Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಹಬ್ಬಕ್ಕೆ ಸಿಹಿ ಕಡುಬು ಮಾಡಿ ನೋಡಿ..! ಹೇಗೆ ಮಾಡೋದು..?
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳು ಸಾಲು ಸಾಲಾಗಿ ಆರಂಭವಾಗುತ್ತವೆ. ನಾಗರ ಪಂಚಮಿ ಬಳಿಕ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೆ ಗಣೇಶ ಚತುರ್ಥಿ ಸಹ ಆಗಮಿಸುತ್ತಿದೆ. ಮುಂದಿನ ತಿಂಗಳಲ್ಲಿ ಗಣೇಶ ಚತುರ್ಥಿ ಸಹ ಬರಲಿದೆ ನಂತರ ದಸರಾ, ದೀಪಾವಳಿ ಸಾಲಿನಲ್ಲಿ ಕಾದಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹಿಂದೂಗಳ ಪವಿತ್ರ ಹಬ್ಬಗಳು ಬರಲಿವೆ.
ಹಬ್ಬ ಎಂದರೆ ಅಲ್ಲಿ ಹೊಸ ಬಟ್ಟೆ, ಒಂದು ತಿಂಡಿ ಇದ್ದೇ ಇರುತ್ತೆ. ಸಿಹಿ ತಿಂಡಿ ಮಾಡದೇ ಇರುವ ಹಬ್ಬ ಇಲ್ಲವೇ ಇಲ್ಲ. ಹಬ್ಬದಲ್ಲಿ ಸಿಹಿ ತಿಂಡಿ ಮಾಡುವುದೇ ಒಂದು ವಿಶೇಷ. ಅದ್ರಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿಯಲ್ಲಿ ವಿಶೇಷವಾಗಿ ಸಿಹಿ ಕಡಬು ಮಾಡುವುದನ್ನು ನಾವು ನೋಡಿದ್ದೇವೆ.

ಈ ಸಿಹಿ ಕಡುಬು ಎಲ್ಲಾ ಹಬ್ಬದ ಸಮಯದಲ್ಲೂ ಮಾಡುತ್ತಾರೆ. ಸಿಹಿ ಅದರಲ್ಲೂ ವಿಶೇಷವಾಗಿ ಗಣೇಶನ ಹಬ್ಬದಲ್ಲಿ ಈ ಕಡುಬು ಮಾಡಿಯೇ ಮಾಡುತ್ತಾರೆ. ಗಣೇಶ ಕಡುಬು ಪ್ರಿಯ ಎಂಬುದು ಪುರಾಣಗಳ ಕಥೆಯಲ್ಲಿದೆ. ಹಾಗಾದ್ರೆ ಹಬ್ಬಕ್ಕಾಗಿ ನೀವು ಸಹ ಈ ಕಡುಬು ಮಾಡಿ ನೋಡಿ. ಈ ಸಿಹಿ ಕಡುಬು ಮಾಡುವುದು ಹೇಗೆ?
ಸಿಹಿ ಕಡುಬು ಮಾಡಲು ಬೇಕಾಗುವ ವಸ್ತುಗಳು ಯಾವುದು? ಸಿಹಿ ಕಡುಬು ಮಾಡುವ ವಿಧಾನವೇನು?, ಸಿಹಿ ಕಡುಬು ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಹಿ ಕಡುಬು ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು -
- ಮೈದಾ ಹಿಟ್ಟು
- ಬಿಳಿ ಎಳ್ಳು
- ಬೆಲ್ಲ
- ಹುರಿಗಡ್ಲೆ
- ತೆಂಗಿನಕಾಯಿ / ಕೊಬ್ಬರಿ
- ಉಪ್ಪು
- ಏಲಕ್ಕಿ
ಸಿಹಿ ಕಡುಬು ಮಾಡಲು ಬೇಕಾಗುವ ವಸ್ತುಗಳು
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದೂವರೆ ಗ್ಲಾಸ್ ನೀರು ಹಾಕಿ ಅದಕ್ಕೆ ಒಂದು ಉಪ್ಪು, ಎಣ್ಣೆ ಅಥವಾ ತುಪ್ಪ, ಎರಡು ಚಮಚ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು, ಒಂದು ಗ್ಲಾಸ್ ಅಕ್ಕಿ ಹಿಟ್ಟು ಹಾಕಿಕೊಂಡಿ ಮಿಕ್ಸ್ ಮಾಡಿ. ಹಿಟ್ಟು ಗಂಟು ಆಗದಂತೆ ಕಲಸಿಕೊಳ್ಳಿ. 2 ರಿಂದ ಮೂರು 3 ನಿಮಿಷದಲ್ಲಿ ಹಿಟ್ಟು ರೆಡಿಯಾಗುತ್ತೆ. ಈ ವೇಲೆ ಆಫ್ ಮಾಡಿ ಪಾತ್ರೆ ಮುಚ್ಚಿಡಿ.
ಈಗ ಇನ್ನೊಂದು ಕಡೆ ಹೂರ್ಣ ಮಾಡಿಕೊಳ್ಳಿ. ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಕಪ್ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಿ. ಎಣ್ಣೆ, ತುಪ್ಪು ಯಾವುದನ್ನು ಹಾಕದೆಯೇ ಹುರಿದುಕೊಳ್ಳಿ. ಬಳಿಕ ಇದಕ್ಕೆ ಅರ್ಧ ಕಪ್ ಹುರಿಗಡಲೆ ಹಾಕಿಕೊಂಡು ಮತ್ತೆ 2 ನಿಮಿಷ ಹುರಿದುಕೊಳ್ಳಿ. ಈಗ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ನಂತರ ಒಂದು ಮಿಕ್ಸಿ ಜಾರ್‌ಗೆ ಈ ಎರಡು ಅಂಶಗಳ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಈ ಪುಡಿ ಹಾಕಿಕೊಂಡು ಅದಕ್ಕೆ ಕಾಯಿ ತುರಿ ಇಲ್ಲವೆ, ಒಣ ಕೊಬ್ಬರಿ ತುರಿ ಸೇರಿಸಿ. ಜೊತೆಗೆ ಏಲಕ್ಕಿ ಪುಡಿ, 1 ಕಪ್ ಬೆಲ್ಲ ಹಾಕಿ ಮಿಕ್ಸ್ ಮಾಡಿದರೆ ಹೂರ್ಣ ರೆಡಿಯಾಗುತ್ತೆ.
ಈಗ ಬೇಯಿಸಿಕೊಂಡಿದ್ದ ಹಿಟ್ಟನ್ನು ಹದ ಮಾಡಿಕೊಳ್ಳಿ. ಒಂದು ಪಾತ್ರೆಗೆ ಹಾಕಿಕೊಂಡು ಕೈಯಿಂದ ಚೆನ್ನಾಗಿ ನಾದಕೊಳ್ಳಬೇಕು. ನುಣ್ಣಗೆ ಬರುವಂತೆ ನಾದುಕೊಳ್ಳಿ. ಕೈಗೆ ನೀರು ಹಚ್ಚಿಕೊಳ್ಳುತ್ತಾ ನಾದಿಕೊಳ್ಳಿ. ಈಗ ಉಂಡೆ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ, ಬಳಿಕ ಮಧ್ಯದಲ್ಲಿ ಹೂರ್ಣ ಇಟ್ಟು ಮಡಚಿಕೊಳ್ಳಿ. ತುದಿಯನ್ನು ಗಟ್ಟಿಯಾಗಿ ಒತ್ತಿ ಹೂರ್ಣ ಹೊರಗೆ ಬರದಂತೆ ಮಾಡಿಕೊಳ್ಳಿ. ನಂತರ ಇದನ್ನು ಸ್ಟೀಮ್‌ನಲ್ಲಿ ಇಡಿ, ಕಡುಬು ಮಾಡುವ ಪಾತ್ರೆ ಅಥವಾ ಹಬೆ ಬರುವಂತಹ ಪಾತ್ರೆಯಲ್ಲಿ ಹಾಕಿ ಬೇಯಿಸಿ. 10 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಈಗ ನಿಮ್ಮ ಮುಂದೆ ರುಚಿಕರ ಸಿಹಿ ಕಡುಬು ರೆಡಿಯಾಗಿರುತ್ತದೆ.



Click it and Unblock the Notifications
