Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅರ್ಧ ಲೀಟರ್ ಹಾಲಿನಿಂದ 5 ನಿಮಿಷದಲ್ಲಿ ಈ ಸಿಹಿ ಮಾಡಿ..! ಎಷ್ಟು ಸುಲಭ ಗೊತ್ತಾ?
ಮನೆಯಲ್ಲಿ ಸಿಹಿ ಮಾಡಿ ಸವಿಯುವುದು ಎಲ್ಲರ ಅಚ್ಚು ಮೆಚ್ಚಿನ ಕೆಲಸದಲ್ಲಿ ಒಂದಾಗಿರುತ್ತೆ. ಹಾಗೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗಾಗಿ ಏನಾದರು ಸಿಹಿ ಮಾಡುವುದು ಕಾಮನ್, ಇಲ್ಲವೆ ಮನೆಯಲ್ಲಿ ಸಂತೋಷದ ವಾತಾವರಣ ಇದ್ದರೆ, ಹಬ್ಬವಿದ್ದರಂತು ಸಿಹಿ ಇರಲೇಬೇಕು. ಹಾಗೆ ಸಿಹಿ ಅಂದರೆ ಬಹಳ ವಸ್ತುಗಳ ಬಳಸಿಕೊಂಡು ಹೆಚ್ಚು ಖರ್ಚು ಮಾಡಿ ಮಾಡುವ ಸಿಹಿ ಇಂದ ಹಿಡಿದು ಕಡಿಮೆ ಸಮಯದಲ್ಲಿ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಮಾಡುವಂತಹ ಹಲವು ಖಾದ್ಯಗಳು ಕೂಡ ನಮ್ಮ ನೆನಪಿಗೆ ಬರಲಿವೆ.
ಹಾಗೆ ನೀವು ಒಂದು ಪ್ಯಾಕ್ ಹಾಲಿನಲ್ಲಿ ಎಷ್ಟು ಅದ್ಭುತವಾದ ಸಿಹಿ ತಿಂಡಿ ಮಾಡಬಹುದು ಎಂಬುದು ಗೊತ್ತಾ? ಕೆಲವೊಮ್ಮೆ ನೀವು ಮನೆಯಲ್ಲಿ ಹಾಲು ಹೆಚ್ಚಾಗಿದ್ದರೆ ಅದರಿಂದ ಸಿಹಿ ಮಾಡಬಹುದು. ಅದರಲ್ಲೂ ಸುಲಭವಾಗಿ ಹಾಲಿನ ಕಿರು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹಾಲಿನ ಕೀರು ಮಾಡುವುದು ಬಹಳ ಸುಲಭ ಹಾಗೆ ಎಲ್ಲರಿಗೂ ಅಚ್ಚುಮೆಚ್ಚು.

ಹಾಗೆ ಒಂದು ಪ್ಯಾಕ್‌ನಲ್ಲಿ ರುಚಿ ರುಚಿಯ ಕೀರು ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಹಾಲಿನಿಂದ ಮಾಡುವ ಈ ಕೀರು ಬಹಳ ರುಚಿ ನೀಡಲಿದೆ. ಹಾಗೆ ಮಕ್ಕಳಿಗೆ ಬಹಳ ಇಷ್ಟವಾಗುತ್ತೆ. ಊಟದ ಬಳಿಕ ಈ ಕೀರು ಸವಿದರೆ ಊಟ ಸಂಪೂರ್ಣ ಆಗಿರುವ ಭಾವನೆ ಬರಲಿದೆ. ಹಾಗೆ ಮನೆಯಲ್ಲಿ ಪೂಜೆ, ಹಬ್ಬ, ಅತಿಥಿಗಳು ಬಂದಾಗ ಈ ಕೀರು ಸಡನ್ ಆಗಿ ಮಾಡಬಹುದು.
ಹಾಗಾದ್ರೆ ಹಾಲಿನಿಂದ ಕೀರು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹಾಲಿನ ಕೀರು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಲಿನ ಕೀರು ಮಾಡಲು ಬೇಕಾಗುವ ವಸ್ತುಗಳು
- ಅರ್ಧ ಲೀಟರ್ ಹಾಲು
- ಗೋಡಂಬಿ ದ್ರಾಕ್ಷಿ
- ಸೇಬು ಹಣ್ಣು ಒಂದು
- ಹಾಲಿನ ಪೌಡರ್
- ಸಕ್ಕರೆ
- ಏಲಕ್ಕಿ ಪೌಡರ್
- ತುಪ್ಪ
ಹಾಲಿನ ಕೀರು ಮಾಡುವ ಸುಲಭದ ವಿಧಾನವೇನು?
ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅರ್ಧ ಚಮಚ ತುಪ್ಪಹಾಕಿ, ಬಳಿಕ ಸ್ವಲ್ಪ ಕತ್ತರಿಸಿದ ಗೋಡಂಬಿಗಳ ಹಾಕಿ ಫ್ರೈ ಮಾಡಿಕೊಂಡು ಅದನ್ನು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ದ್ರಾಕ್ಷಿ ಕೂಡ ಹಾಕಿಕೊಂಡು ಅದನ್ನು ಫ್ರೈ ಮಾಡಿ ಎತ್ತಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಅರ್ಧ ಲೀಟರ್ ಹಾಲು ಹಾಕಿ 2 ಚಮಚ ಹಾಲಿನ ಪೌಡರ್ ಕೂಡ ಹಾಕಿ.
ಗಂಟು ಇಲ್ಲದಂತೆ ಚೆನ್ನಾಗಿ ಹಾಲಿನ ಪೌಡರ್ ಕರಗುವಂತೆ ಮಿಕ್ಸ್ ಮಾಡಿಕೊಳ್ಳಿ. ಉರಿ ಸಣ್ಣದಾಗಿ ಇಟ್ಟು 2 ನಿಮಿಷ ಕುದಿಯಲು ಬಿಡಿ. ನಂತರ ಈದ ಒಂದು ಸೇಬು ಹಣ್ಣನ್ನು ತೆಗೆದುಕೊಂಡು ಅದನ್ನು ತೊಳೆದು ಕತ್ತರಿಸಕೊಂಡು ಕ್ಯಾರೆಟ್ ತುರಿಯಲ್ಲಿ ತುರಿದುಕೊಳ್ಳಬೇಕು. ತುರಿದುಕೊಂಡ ಈ ಸೇಬುವನ್ನು ಕುದಿಯುತ್ತಿರುವ ಹಾಲಿಗೆ ಹಾಕಿಕೊಳ್ಳಿ.
ಹಾಗೆ ಮಿಕ್ಸ್ ಮಾಡುತ್ತಾ ಇರಿ. ಹಾಗೆ 2 ಚಮಚ ಸಕ್ಕರೆಯನ್ನು ಸಹ ಹಾಕಿ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಬಳಸಿ, ಹಾಗೆ ಏಲಕ್ಕಿ ಪೌಡರ್ ಕೂಡ ಹಾಕಿ, ಇದಾದ ಬಳಿಕ ಮೊದಲು ಫ್ರೈ ಮಾಡಿಕೊಂಡ ಗೋಡಂಬಿ, ದ್ರಾಕ್ಷಿ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಿ. ನಿಮ್ಮಲ್ಲಿ ಕೇಸರಿ ಇದ್ದರೆ ಇದಕ್ಕೆ ಹಾಕಿಕೊಳ್ಳಹುದು.
ಸ್ವಲ್ಪ ಗಟ್ಟಿಯಾಗುತ್ತಿದೆ ಎಂಬುದು ತಿಳಿದರೆ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಹಾಲಿನ ಕೀರು ನಿಮ್ಮ ಮುಂದೆ ರೆಡಿಯಾಗುತ್ತದೆ. ಸವಿಯಲು ಇದು ಬಹಳ ರುಚಿ ನೀಡಲಿದೆ.



Click it and Unblock the Notifications
