಕ್ಕೆ ತಟ್ಟಿಕೊಳ್ಳಿ. ಈಗ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಈ ಕಜ್ಜಾಯವನ್ನು ಇಳಿ ಬಿಡಬೇಕು.
ಕಜ್ಜಾಯ ಎರಡೂ ಕಡೆ ಚೆನ್ನಾಗಿ ಕರಿಯಬೇಕು. ಮಧ್ಯಮ ಉರಿಯಲ್ಲಿ ಕರಿದರೆ ಕಜ್ಜಾಯದ ಒಳಗೂ ಚೆನ್ನಾಗಿ ಬೇಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಕಜ್ಜಾಯ ರೆಡಿಯಾಗುತ್ತದೆ. ಹಬ್ಬದ ಅಡುಗೆ ಜೊತೆಗೆ ಒದೊಂದು ಕಜ್ಜಾಯ ಇದ್ದರೆ ಅದರ ರುಚಿಯೇ ಬೇರೆ. ಹಾಗಾದ್ರೆ ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications