Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆರೋಗ್ಯಕ್ಕೆ ಸೂಪರ್ ಫುಡ್..ಹೆಸರು ಕಾಳಿನ ಸಲಾಡ್ ಮಾಡಿ ನೋಡಿ..! ಎಷ್ಟು ಸುಲಭ ಗೊತ್ತಾ?
ಆರೋಗ್ಯದ ದೃಷ್ಟಿಯಿಂದ ಸಲಾಡ್ ಸೇವನೆ ಎಷ್ಟು ಉತ್ತಮ ಅನ್ನೋದನ್ನು ನೀವು ಕೇಳಿರಬಹುದು. ಸಲಾಡ್ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಬೆಳಗ್ಗೆ ತಿಂಡಿಯ ಸಮಯದಲ್ಲಿ ಸಲಾಡ್ ಸವಿಯುವುದು ನಿಮ್ಮ ಇಡೀ ದಿನದ ಆರೋಗ್ಯ ಕಾಪಾಡಲಿದೆ. ಅದ್ರಲ್ಲೂ ಹಲವು ರೀತಿ ತರಕಾರಿಯ ಸಲಾಡ್ ನಿಮ್ಮ ಇಡೀ ದೇಹದ ಆರೋಗ್ಯ ವೃದ್ಧಿಸಲಿದೆ.
ಈ ಸಲಾಡ್ ಸವಿಯಲು ಎಲ್ಲರು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ಆರೋಗ್ಯಕ್ಕೂ ಕೂಡ ಇದು ಮುಖ್ಯ. ಅದ್ರಲ್ಲೂ ಕಾಳುಗಳಿಂದ ಮಾಡಲಾಗುವ ಸಲಾಡ್ ಅಂತು ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ. ಆರೋಗ್ಯಕ್ಕೂ ಇದು ಉತ್ತಮ ಆಗಿರೋದ್ರಿಂದ ಎಲ್ಲರು ಸವಿಯಬಹುದು. ಸಲಾಡ್ಗೆ ಎಣ್ಣೆ, ಮಸಾಲೆ ಕಡಿಮೆ ಬಳಸುವ ಕಾರಣ ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ಎಲ್ಲಾ ಆರೋಗ್ಯಕ್ಕೂ ಉತ್ತಮ.

ತೂಕ ಇಳಿಸುವ ಬಹುತೇಕ ಮಂದಿ ಈಗ ಸಲಾಡ್ ಸವಿಯುವುದು ನೋಡುತ್ತೇವೆ. ಸಲಾಡ್ನಲ್ಲೂ ಹತ್ತು ಹಲವು ರೀತಿಯ ವಿಧಗಳಿವೆ, ಹಣ್ಣುಗಳಿಂದ ಮಾಡುವ ಸಲಾಡ್ ಅತ್ಯಂತ ಹೆಚ್ಚು ಆರೋಗ್ಯಕರ ಹಾಗೆ ರುಚಿಕರ ಆಗಿರುತ್ತೆ. ಪ್ರತಿದಿನ ಸೇವಿಸುವ ಆಹಾರದ ಜೊತೆಗೆ ಸಲಾಡ್ ಸವಿಯುವುದು ನಿಮ್ಮ ಆರೋಗ್ಯ ಸಮತೋಲನದಲ್ಲಿಡುವ ಜೊತೆಗೆ ದೇಹದ ಕಾರ್ಯಕ್ಷಮತೆ ಹೆಚ್ಚುವಂತೆ ಮಾಡಲಿದೆ.
ಹಾಗಾದ್ರೆ ಬೆಳಗ್ಗೆ ತಿಂಡಿಗೆ ಇಲ್ಲವೆ ರಾತ್ರಿ ಊಟದ ಸಮಯದಲ್ಲಿ ಸವಿಯಲು ಹೆಸರು ಕಾಳನ್ನು ಬಳಸಿ ಮಾಡುವಂತಹ ಸಲಾಡ್ ಅದ್ಭುತ ರುಚಿ ನೀಡಲಿದೆ. ಅದರಲ್ಲೂ ಹೆಸರು ಕಾಳು ಆರೋಗ್ಯಕ್ಕೆ ಎಷ್ಟೊಂದು ಅಗತ್ಯ ಅಂಶಗಳ ಒದಗಿಸಲಿದೆ ಎಂಬುದನ್ನು ನೀವು ಕೂಡ ತಿಳಿದಿರಬಹುದು. ಹಾಗಾದ್ರೆ ನಾವಿಂದು ಈ ಹೆಸರು ಕಾಳಿನ ಈ ಸಲಾಡ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಸಲಾಡ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಳಕೆ ಕಟ್ಟಿದ ಹೆಸರುಕಾಳು - 1 ಕಪ್
- ಸೌತೆಕಾಯಿ
- ಟೊಮೊಟೋ
- ಕ್ಯಾರೆಟ್
- ಕ್ಯಾಪ್ಸಿಕಂ
- ಕೊತ್ತಂಬರಿ ಸೊಪ್ಪು
- ನಿಂಬೆಹಣ್ಣಿನ ರಸ
- ಕರಿ ಕಾಳು ಮೆಣಸಿನ ಪುಡಿ
- ಜೀರಿಗೆ ಪುಡಿ
- ಖಾರದ ಪುಡಿ
- ಉಪ್ಪು
ಹೆಸರು ಕಾಳಿನ ಸಲಾಡ್ ಮಾಡುವುದು ಹೇಗೆ?
ಮೊದಲು ಒಂದು ಬೌಲ್ಗೆ ಕಪ್ ಅಳತೆಯ ಮೊಳಕೆ ಕಟ್ಟಿದ ಹೆಸರು ಕಾಳು ಹಾಕಿಕೊಳ್ಳಿ. ಬಳಿಕ ಬಿಸಿ ಮಾಡಿರುವ ನೀರನ್ನು ಈ ಬೌಲ್ಗೆ ಹಾಕಿಕೊಳ್ಳಿ. 5 ನಿಮಿಷ ಈ ನೀರಿನಲ್ಲಿ ಚೆನ್ನಾಗಿ ನೆನೆಯಲು ಬಿಡಿ. ಅನಂತರ ಈ ಕಾಳನ್ನು ಜರಡಿ ಹಿಡಿದು ಇಟ್ಟುಕೊಳ್ಳಿ. ನಂತರ ಈ ಬೌಲ್ಗೆ ಖಾರದ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಸೌತೆಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಹಾಗೆ ಕ್ಯಾರೆಟ್, ಕ್ಯಾಪ್ಸಿಕಂ, ಒಂದು ಟೊಮೆಟೋ ಸಹ ಸಣ್ಣದಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಅನಂತರ ಒಂದು ನಿಂಬೆ ಹಣ್ಣಿನ ರಸ ಇದಕ್ಕೆ ಹಿಂಡಿ ಕೊಳ್ಳಿ. ಅನಂತರ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಹೆಸರು ಕಾಳಿನ ಸಲಾಡ್ ರೆಡಿಯಾಗುತ್ತದೆ. ನೀವು ಕೂಡ ಆರಾಮವಾಗಿ ಮಾಡಿ ನೋಡಿ.
ನೀವು ಡಯೆಟ್ ಅಥವಾ ತೂಕ ಇಳಿಸುವವರು ತಪ್ಪದೆ ಇದನ್ನು ಸವಿದು ನೋಡಿ. ಕಡಿಮೆ ಕ್ಯಾಲೋರಿ ಹಾಗೆ ಜೀರ್ಣಕ್ರಿಯೆಗೆ ಉತ್ತಮ ಆಗಿರುವುದರಿಂದ ದೇಹದ ಸಮತೋಲನ ಕಾಪಾಡಲಿದೆ. ಹಾಗೆ ತೂಕ ನಿಯಂತ್ರಣದಲ್ಲಿಡಲಿದೆ.



Click it and Unblock the Notifications
