Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
2 ನಿಮಿಷದಲ್ಲಿ ಮಾವಿನಕಾಯಿ ಒಗ್ಗರಣೆ ತಂಬುಳಿ ಮಾಡಿ! ಬಾಯಿಯಲ್ಲಿ ನೀರು ತರಿಸುವ ರೆಸಿಪಿ!
ಬೇಸಿಗೆಯ ಆರಂಭ ಅಂದರೆ ಮಾವಿನ ಕಾಯಿ ಹಾಗೂ ಹಣ್ಣಿನ ಸೀಸನ್ ಆರಂಭವಾದಂತೆ ಅದರಲ್ಲೂ ಮಾವಿನಕಾಯಿಯ ಹಲವು ಬಗೆಯ ಖಾದ್ಯಗಳು ನಿಮ್ಮ ಬಾಯಲ್ಲಿ ನೀರು ತರಿಸುತ್ತವೆ. ಹೀಗಾಗಿ ನಾವು ಸಹ ಈ ಮಾವಿನ ಸೀಸನ್ನಲ್ಲಿ ಮಾಡಬಹುದಾದ ಅದ್ಭುತ ರುಚಿಯ ಖಾದ್ಯಗಳ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ನೀವು ಮಾವಿನ ಕಾಯಿ ಖಾದ್ಯಗಳೆಂದರೆ ಎಲ್ಲರಿಗೂ ಪ್ರಿಯವಾಗುತ್ತೆ.
ಹೀಗಾಗಿ ನಾವಿಂದು ಮಾವಿನಕಾಯಿಯ ಒಗ್ಗರಣೆ ತಂಬುಳಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ತಂಬುಳಿಯ ರುಚಿ ನೀವು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ. ಮಾವಿನ ಕಾಯಿಯ ಈ ತಂಬುಳಿಯು ಬಹಳ ರುಚಿಯಾಗಿರುತ್ತೆ. ಊಟದ ಜೊತೆಗೆ ಈ ಹುಳಿ ಬಹಳ ರುಚಿ ನೀಡುತ್ತೆ. ಹಾಗೆ ಲೋಟದಲ್ಲಿ ಹಾಕಿ ಕುಡಿಯಲು ಬಹುದು.

ಹಾಗಾದ್ರೆ ಈ ಮಾವಿನಕಾಯಿಯ ತುಂಬುಳಿ ಮಾಡುವುದಾದರು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈಗ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನಕಾಯಿ ಸಿಗುತ್ತೆ. ಅದರಲ್ಲಿ ಈ ಹುಳಿ ಮಾವಿನ ಸಾರಿಗೆ ಒಂದು ಒಗ್ಗರಣೆ ಹಾಕಿದರೆ ಅದರ ರುಚಿ ಬೊಂಬಾಟ್ ಆಗಿರಲಿದೆ. ಹಾಗಾದ್ರೆ ಈ ಮಾವಿನಕಾಯಿ ತಂಬುಳಿ ಒಗ್ಗರಣೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ತಂಬುಳಿ ಒಗ್ಗರಣೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಾವಿನಕಾಯಿ -1
- ಬೆಳುಳ್ಳಿ
- ಹಸಿ ಮೆಣಸು
- ಒಣ ಮೆಣಸು
- ತೆಂಗಿನಕಾಯಿ ತುರಿ
- ಜೀರಿಗೆ
- ಸಾಸಿವೆ
- ಎಣ್ಣೆ
- ಉಪ್ಪು
- ಮಜ್ಜಿಗೆ
- ಅರಶಿಣ ಪುಡಿ
ಮಾವಿನಕಾಯಿ ತಂಬುಳಿ ಒಗ್ಗರಣೆ ಮಾಡುವ ವಿಧಾನವೇನು?
ಮೊದಲಿಗೆ ಒಂದು ಕಾಯಿ ಮಾವಿನಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಂಡು ಒರೆಸಿ, ಚೆನ್ನಾಗಿ ತೊಳೆದುಕೊಂಡು ಕತ್ತರಿಸಿಕೊಳ್ಳಿ. ಹುಳಿಯಾಗಿ ಮಾಗಿರುವ ಕಾಯಿ ಬಹಳ ಚೆನ್ನಾಗಿರಲಿದೆ. ಹಾಗೆ ಇದನ್ನು ಹೆಚ್ಚಿಕೊಂಡು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಹಾಗೆ ಅದಕ್ಕೆ ಬೆಳ್ಳುಳ್ಳಿ, ಹಸಿ ಮೆಣಸು, ಹಸಿ ತೆಂಗಿನಕಾಯಿ ತುರಿ, ಅರಶಿಣ ಪುಡಿ, ಜೀರಿಗೆ ಕೂಡ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಬೇಕು.
ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದನ್ನು ಒಂದು ಬೌಲ್ಗೆ ಹಾಕಿಕೊಂಡು ಬಳಿಕ ಕಾಲು ಲೀಟರ್ ನೀರು ಮಜ್ಜಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಒಣ ಮೆಣಸಿ, ಕರಿಬೇವು ಹಾಕಿ ಫ್ರೈ ಮಾಡಿಕೊಂಡು ಅದನ್ನು ತಂಬುಳಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿ ಮಾವಿನಕಾಯಿ ತಂಬುಳಿ ರೆಡಿಯಾಗುತ್ತೆ. ನೀವು ಹಿಂದೆಂದಿಗೂ ಇದನ್ನು ಮಾಡಿರದೆ ಇದ್ದರೆ ಈಗ ಮಾಡಿ ನೋಡಿ.
ಒಂದು ಹೊತ್ತು ಮಾಡಿದರೆ ಮೂರು ಹೊತ್ತು ಇದನ್ನೇ ಸವಿಯುತ್ತೀರಿ. ಹಾಗೆ ಊಟಕ್ಕೆ ಅದ್ಭುತ ರುಚಿ ನೀಡುತ್ತೆ. ಹಾಗೆ ಎಲ್ಲಾ ಸಮಯಕ್ಕೂ ಈ ರೀತಿಯ ತಂಬುಳಿ ಮಜವಾದ ರುಚಿ ನೀಡಲಿದೆ. ಅದರಲ್ಲೂ ಮಧ್ಯಾಹ್ನದ ಊಟದಕ್ಕೆ ತಂಪಾಗಿದ್ದರೆ ಊಟದ ರುಚಿ ಅದ್ಭುತ. ಹಾಗೆ ಮಾವಿನಕಾಯಿ ಬಳಸಿ ಮಾಡುವ ಹಲವು ಖಾದ್ಯಗಳಲ್ಲಿ ಈ ತಂಬುಳಿ ಬಹಳ ವಿಭಿನ್ನ ಹಾಗೂ ಮಾಡೋದು ಕೂಡ ಅತ್ಯಂತ ಸುಲಭವಾಗಿದೆ. ನೀವು ಕೂಡ ಈ ಬೇಸಿಗೆಯಲ್ಲಿ ಅದರಲ್ಲೂ ಮಾವಿನ ಕಾಯಿಯ ಈ ಸೀಸನ್ನಲ್ಲಿ ಸುಲಭವಾಗಿ ಈ ಮಾಡಿ ಸವಿದು ನೋಡಿ.



Click it and Unblock the Notifications