Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಂಬರ್ ಒನ್ ಟೇಸ್ಟ್‌ನ ಪಡವಲಕಾಯಿ ಪಲ್ಯ ಮಾಡಿದ್ದೀರಾ? ಇದರಲ್ಲಿ ತುಂಬಿದೆ ಆರೋಗ್ಯ!
ಊಟದ ಜೊತೆಗೆ ಒಂದು ಪಲ್ಯ ಇದ್ದರೆ ಆ ಊಟದ ರುಚಿ ಹೆಚ್ಚಾಗುತ್ತೆ. ಮನೆ ಮಂದಿಯಲ್ಲ ಕುಳಿತು ಸವಿಯಬಹುದಾದ ಪಲ್ಯ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ನಾವು ಊಟದ ಜೊತೆಗೆ ಪಲ್ಯ ಒಂದು ಮಾಡಿದರೆ ಮಾತ್ರ ಊಟದ ರುಚಿ ಹೆಚ್ಚಾಗುತ್ತೆ. ಹೀಗಾಗಿ ತರಕಾರಿ ಪಲ್ಯ ಮಾಡೋದು ಕಾಮನ್. ಹಾಗೆ ನಾವು ಎಲ್ಲಾ ಸಮಯದಲ್ಲು ರುಚಿಯಾಗಿ ಎಲ್ಲರಿಗೂ ಇಷ್ಟವಾಗುವಂತಹ ಪಲ್ಯ ಮಾಡುವ ಕುರಿತು ಆಲೋಚಿಸುತ್ತೇವೆ. ಯವಾಗಲು ಒಂದೇ ತರಕಾರಿಯಿಂದ ಒಂದೇ ರೀತಿ ಪಲ್ಯ ಮಾಡುವುದು ಅಂದ್ರೆ ಬೇಜಾರಿನ ಸಂಗತಿ.
ಆದ್ರೆ ನಾವಿಂದು ಹೊಸದಾಗಿ ಪಡವಲಕಾಯಿಯಲ್ಲಿ ಅದ್ಭುತ ರುಚಿಯ ಪಲ್ಯ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಪಡವಲಕಾಯಿ ಮಲಬದ್ಧತೆಗೆ ಉತ್ತಮ ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿಯಿಂದ ಹೊಟ್ಟೆ ಭಾರವಾಗಿದ್ದರೆ ನಿವಾರಣೆಗೆ ಈ ಪಡವಲಕಾಯಿ ಅದ್ಭುತ ಪರಿಹಾರ ನೀಡಲಿದೆ. ಪಡವಲಕಾಯಿ ಮಧುಮೇಹಿಗಳಿಗೆ ಉತ್ತಮ ಆಹಾರ. ಪಡವಲಕಾಯಿಯ ಜ್ಯೂಸ್ ಆರೋಗ್ಯಕ್ಕೆ ಬಹಳ ಉತ್ತಮ.

ಇಷ್ಟೆಲ್ಲಾ ಲಾಭ ಹೊಂದಿರುವ ಈ ಪಡವಲಕಾಯಿಯ ಪಲ್ಯವನ್ನು ನಾವಿಂದು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿಯೋಣ. ಸಾಮಾನ್ಯವಾಗಿ ಯಾರು ಕೂಡ ಪಡವಲ ಕಾಯಿಯನ್ನು ಅಡುಗೆಗೆ ನಿತ್ಯ ಬಳಸೋದಿಲ್ಲ. ವಿಶೇಷ ದಿನಗಳಲ್ಲಿ ಮಾಡುವುದು ನೋಡಬಹುದು. ಹಾಗಾದ್ರೆ ಇದರ ಪಲ್ಯ ಮಾಡುವುದು ಹೇಗೆ? ಪಡವಲಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಡವಲಕಾಯಿ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪಡವಲಕಾಯಿ
- ಸಾಸಿವೆ
- ಉಪ್ಪು
- ಕರಿಬೇವು
- ಹಸಿರು ಮೆಣಸಿನಕಾಯಿ
- ಅರಿಶಿನ ಪುಡಿ
- ಬೆಲ್ಲ
- ತೆಂಗಿನಕಾಯಿ ತುರಿ
- ಎಣ್ಣೆ
- ಉದ್ದಿನ ಬೇಳೆ
ಪಡವಲಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಪಡವಲಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಬಹಳ ದೊಡ್ಡದಾಗಿ ಹೆಚ್ಚಿಕೊಳ್ಳಬೇಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಹಸಿ ಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿಕೊಂಡು ಬಳಿಕ ಸಣ್ಣದಾಗಿ ಹೆಚ್ಚಿರುವ ಪಡವಲಕಾಯಿ ಹಾಕಿಕೊಂಡು ಇದಕ್ಕೆ ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಈ ಪಡವಲಕಾಯಿ ಮುಚ್ಚುವಷ್ಟು ನೀರು ಹಾಕಿಕೊಂಡು ಬೇಯಲು ಬಿಡಿ. ಇದೇ ಸಮಯದಲ್ಲಿ ಸ್ವಲ್ಪ ಉಪ್ಪು ಸಹ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಆಗಾಗ ಮುಚ್ಚಳ ತೆಗೆದು ತಿರುಗಿಸಿಕೊಳ್ಳಿ. ನೀವು ಹಾಕಿರುವ ನೀರು ಕಡಿಮೆಯಾಗುವವರೆಗೂ ಬೇಯಿಸಿಕೊಳ್ಳಿ. ಹಾಗೆ ನಂತರ ರುಚಿಗೆ ಮತ್ತೆ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ಬೆಲ್ಲದ ಪುಡಿ, ತೆಂಗಿನಕಾಯಿ ತುರಿ, ನಿಮಗೆ ಖಾರ ಬೇಕಿದ್ದರೆ ಸ್ವಲ್ಪ ಖಾರದ ಪುಡಿ ಹಾಕಿ ಮತ್ತೆ 4ರಿಂದ 5 ನಿಮಿಷ ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಅದ್ಭುತ ರುಚಿಯ ಪಡವಲಕಾಯಿ ಪಲ್ಯ ರೆಡಿಯಾಗುತ್ತೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications