Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗಂಟುಗಳಿಲ್ಲದೆ ಸೂಪರ್ ಸಾಫ್ಟ್ ರಾಗಿ ಮುದ್ದೆ: ಕುಕ್ಕರ್ನಲ್ಲಿ ಮಾಡೋದು ಗೊತ್ತಾ?
ನೀವು ಊಟದ ಜೊತೆಗೆ ಮುದ್ದೆ ಸವಿಯುವಂತಹ ಜನರಾಗಿದ್ದರೆ ಮುದ್ದೆ ಮಾಡುವ ಕುರಿತು ತಿಳಿದೇ ಇರುತ್ತೀರಿ. ಮುದ್ದೆ ಮಧ್ಯ ಕರ್ನಾಟದ ಭಾಗದ ಬಹಳ ಆರೋಗ್ಯಕರ ಖಾದ್ಯಗಳಲ್ಲಿ ಒಂದು. ರಾಗಿಯ ಮುದ್ದೆ ಸವಿದವರು ಆರೋಗ್ಯವಾಗಿರುತ್ತಾರೆ. ರಾಗಿಯಲ್ಲಿನ ಫೈಬರ್ ಅಂಶವು ನಿಮ್ಮ ದೇಹಕ್ಕೆ ಬಹಳ ಉತ್ತಮವಾಗಿರಲಿದೆ. ಹಾಗೆ ಮುದ್ದೆಯ ಸವಿದರೆ ಕಣ್ತುಂಬ ನಿದ್ದೆ ಬರುತ್ತದೆ ಎಂದು ಕೂಡ ಹೇಳಲಾಗುತ್ತೆ.
ಹಳ್ಳಿ ಭಾಗದಲ್ಲಿ ಮಧ್ಯಾಹ್ನ ಬೆಳಗ್ಗೆ ಮುದ್ದೆ, ಮಧ್ಯಾಹ್ನ ಮುದ್ದೆ, ರಾತ್ರಿ ಊಟಕ್ಕೂ ಮುದ್ದೆ ಸವಿಯುವವರಿದ್ದಾರೆ. ಹಾಗೆ ನಗರವಾಸಿಗಳು ಕೂಡ ಹೋಟೆಲ್ಗಳಲ್ಲಿ, ಮನೆಯಲ್ಲಿಯೂ ಮಾಡಿ ಸವಿಯುವುದು ನೋಡಬಹುದು. ಹಾಗೆ ಮುದ್ದೆ ಸವಿದು ದೇಹ ಗಟ್ಟಿಯಾಗಬಹುದು. ತೂಕ ಇಳಿಸಿಕೊಳ್ಳಲು ಇಷ್ಟಪಡುವವರಂತು ಈ ರಾಗಿಯ ಖಾದ್ಯಗಳ ಸವಿಯುವುದು ಬಹಳ ಉತ್ತಮ.

ಇನ್ನು ಮುದ್ದೆ ಮಾಡಬೇಕಾದರೆ ಬಹಳಷ್ಟು ಸಾಹಸ ಮಾಡಬೇಕು ಎಂಬ ಭಾವನೆ ಇದೆ. ಆದ್ರೆ ಕಷ್ಟ ಪಡದೆಯೂ ಮುದ್ದೆ ಮಾಡಬಹುದು. ಹೌದು ಕುಕ್ಕರ್ನಲ್ಲಿ ಅತ್ಯಂತ ಸುಲಭವಾಗಿ ಅನ್ನ ಮಾಡಿದಂತೆ ಮುದ್ದೆ ಕೂಡ ಮಾಡಬಹುದು. ಯಾವುದೇ ಕೋಲು ಬಳಸುವ ಅಗತ್ಯವಿಲ್ಲ. ಹಾಗಾದ್ರೆ ಈ ರೀತಿ ಸುಲಭವಾಗಿ ಮುದ್ದೆ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋ.
ಕುಕ್ಕರ್ ಬಳಸಿ ಮುದ್ದೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ನೋಡಿ.
ಕುಕ್ಕರ್ ಬಳಸಿ ಮುದ್ದೆ ಮಾಡಲು ಬೇಕಾಗುವಂತಹ ಪದಾರ್ಥಗಳು
- ರಾಗಿ ಹಿಟ್ಟು
- ತುಪ್ಪ
- ಉಪ್ಪು
- ನೀರು
ಕುಕ್ಕರ್ ಬಳಸಿ ಮುದ್ದೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ 1 ಕಪ್ ರಾಗಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ 2 ಕಪ್ ನೀರು ಹಾಕಿ ಗಂಟುಗಳು ಇಲ್ಲದಂತೆ ಕಲಸಿಕೊಳ್ಳಬೇಕು. ಈಗ ರುಚಿಗೆ ಉಪ್ಪು ಸಹ ಹಾಕಿ ಕಲಸಿಕೊಳ್ಳಬೇಕು. ತೆಳುವಾದ ಮಿಶ್ರಣ ರೆಡಿಯಾಗಬೇಕು. ಈಗ ಇದನ್ನು ಒಲೆ ಮೇಲೆ ಇಟ್ಟು ನಿಧಾನವಾಗಿ ತಿರುಗಿಸಿಕೊಳ್ಳಬೇಕು. ರಾಗಿ ಹಿಟ್ಟು ನಿಧಾನವಾಗಿ ಗಟ್ಟಿಯಾಗುತ್ತಾ ಬಂದಂತೆ ಒಲೆ ಆಫ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಅದರ ತಳ ಮುಚ್ಚಿ ಸ್ವಲ್ಪ ಮೇಲೆ ಬರುವಷ್ಟು ನೀರು ಹಾಕಿ. ನಂತರ ಒಳಗೆ ಒಂದು ಸ್ನ್ಯಾಂಡ್ ಇಟ್ಟುಕೊಳ್ಳಿ. ಅಥವಾ ದೊಡ್ಡ ಪ್ಲೇಟ್ ಅನ್ನು ತಿರುಗಿಸಿ ಅದರ ಒಳಗೆ ಇಡಿ. ನಂತರ ಪಾತ್ರೆಯಲ್ಲಿರುವ ರಾಗಿ ಹಿಟ್ಟನ್ನು ಪಾತ್ರೆ ಸಮೇತವಾಗಿ ಅದರ ಒಳಗೆ ಇಡಿ. ನಂತರ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಕುಕ್ಕರ್ ಮುಚ್ಚಳಕ್ಕೆ ಸೀಟಿ ಹಾಕದೆ ಬೇಯಿಸಿ.
8ರಂದ 10 ನಿಮಿಷ ಬೇಯಿಸಿದ ಬಳಿಕ ಒಲೆ ಆಫ್ ಮಾಡಿ ಕುಕ್ಕರ್ ಮುಚ್ಚಳ ತೆಗೆದು ಪಾತ್ರೆಯನ್ನು ಹೊರಗೆ ತೆಗೆದಿಡಿ. ನಂತರ ಒಂದು ಸ್ಪೂನ್ ತುಪ್ಪ ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಸಮಯದಲ್ಲಿ ಹಿಟ್ಟು ಮೃದುವಾಗಿ ಬರಬೇಕು. ಗಂಟುಗಳು ಇಲ್ಲದಂತೆ ಮೃದುವಾಗಿ ಕಲಸಿಕೊಳ್ಳಿ. ಸ್ವಲ್ಪ ಬಿಸಿ ಆರಲು ಬಿಡಿ.
ಈಗ ಕೈಗೆ ನೀರು ಹಚ್ಚಿಕೊಂಡು ನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮುದ್ದೆಯನ್ನು ಕಟ್ಟಿಕೊಳ್ಳಿ. ಇದು ಅತ್ಯಂತ ಮೃದುವಾಗಿ ಬರುವ ಮುದ್ದೆ ಆಗಿರಲಿದೆ. ನೀವು ಸಹ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದಾದ ವಿಧಾನ ಇದು. ಅದ್ರಲ್ಲೂ ಹೊಸಬರಂತು ಈ ವಿಧಾನ ಬಳಸಿ ಸುಲಭವಾಗಿ ಮುದ್ದೆ ಮಾಡಬಹುದು. ಚಪಾತಿ ಹಾಗೂ ಮುದ್ದೆ ಊಟದೊಂದಿಗೆ ಇದ್ದರೆ ಆರೋಗ್ಯಕ್ಕೂ ಉತ್ತಮ.



Click it and Unblock the Notifications
