Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಹಬ್ಬದಲ್ಲಿ ಸವಿಯೋಕೆ ಸಿಹಿ ಕಡುಬು ತಿಂಡಿ: ರೆಡಿ ಮಾಡೋಕೆ 5 ನಿಮಿಷವೂ ಹಿಡಿಯಲ್ಲ!
ಶ್ರಾವಣ ಮಾಸದಲ್ಲಿ ಹಲವು ಹಬ್ಬಗಳು ಬರುತ್ತವೆ. ಅದ್ರಲ್ಲೂ ಈ ಕೃಷ್ಣ ಜನ್ಮಾಷ್ಟಮಿ ಹಾಗೆ ಗಣೇಶ ಚತುರ್ಥಿಗಳು ಬರುತ್ತವೆ. ಗಣೇಶ ಚತುರ್ಥಿಯಲ್ಲಿ ಸಿಹಿ ತಿಂಡಿಗಳು ಇಲ್ಲದಿದ್ದರೆ ಹಬ್ಬ ಪೂರ್ಣ ಆಗೋದೇ ಇಲ್ಲ. ಇನ್ನು ಈ ಹಬ್ಬದ ಸಮಯದಲ್ಲಿ ಹಲವು ರೀತಿ ತಿಂಡಿಗಳ ಮಾಡಿ ಸವಿಯುವುದು ನೋಡಿರಬಹುದು. ನಾವಿಂದು ಗಣೇಶ ಹಬ್ಬದಲ್ಲಿ ಸುಲಭವಾಗಿ ಮಾಡುವಂತಹ ತಿಂಡಿ ಕುರಿತು ತಿಳಿದುಕೊಳ್ಳೋಣ.
ಗಣೇಶನನ್ನು ಮೋದಕ ಪ್ರಿಯ ಎಂದು ಕರೆಯಲಾಗಿದೆ. ಹಾಗೆ ಆತನಿಗೆ ಕಡುಬು ಎಂದರೂ ಪಂಚಪ್ರಾಣ. ಅದ್ರಲ್ಲೂ ವಿಶೇಷವಾಗಿ ಮಾಡುವಂತಹ ಸಿಹಿ ಕಡುಬು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಈ ಕಡುಬು ಗಣೇಶನಿಗೂ ಪ್ರಿಯವಾದದ್ದು, ಹಾಗಾದ್ರೆ ನಾವು ಹಬ್ಬಕ್ಕೆ ಮನೆ ಮಂದಿಯಲ್ಲ ಕುಳಿತು ಸವಿಯಬಹುದಾದ ಈ ಸಿಹಿ ಕಡುಬು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಸಿಹಿ ಕಡುಬು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳೋಣ.
ಸಿಹಿ ಕಡುಬು ಮಾಡಲು ಬೇಕಾಗುವ ವಸ್ತುಗಳು
- ತೆಂಗಿನಕಾಯಿ
- ಬೆಲ್ಲ
- ಏಲಕ್ಕಿ
- ಹುರಿಗಡಲೆ
- ಗಸೆ ಗಸೆ
- ಅಕ್ಕಿ ಹಿಟ್ಟು
- ಗೋಧಿ ಹಿಟ್ಟು
- ಉಪ್ಪು ಎಣ್ಣೆ
ಸಹಿ ಕಡುಬು ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಗಸೆ ಗಸೆ ಹಾಕಿ ಹುರಿದುಕೊಳ್ಳಬೇಕು. ನಂತರ ಇದೇ ಗಸೆಗಸೆಗೆ ಹುರಿಗಡಲೆ ಕೂಡ ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಿ. ಈಗ ತಣ್ಣಗಾಗಲು ಬಿಟ್ಟು ನಂತರ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು ಅಳತೆ ಕಪ್‌ನಲ್ಲಿ 1 ಕಪ್ ಬೆಲ್ಲವನ್ನು ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಇದಕ್ಕೆ ತುರಿದುಕೊಂಡಿರುವ 1 ಕಪ್ ತೆಂಗಿನಕಾಯಿಯನ್ನು ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಪುಡಿ ಮಾಡಿಕೊಂಡಿದ್ದ ಗಸೆ ಗಸೆ ಪುಡಿಯನ್ನು ಕೂಡ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ನೀರು ಒಣಗಿ ಸ್ವಲ್ಪ ಗಟ್ಟಿ ಗಟ್ಟಿ ಹಲ್ವದಂತೆ ಬರಬೇಕು. ಈಗ ಒಲೆ ಒಂದು ಬಾಣಲೆಯಲ್ಲಿ ಅಳತೆ ಕಪ್‌ನಲ್ಲಿ 2 ಕಪ್ ನೀರು ಹಾಕಿ ಬಳಿಕ ಇದಕ್ಕೆ 2 ಸ್ಪೂನ್ ಗೋಧಿ ಹಿಟ್ಟು, ಉಪ್ಪು ಹಾಕಿ ಮಿಕ್ಸ್ ಮಾಡಿ ತುಪ್ಪ ಹಾಕಿ ಕಾಯಲು ಬಿಡಿ. ಇದು ಅಕ್ಕಿ ತೊಳೆದ ನೀರಿನಂತೆ ಕಾಣಿಸಬೇಕು. ಈಗ ಕುದಿಬರುವಾಗ ಅಕ್ಕಿ ಹಿಟ್ಟನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಮುದ್ದೆಗೆ ರೆಡಿ ಮಾಡುವಂತೆ ಹದ ಮಾಡಬೇಕು. ಮುಚ್ಚಳ ಮುಚ್ಚಿ 5 ನಿಮಿಷ ಬೇಯಲು ಬಿಡಿ.
ಅನಂತರ ಮತ್ತೆ ಹಿಟ್ಟನ್ನು ಹದ ಮಾಡಿಕೊಳ್ಳಿ. ಈಗ ಒಲೆಯಿಂದ ಇಳಿಸಿ, ಕೈಗೆ ನೀರು ಅದ್ದಿಕೊಂಡು ಹಿಟ್ಟನ್ನು ಹದ ಮಾಡಬೇಕು. ಹಿಟ್ಟು ಬಹಳ ಮೃದುವಾಗುವವರೆಗೂ ಹದ ಮಾಡಬೇಕು. ಸಣ್ಣ ನಿಂಬೆ ಗಾತ್ರದಷ್ಟು ಹಿಟ್ಟಿನ ಉಂಡೆ ತೆಗೆದುಕೊಂಡು ಮೊದಲು ನಿಪ್ಪಟ್ಟಿನಂತೆ ಮೊದಲು ತಟ್ಟಿಕೊಳ್ಳಿ. ಪ್ಲಾಸ್ಟಿಕ್ ಬಳಸಿ ತಟ್ಟಿಕೊಂಡು ನಂತರದಲ್ಲಿ ಮಧ್ಯದಲ್ಲಿ ಹೂರ್ಣವನ್ನು ಹಾಕಿ ಕಡುಬು ಮಾಡುವ ಅಚ್ಚಿನಲ್ಲಿ ಇಟ್ಟು ಪ್ರೆಸ್ ಮಾಡಿಕೊಳ್ಳಿ. ನಂತರ ಇದನ್ನು 3ರಿಂದ 4 ನಿಮಿಷಗಳ ಕಾಲ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ರುಚಿ ರುಚಿಯ ಸಿಹಿ ಕಡುಬು ರೆಡಿಯಾಗುತ್ತದೆ.



Click it and Unblock the Notifications
