Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಹಬ್ಬದ ಸೀಸನ್‌ನಲ್ಲಿ ಮಾಡಿ ರುಚಿ ರುಚಿ ಸುಕ್ಕಿನುಂಡೆ: ಮಾಡೋದು ಹೇಗೆ?
ಹಬ್ಬಗಳು ಆರಂಭವಾದಾಗ ನೀವು ಹಲವು ಬಗೆಯ ತಿಂಡಿಗಳ ಮಾಡಿ ಸವಿಯುವುದು ಸಾಮಾನ್ಯ. ಅದರಂತೆ ಬಹಳ ರುಚಿ ರುಚಿಯ ಹಾಗೆ ವಿಶೇಷವಾಗಿ ಮಾಡುವಂತಹ ಹಲವು ತಿಂಡಿಗಳನ್ನು ನೀವು ಯಾವಾಗಲು ಮಾಡಿ ಸವಿಯಲು ಇಷ್ಟಪಡುತ್ತೀರಿ. ಹಬ್ಬದ ಸಮಯದಲ್ಲಿ ಎಲ್ಲರಿಗೂ ಇಷ್ಟವಾಗುವ, ಹಾಗೆ ಒಂದಿಷ್ಟು ದಿನ ಇಟ್ಟ ಸವಿಯಬಹುದಾದ ತಿಂಡಿಗಳ ಮಾಡೋದು ಕಾಮನ್.
ಇಂತಹ ಸಮಯದಲ್ಲಿ ಅದರಲ್ಲೂ ಕೃಷ್ಣ ಜನ್ಮಾಷ್ಠಮಿ ಹಾಗೆ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಯಾವುದಾದರು ರುಚಿ ರುಚಿಯ ಹಾಗೆ ಅಪರೂಪದ ತಿಂಡಿಗಳ ಮಾಡಿ ಸವಿಯುವ ಮನಸ್ಸು ಮಾಡಿದರೆ ನಿಮಗಾಗಿ ನಾವಿಂದು ಸುಕ್ಕಿನುಂಡೆ ಮಾಡುವ ಕುರಿತು ಹೇಳಲಿದ್ದೇವೆ. ಈ ಸುಕ್ಕಿನುಂಡೆ ತಿಂಡಿಯು ಹಬ್ಬದ ಸಂಭ್ರಮ ಹೆಚ್ಚಿಸಲು ಹಾಗೆ ಎಲ್ಲರಿಗೂ ಇಷ್ಟವಾಗಲಿದೆ.

ಸುಕ್ಕಿನುಂಡೆ ಹಲವು ಕಾಳುಗಳ ಬಳಸಿ ಮಾಡಲಾಗುವ ತಿಂಡಿ ಆಗಿರೋದ್ರಿಂದ ಆರೋಗ್ಯಕ್ಕೂ ಇದು ಉತ್ತಮ ಎನ್ನಬಹುದು, ಹಾಗೆ ರುಚಿಯಾದ ಈ ತಿಂಡಿಯನ್ನು ನೈವೇದ್ಯ ಉದ್ದೇಶವಾಗಿಯೂ ಬಳಸಬಹುದು. ಹಾಗಾದ್ರೆ ಈ ಸುಕ್ಕಿನುಂಡೆ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಸುಕ್ಕಿನುಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸುಕ್ಕಿನುಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಇಡಿ ಕಡಲೆ
- ಹೆಸರು ಕಾಳು
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು
- ಬೆಲ್ಲ
- ಏಲಕ್ಕಿ ಪುಡಿ
- ತುಪ್ಪ
- ಅರಶಿಣ
- ತೆಂಗಿನಕಾಯಿ ತುರಿ
ಸುಕ್ಕಿನುಂಡೆ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಕಡಲಗಳ ಹಾಕಿಕೊಂಡು ಹುರಿದುಕೊಳ್ಳಬೇಕು. ಅಳತೆ ಕಪ್‌ನಲ್ಲಿ ಅರ್ಧ ಕಪ್ ಇಡಿಗಡಲೆ ಹಾಕಿ ಹುರಿದುಕೊಳ್ಳಿ. ನಂತರ ತೆಗೆದು ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಅರ್ಧ ಕಪ್ ಹೆಸರು ಕಾಳು ಹಾಕಿಕೊಂಡು ಹುರಿದುಕೊಳ್ಳಬೇಕು. ನಂತರ ಇದನ್ನು ಕೂಡ ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈ ಎರಡೂ ಕಾಳುಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದೂವರೆ ಕಪ್ ಬೆಲ್ಲ ಹಾಕಿ ಕಾಲು ಕಪ್ ನೀರು ಹಾಕಿ ಕರಗಲು ಬಿಡಿ. ಬೆಲ್ಲದ ಪಾಕ ಮಾಡಬೇಡಿ, ಕರಗಿದರೆ ಸಾಕು. ನಂತರ ಈ ನಿರನ್ನು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಹಾಕಿಕೊಂಡು ಒಂದೆಳೆ ಪಾಕ ಮಾಡಿಕೊಳ್ಳಿ.
ಈಗ ಈ ಬೆಲ್ಲಕ್ಕೆ 2 ಸ್ಪೂನ್ ತುಪ್ಪ, ಏಲಕ್ಕಿ ಪುಡಿ, 1 ಕಪ್ ತೆಂಗಿನಕಾಯಿ ಪುಡಿ, ತರಿ ತರಿಯಾಗಿ ಪುಡಿ ಮಾಡಿದ್ದ ಕಾಳಿನ ಪುಡಿಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿ, ಇದು ಸ್ವಲ್ಪ ಅಂಟು ಅಂಟಾಗಿ ಬಂದಾಗ ಇಳಿಸಿಕೊಳ್ಳಿ.
ಈಗ ಒಂದು ಬೌಲ್‌ಗೆ ಇಂದು ಕಪ್ ಕಡಲೆ ಹಿಟ್ಟು ಅರ್ಧ ಕಪ್ ಅಕ್ಕಿ ಹಿಟ್ಟು, ಅರಶಿಣ ಪುಡಿ ಹಾಕಿಕೊಂಡು ಬೋಂಡಾ ಹಿಟ್ಟಿನಂತೆ ಹದ ಮಾಡಿಕೊಳ್ಳಿ. ಈಗ ಮೊದಲು ಮಾಡಿಕೊಂಡಿದ್ದ ಹಿಟ್ಟನ್ನು ತೆಗೆದುಕೊಂಡು ನಿಂಬೆ ಹಣ್ಣಿನ ಗಾತ್ರದಂತೆ ಉಂಡೆ ಕಟ್ಟಿಕೊಳ್ಳಿ. ನಂತರ ಈ ಉಂಡೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿಕೊಳ್ಳಿ.
ನಂತರ ತೆಗೆದು ಒಲೆ ಮೇಲೆ ಇಟ್ಟಿರುವ ಬಾಣಲೆಯಲ್ಲಿನ ಎಣ್ಣೆಗೆ ಬಿಡಬೇಕು. ಇದೇ ವಿಧಾನವಾಗಿ ಎಲ್ಲಾ ಉಂಡೆಗಳನ್ನು ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸುಕ್ಕಿನುಂಡೆ ಸವಿಯಲು ಸಿದ್ದವಾಗಲಿದೆ.



Click it and Unblock the Notifications
