Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆಯಲ್ಲೇ ಮಾಡಿ ಪಕ್ಕಾ ರೋಡ್ ಸೈಡ್ ಮಸಾಲ ಮಂಡಕ್ಕಿ: ಸಿಂಪಲ್ ರೆಸಿಪಿ ಇಲ್ಲಿದೆ!
ರೋಡ್ ಸೈಡ್ನಲ್ಲಿ ಸಿಗುವಂತಹ ಸ್ನ್ಯಾಕ್ಸ್ಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಬಾಯಿ ರುಚಿಗೆ ಇವು ಹೇಳಿ ಮಾಡಿಸಿದ ತಿಂಡಿಗಳು, ಅದ್ರಲ್ಲೂ ಜಿಟಿ ಜಿಟಿ ಮಳೆಯಲ್ಲಿ ಸಂಜೆ ಸಮಯದಲ್ಲಿ ಸವಿಯಲು ಯಾವುದಾದರು ಸ್ನ್ಯಾಕ್ಸ್ ಇದ್ದರೆ ಬಹಳ ರುಚಿಕರವಾಗಿರಲಿದೆ. ರಸ್ತೆ ಬದಿ ಸಂಜೆ ಸಮಯದಲ್ಲಿ ಯಾವುದೇ ಸ್ನ್ಯಾಕ್ಸ್ ಅಂಗಡಿ ಇದ್ದರೂ ಎಲ್ಲವೂ ಜನರಿಂದ ತುಂಬಿರುವುದು ನೋಡಬಹುದು. ಹಾಗೆ ಅಲ್ಲಿ ಬಗೆ ಬಗೆಯ ರುಚಿ ರುಚಿಯ ತಿಂಡಿಗಳು ಸಹ ಸಿಗುತ್ತವೆ.
ಅದರಲ್ಲೂ ಹೆಚ್ಚಾಗಿ ಪಾನಿಪೂರಿ, ಗೋಬಿ ಮಂಚೂರಿಯನ್, ಬೋಂಡಾ, ಬಜ್ಜಿ, ಸಮೋಸ, ನೂಡಲ್ಸ್, ಪಾವ್ ಬಾಜಿ, ವಡಾ ಪಾವ್, ಚುರುಮುರಿ, ದೋಸೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಹಾಗೆ ಇವು ಒಂದಕ್ಕಿಂತ ಒಂದು ರುಚಿ ನೀಡುವಂತಹ ತಿಂಡಿಯಾಗಿವೆ. ನೀವು ಮನೆಯಲ್ಲೂ ಕೆಲವು ಸ್ನ್ಯಾಕ್ಸ್ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಚುರುಮುರಿ ಎಲ್ಲರ ಫೇವರಿಟ್ ತಿಂಡಿ ಎನ್ನಬಹದು.

ಮಳೆಗಾಲದ ಸಮಯದಲ್ಲಿ ಟೀ ಜೊತೆಗೆ ಚುರುಮುರಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ನೀವು ರಸ್ತೆ ಬದಿಯಲ್ಲಿ ಸವಿಯುವಂತಹ ರುಚಿಯನ್ನು ಮನೆಯಲ್ಲಿ ಮಾಡುವುದು ಕಷ್ಟ ಎನಿಸಬಹುದು. ಆದ್ರೆ ನಾವಿಂದು ಸುಲಭವಾಗಿ ಈ ರುಚಿ ರುಚಿಯ ಚುರುಮುರಿಯನ್ನು ಮನೆಯಲ್ಲಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ರೋಡ್ ಸೈಡ್ನಲ್ಲಿ ನೀವು ಸವಿದಿರುವ ಮಸಾಲ ಚುರುಮುರಿಯನ್ನು ಮನೆಯಲ್ಲೇ ಮಾಡುವ ಕುರಿತು ತಿಳಿಯೋಣ, ಈ ಮಸಾಲ ಚುರುಮುರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಚುರುಮುರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಂಡಕ್ಕಿ
- ಖಾರದ ಪುಡಿ
- ಈರುಳ್ಳಿ-2
- ಟೊಮೆಟೋ- 2
- ಉಪ್ಪು
- ಹಸಿ ಮೆಣಸು
- ಕ್ಯಾರೆಟ್- 1
- ತೆಂಗಿನಕಾಯಿ ತುರಿ
- ದನಿಯ
- ಜೀರಿಗೆ
- ನಿಂಬೆ ರಸ
ಮಸಾಲ ಚುರುಮುರಿ ಮಾಡುವು ವಿಧಾನವೇನು ನೋಡಿ
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ದನಿಯ, ಜೀರಿಗೆ ಹಾಕಿ ಒಂದು ಸುತ್ತು ರುಬ್ಬಿ, ಇದು ತರಿ ತರಿಯಾಗಿ ಇರಲಿ. ಅಥವಾ ಇದನ್ನು ಕಲ್ಲಿನಲ್ಲಿ ಅರಿದುಕೊಂಡು ಸಹ ಬಳಸಬಹುದು. ಹಾಗೆ ಇದಕ್ಕೆ ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಕೂಡ ಹಾಕಿ ಮತ್ತೆ 2 ಸುತ್ತು ರುಬ್ಬಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಿಂಬೆ ರಸ ಸಹ ಹಾಕಿ ಮತ್ತೆ 1 ಸುತ್ತು ರುಬ್ಬಬೇಕು. ಬಳಿಕ ಈ ಚಟ್ನಿಯನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಮಂಡಕ್ಕಿಯನ್ನು ಜರಡಿ ಹಿಡಿದು ಕಸ ಅಐಥವಾ ಅದರ ಪುಡಿಯನ್ನು ಬೇರೆ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. 4ರಿಂದ 5 ಜನರಿಗೆ ಸಾಕಾಗುವಷ್ಟು ಮಂಡಕ್ಕಿ ತೆಗೆದುಕೊಳ್ಳಿ. ಈ ಅದಕ್ಕೆ ಖಾರದ ಪುಡಿ, ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಗೂ ಟೊಮೆಟೋ, ತುರಿದ ಕ್ಯಾರೆಟ್, ತೆಂಗಿನ ಕಾಯಿ ತುರಿ ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಬೇಯಿಸಿರುವ ಬಟಾಣಿ ಇದ್ದರೆ ಹಾಕಿಕೊಳ್ಳಿ. ಹಾಗೆ ಮೊಳಕೆ ಬರಿಸಿರುವ ಯಾವುದಾದರು ಕಾಳು ಇದ್ದರೆ ಅದನ್ನು ಕೂಡ ಹಾಕಿಕೊಳ್ಳಿ. (ಈ ಎರಡು ವಸ್ತುಗಳನ್ನು ಹಾಕದೆಯೂ ಮಾಡಬಹುದು, ಆದ್ರೆ ಹಾಕಿದರೆ ಅದರ ರುಚಿ ದುಪ್ಪಟ್ಟಾಗುತ್ತೆ) ಈಗ ಚಿಕ್ಕದಾಗಿ ಕತ್ತರಿಸಿರುವ ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ.
ಈಗ ಮೊದಲು ರುಬ್ಬಿಕೊಂಡಿದ್ದ ಹಸಿರು ಚಟ್ನಿಯನ್ನು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಯಾವುದಾದರು ಖಾರ ಅಥವಾ ಸೇವ್ ಹಾಕಿಕೊಂಡು 2 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಸಾಲ ಚುರು ಮುರಿ ರೆಡಿಯಾಗುತ್ತದೆ. ಇದರ ಜೊತೆಗೆ ಸವಿಯಲು ಸೌತೆಕಾಯಿ ಕತ್ತರಿಸಿ ನೀಡಿದರೆ ರುಚಿ ದುಪ್ಪಟ್ಟಾಗೋದು ಖಚಿತ.



Click it and Unblock the Notifications
