Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Aloo Tikki: ಈ ರೀತಿ ಮಾಡಿದ್ರೆ ಆಲೂ ಟಿಕ್ಕಿ ಸೂಪರ್! ತುಂಬಾನೇ ಸಿಂಪಲ್, ಸಿಕ್ಕಾಪಟ್ಟೆ ಟೇಸ್ಟಿ
ಸ್ನ್ಯಾಕ್ಸ್ ಮಾಡಲು ಇದಕ್ಕಿಂತ ಬೆಸ್ಟ್ ಇಲ್ಲ. ಮಕ್ಕಳಿಗೂ ಇಷ್ಟ, ದೊಡ್ಡವರಿಗೂ ಇಷ್ಟ. ಈ ರೀತಿ ಮಾಡಿದ್ರೆ ಆಲೂ ಟಿಕ್ಕಿ ಸೂಪರ್. ಕೆಲವೊಮ್ಮೆ ದುಬಾರಿ ರೆಸ್ಟೋರೆಂಟ್ಗಳಿಗಿಂತ ರಸ್ತೆ ಬದಿಯ ಪುಟ್ಟ ಅಂಗಡಿಗಳಲ್ಲಿ ಸಿಗುವ ಆಹಾರಗಳು ಹೆಚ್ಚು ರುಚಿಕರವಾಗಿರುತ್ತದೆ. ಅದರಲ್ಲೂ ಆಲೂ ಟಿಕ್ಕಿ (Aloo Tikki) ಭಾರತದ ಪ್ರಮುಖ ಸ್ಟ್ರೀಟ್ ಫುಡ್ ಆಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಸಂಜೆ ಟೀ ಟೈಮ್ಗೆ, ಬೆಳಗಿನ ಉಪಹಾರಕ್ಕೆ ಅಥವಾ ಮನೆಗೆ ಬರುವ ಅತಿಥಿಗಳಿಗಾಗಿ ಆಲೂ ಟಿಕ್ಕಿ ಹೇಳಿಮಾಡಿಸಿದಂತಿದೆ. ಅಂಗಡಿಯ ತಿಂಡಿಗಳ ಬದಲು ಮನೆಯಲ್ಲಿಯೇ ಗರಿಗರಿಯಾದ ಆಲೂ ಟಿಕ್ಕಿ ಮಾಡುವುದು ಉತ್ತಮ ಆಯ್ಕೆ.
ಭಾರತವು ತನ್ನ ವೈವಿಧ್ಯಮಯ ಅಡುಗೆಗಳಿಗೆ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಆಲೂ ಟಿಕ್ಕಿ ಅದರಲ್ಲಿ ಒಂದು ಪ್ರಮುಖವಾದ ಬೀದಿ ಆಹಾರವಾಗಿದೆ. ಮದುವೆ ಸಮಾರಂಭಗಳಿಂದ ಹಿಡಿದು ಸಣ್ಣಪುಟ್ಟ ಕಾರ್ಯಕ್ರಮಗಳವರೆಗೆ ಎಲ್ಲಿ ನೋಡಿದರೂ ಇದನ್ನು ಸವಿಯಬಹುದು. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಟಿಕ್ಕಿ ರುಚಿಕರವಾಗಿದ್ದರೂ, ಕಲಬೆರಕೆಯ ಭಯದಿಂದ ಅನೇಕರು ಹೊರಗೆ ತಿನ್ನಲು ಹಿಂಜರಿಯುತ್ತಾರೆ. ಮಳೆಗಾಲದಲ್ಲಿ ಬಿಸಿ ಬಿಸಿಯಾಗಿ ತಿಂದರೆ ಅದರ ರುಚಿಯೇ ಬೇರೆ. ಸಂಜೆ ಹೊತ್ತಿನ ಹಸಿವನ್ನು ತಣಿಸಲು ಆಲೂ ಟಿಕ್ಕಿ ಹೇಳಿಮಾಡಿಸಿದಂತಿದೆ. ಅದರಲ್ಲೂ ಈ ಮಳೆಗಾಲದ ವಾತಾವರಣದಲ್ಲಿ ಬಿಸಿ ಬಿಸಿಯಾದ ಆಲೂ ಟಿಕ್ಕಿ ತಿನ್ನುವುದು ಒಂದು ಹಿತವಾದ ಅನುಭವ. ಬನ್ನಿ, ಮನೆಯಲ್ಲಿಯೇ ಆಲೂ ಟಿಕ್ಕಿ (Aloo Tikki Recipe) ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಆಲೂ ಟಿಕ್ಕಿ ಮಾಡಲು ಬೇಕಾಗುವ ಸಾಮಗ್ರಿಗಳು
• ಮಧ್ಯಮ ಗಾತ್ರದ ಆಲೂಗಡ್ಡೆ - 4
• ಜೋಳದ ಹಿಟ್ಟು - 2 ಚಮಚ
• ಹಸಿ ಮೆಣಸಿನಕಾಯಿ - 3 (ಸಣ್ಣಗೆ ಹೆಚ್ಚಿದ್ದು)
• ಕೊತ್ತಂಬರಿ ಸೊಪ್ಪು - 2 ಚಮಚ
• ಬೆಳ್ಳುಳ್ಳಿ ಪೇಸ್ಟ್ - 1 ಚಮಚ
• ಶುಂಠಿ ಪೇಸ್ಟ್ - 1 ಚಮಚ
• ಧನಿಯಾ ಪುಡಿ - 1 ಚಮಚ
• ಜೀರಿಗೆ ಪುಡಿ - 1/2 ಚಮಚ
• ಅರಿಶಿನ ಪುಡಿ - 1/4 ಚಮಚ
• ಗರಂ ಮಸಾಲಾ ಪುಡಿ - 1/4 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - ಕರಿಯಲು

ಆಲೂ ಟಿಕ್ಕಿ ಮಾಡುವ ವಿಧಾನ
ಮೊದಲಿಗೆ ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಬೇಕು. ನಂತರ ಸಿಪ್ಪೆ ತೆಗೆದು ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನು ಒಂದು ದೊಡ್ಡ ಪಾತ್ರೆಗೆ ತೆಗೆದುಕೊಂಡು, ಕೈಯಿಂದ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪುಡಿ ಮತ್ತು ಉಪ್ಪು ಹಾಕಿ.
ಎಲ್ಲಾ ಪದಾರ್ಥಗಳನ್ನು ಆಲೂಗಡ್ಡೆಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆಗಳು ಆಲೂಗಡ್ಡೆಗೆ ಚೆನ್ನಾಗಿ ಹಿಡಿಯುವಂತೆ ಕಲಸಿ. ಈ ಮಿಶ್ರಣದಿಂದ ನಿಮಗೆ ಇಷ್ಟವಾದ ಆಕಾರದಲ್ಲಿ (ಗುಂಡಗೆ ಅಥವಾ ಅಂಡಾಕಾರದಲ್ಲಿ) ಟಿಕ್ಕಿಗಳನ್ನು ತಯಾರಿಸಿ. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ಬಳಿಕ, ಮಧ್ಯಮ ಉರಿಯಲ್ಲಿ ಟಿಕ್ಕಿಗಳನ್ನು ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಕರಿಯಿರಿ.

ಕರೆದ ನಂತರ, ಟಿಕ್ಕಿಗಳನ್ನು ಒಂದು ಪ್ಲೇಟ್ಗೆ ತೆಗೆದುಕೊಂಡು, ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಟಿಶ್ಯೂ ಪೇಪರ್ ಬಳಸಿ. ಇದರಿಂದ ಹೆಚ್ಚುವರಿ ಎಣ್ಣೆ ಅಂಶವು ಕಡಿಮೆಯಾಗುತ್ತದೆ. ಈಗ ಬಿಸಿ ಬಿಸಿಯಾದ ಆಲೂಗಡ್ಡೆ ಟಿಕ್ಕಿ ಸಿದ್ಧ. ಬಿಸಿ ಬಿಸಿಯಾದ ಆಲೂ ಟಿಕ್ಕಿಯನ್ನು ಟೊಮೆಟೊ ಕೆಚಪ್ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ಸವಿಯಬಹುದು. ಇದನ್ನು ಮನೆಯಲ್ಲಿಯೇ ತಯಾರಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಏಕೆಂದರೆ, ಮನೆಯಲ್ಲಿ ತಯಾರಿಸುವುದರಿಂದ ಪದಾರ್ಥಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು.



Click it and Unblock the Notifications
