Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸಿಹಿ ಸಿಹಿಯಾದ ಗುಡಾನ್ನ ಮಾಡೋದು ಹೇಗೆ? ಈ ಸಿಹಿ ಬಗ್ಗೆ ನಿಮಗೆ ಗೊತ್ತಾ?
ಹಬ್ಬದ ಸಮಯದಲ್ಲಿ ನೀವು ರುಚಿ ರುಚಿಯಾದ ಖಾದ್ಯ ಅಥವಾ ಸಿಹಿ ತಿಂಡಿಯನ್ನು ಮಾಡಿ ಸವಿಯೋದು ಕಾಮನ್. ಅದ್ರಲ್ಲೂ ಬೆಳಗ್ಗೆಯ ತಿಂಡಿಯೊಂದಿಗೆ ಅಥವಾ ಹಬ್ಬದ ಊಟದೊಂದಿದೆ ಸವಿಯಲು ಸಹ ಇಷ್ಟದ ಸಿಹಿ ತಿಂಡಿ ಮಾಡಿರಬಹುದು. ಹಾಗೆ ಹಬ್ಬ ಅಂದರೆ ಸಿಹಿ ತಿಂಡಿ ಇರಲೇ ಬೇಕು. ಅಲ್ಲದೆ ಸಿಹಿ ತಿಂಡಿಯೊಂದಿಗೆ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಇನ್ನು ಈ ಸಂಕ್ರಾಂತಿಯ ಸಮಯದಲ್ಲೂ ಸಹ ನೀವು ಸಿಹಿ ಮಾಡಿ ಸವಿಯೋದು ನೋಡಬಹುದು. ಮನೆಯಲ್ಲಿ ಮಾಡುವ ಸಿಹಿ ತಿಂಡಿಯೊಂದರ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಸುಲಭವಾಗಿ ಹಬ್ಬದ ಸಮಯಕ್ಕೆ ಮಾಡುವಂತಹ ಗುಡಾನ್ನ ಮಾಡುವ ಕುರಿತಾಗಿ ಇಲ್ಲಿ ತಿಳಿಯೋಣ. ನೀವು ಸಹ ಹಲವು ಸಮಯದಲ್ಲಿ ಈ ಗುಡಾನ್ನ ಸವಿದಿರಬಹುದು. ಎಲ್ಲರಿಗೂ ಇಷ್ಟವಾಗುವಂತಹ ರುಚಿಯ ಸಿಹಿ ತಿಂಡಿ ಇದು.

ಹಾಗಾದ್ರೆ ಮನೆಯಲ್ಲಿ ಈ ಸಿಹಿ ಗುಡಾನ್ನ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಗುಡಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಬೆಲ್ಲ
- ತುಪ್ಪ
- ಒಣ ಕೊಬ್ಬರಿ ತುರಿ
- ಉಪ್ಪು
ಗುಡಾನ್ನ ಮಾಡುವ ಸುಲಭದ ವಿಧಾನವೇನು?
ಮೊದಲು ಅರ್ಧ ಕಪ್ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಸ್ವಲ್ಪ ನೀರು ಹಾಕಿ 30 ನಿಮಿಷ ನೆನೆಯಲು ಬಿಡಿ. ಅನಂತರ ಇದಕ್ಕೆ ಈ ಅಕ್ಕಿಯನ್ನು ಒಂದು ಕುಕ್ಕರ್‌ಗೆ ಹಾಕಿ ಬಳಿಕ ಇದಕ್ಕೆ ಅದೇ ಕಪ್‌ನಲ್ಲಿ ಒಂದೂವರೆ ಕಪ್ ನೀರನ್ನು ಹಾಕಿಕೊಂಡು, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 4ರಿಂದ 5 ಸೀಟಿ ಹೊಡೆಸಿಕೊಳ್ಳಬೇಕು.
ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಮತ್ತೆ ಸ್ವಲ್ಪ ಪುಡಿ ಮಾಡಿಕೊಳ್ಳಿ. ಅನ್ನ ಮೆತ್ತಗಾಗಬೇಕು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಕಪ್ ಬೆಲ್ಲ ಹಾಗೂ ಅರ್ಧ ಕಪ್ ನೀರು ಹಾಕಿ ಕರಗಲು ಬಿಟ್ಟು ನಂತರ ಸೋಸಿಕೊಂಡು ಇಟ್ಟುಕೊಳ್ಳಿ. ಬೆಲ್ಲದ ನೀರು ಸ್ವಲ್ಪ ಗಟ್ಟಿಯಾಗುವಂತೆ ಮಾಡಿಕೊಳ್ಳಿ.
ಈಗ ಈ ಪಾಕವನ್ನು ಒಲೆ ಮೇಲಿನ ಬಾಣಲೆಯಲ್ಲಿ ಹಾಕಿ ನಿಧಾನವಾಗಿ ಕುದಿಯಲು ಆರಂಭವಾದಾಗ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡಿ ಬೇಯಲು ಬಿಡಿ. ಅನಂತರ ಇದಕ್ಕೆ ಒಣ ಕೊಬ್ಬರಿ ತುರಿ ಇಲ್ಲವೆ ಹಸಿ ತೆಂಗಿನ ತುರಿ, 2 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ 1 ನಿಮಿಷ ಬೇಯಲು ಬಿಡಿ.
ಕೊನೆಯಲ್ಲಿ ಏಲಕ್ಕಿ ಪುಡಿ, ಹಾಕಿಕೊಂಡು ಹಾಗೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದ್ರೆ ನಿಮ್ಮ ಮುಂದೆ ರುಚಿ ರುಚಿಯ ಗುಡಾನ್ನ ಸಿದ್ದವಾಗುತ್ತೆ, ನೀವು ಸಹ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ.



Click it and Unblock the Notifications
