Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಳೆಗಾಲದಲ್ಲಿ ಈ ಹೆಸರು ಕಾಳು ಬೆಲ್ಲದ ಉಂಡೆ ಮಾಡಿ ಸವಿದು ನೋಡಿ! ಇದರ ವಿಶೇಷ ಏನು ಗೊತ್ತಾ?
ಮಳೆಗಾಲದಲ್ಲಿ ನೀವು ಕೂಡ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ನೋಡಬಹುದು. ಹೆಚ್ಚಾಗಿ ಗಂಟಲು ನೋವು, ಕೆಮ್ಮು, ಶೀತ, ತಲೆನೋವು ಹೀಗೆ ಹತ್ತಾರು ರೀತಿ ಕಾಲೋಚಿತ ಸಮಸ್ಯೆಗಳು ಕಾಡಬಹುದು. ಹಾಗೆ ಇದು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ತರುವುದು ಸಹ ನೋಡಬಹುದು. ಅದ್ರಲ್ಲೂ ಮಕ್ಕಳು ಮಳೆಗಾಲದಲ್ಲಿ ಬಹುಬೇಗ ಕಾಯಿಲೆಗಳಿಗೆ ತುತ್ತಾಗುತ್ತಾರೆ.
ಇನ್ನು ನಾವು ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲ ಮನೆಯಲ್ಲೇ ಪರಿಹಾರ ಮಾಡಬಹುದು. ಹಾಗೆ ಕೆಲವೊಂದು ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರವೂ ಪರಿಹಾರ ನೀಡಲಿದೆ. ನಾವಿಂದು ಇಂತಹ ಕಾಲೋಚಿತ ಸಮಸ್ಯೆಗಳಿಂದ ಮುಕ್ತಿ ನೀಡುವಂತಹ ಗುಣ ಹೊಂದಿರುವ ಬೆಲ್ಲ ಹೆಸರು ಕಾಳಿನ ಉಂಡೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಫೇಮಸ್ ಆಗಿರುವ ಉಂಡೆಗಳಲ್ಲಿ ಇದು ಕೂಡ ಒಂದು. ಬೆಲ್ಲ ಹಾಗೂ ಹೆಸರು ಕಾಳನ್ನು ಹಾಕಿ ಮಾಡುವ ಈ ಉಂಡೆ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಅದರಲ್ಲೂ ಉಷ್ಣದ ಕಾರಣಕ್ಕೆ ನಿಮ್ಮ ದೇಹದಲ್ಲಿ ಏರುಪೇರು ಇದ್ದರೆ, ಕಾಲೋಚಿತ ಸಮಸ್ಯೆಗಳಿದ್ದರೆ ಇದು ಪರಿಹಾರ ನೀಡಲಿದೆ.
ಅದರಲ್ಲೂ ಇದಕ್ಕೆ ಹಲವು ಬಗೆಯ ಔಷಧಿ ಗುಣದ ವಸ್ತುಗಳ ಹಾಕುತ್ತಾರೆ. ಹೀಗಾಗಿ ನಾವು ಕೂಡ ಇಂದು ಈ ಬೆಲ್ಲ ಹೆಸರು ಕಾಳಿನ ಉಂಡೆ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ತಿಳಿದುಕೊಳ್ಳೋಣ.
ಬೆಲ್ಲ ಹೆಸರು ಕಾಳಿನ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹೆಸರು ಕಾಳು- 1 ಕಪ್
- ಎಣ್ಣೆ
- ಬೆಲ್ಲ- 1 ಕಪ್
- ತುಪ್ಪ
ಬೆಲ್ಲ ಹೆಸರು ಕಾಳಿನ ಉಂಡೆ ಮಾಡುವುದು ಹೇಗೆ?
1 ಕಪ್ ಹೆಸರು ಕಾಳನ್ನು ಬಾಣಲೆಗೆ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. 5 ನಿಮಿಷ ಕೈ ಬಿಡದಂತೆ ಮಿಶ್ರಣ ಮಾಡಿಕೊಂಡು ಹುರಿದುಕೊಳ್ಳಿ. ಈ ಹೆಸರು ಕಾಳು ಬಣ್ಣ ಬದಲಾಗಿ ಕಂದು ಬಣ್ಣಕ್ಕೆ ತಿರುಗಬೇಕು ಆ ರೀತಿಯಾಗಿ ಹುರಿದುಕೊಳ್ಳಬೇಕು. ಗರಿ ಗರಿಯಾದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ.
ಈಗ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಈಗ ಹುರಿದುಕೊಂಡಿರುವ ಹೆಸರು ಕಾಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಬೇಕು. ಇದು ನುಣ್ಣಗೆ ಪೌಡರ್ ಆಗಿರಬೇಕು. ಈ ಪುಡಿಯನ್ನು ಮತ್ತೆ ಜರಡಿ ಹಿಡಿದು ನುಣ್ಣಗಿರುವ ಪುಡಿಯನ್ನು ಮಾತ್ರವೇ ತೆಗೆದುಕೊಳ್ಳಬೇಕು. ನಂತರ ಈ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಪುಡಿ ಮಾಡಿದ ಬೆಲ್ಲ ಹಾಕಿ. 1 ಕಪ್ ಹೆಸರು ಕಾಳಿಗೆ 1 ಕಪ್ ಬೆಲ್ಲ ಬೇಕಾಗುತ್ತದೆ.
ಬೆಲ್ಲ ಹಾಕಿ ಕೈಯಲ್ಲಿ ಮಿಕ್ಸ್ ಮಾಡಲು ಆಗದಿದ್ದರೆ ಮಿಕ್ಸಿ ಜಾರ್ಗೆ ಹಾಕಿ 2ರಿಂದ 3 ಸುತ್ತು ರುಬ್ಬಿಕೊಂಡರೆ ಚೆನ್ನಾಗಿ ಮಿಕ್ಸ್ ಆಗುತ್ತದೆ. ಈಗ ಒಂದು ಪಾತ್ರೆಗೆ ಈ ಮಿಶ್ರಣ ಹಾಕಿಕೊಂಡು 2 ಸ್ಪೂನ್ ತುಪ್ಪ ಹಾಕಿ ಮತ್ತೆ ಮಿಕ್ಸ್ ಮಾಡಿ ಉಂಡೆ ಕಟ್ಟಿಕೊಳ್ಳಿ. ನಿಂಬೆ ಹಣ್ಣು ಗಾತ್ರದ ಉಂಡೆ ಕಟ್ಟಕೊಂಡರೆ ಸಾಕಾಗುತ್ತದೆ.
ಇಷ್ಟಾದರೆ ನಿಮ್ಮ ಮುಂದೆ ಹೆಸರು ಕಾಳು ಬೆಲ್ಲದ ಉಂಡೆ ಸವಿಯಲು ಸಿದ್ದವಾಗುತ್ತದೆ. ಬೇಕಿದ್ದರೆ ನೀವು ಇದಕ್ಕೆ ಏಲಕ್ಕಿ ಪುಡಿ ಹಾಗೆ ಕಾಳು ಮೆಣಸಿನ ಪುಡಿ ಸಹ ಹಾಕಿಕೊಳ್ಳಬಹುದು. ನೀವು ಸಹ ಮಳೆಗಾಲದಲ್ಲಿ ಈ ಔಷಧಿ ಗುಣದ ಉಂಡೆಯನ್ನು ಮಾಡಿ ಸವಿದು ನೋಡಿ.



Click it and Unblock the Notifications
