Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬೇಕರಿಯ ಸ್ಪಾಂಜ್ ಕೇಕ್ ಕುಕ್ಕರ್ನಲ್ಲಿ ಮಾಡಿ..! ತುಂಬಾನೆ ಸುಲಭ!
ಬೇಕರಿಯಲ್ಲಿ ಹತ್ತಾರು ರೀತಿಯ ಕೇಕ್ಗಳು ಸವಿಯಲು ಸಿಗುತ್ತವೆ. ಯುವ ಜನತೆಯಂತು ಬೇಕರಿ ತಿಂಡಿಗಳೆಂದರೆ ಮುಗಿಬಿದ್ದು ಖರೀದಿಸಿ ತಿನ್ನುತ್ತಾರೆ. ಅದರಲ್ಲೂ ಕೇಕ್ಗಳಿಗೆ ಎಲ್ಲಿಲ್ಲದ ಬೇಡಿಕೆ. ಇತ್ತ ಸ್ಪಾಂಜ್ ಕೇಕ್ಗಳಿಗೂ ಬೇಡಿಕೆ ಹೆಚ್ಚು, ಏಕೆಂದರೆ ಕೇಕ್ಗಳಲ್ಲಿ ಸ್ವಲ್ಪ ಆರೋಗ್ಯಯುತ ಕೇಕ್ ಬೇಕು ಅಂದ್ರೆ ಅದು ಸ್ಪಾಂಜ್ ಕೇಕ್ಗಳು.
ಈ ಸ್ಪಾಂಜ್ ಕೇಕ್ಗಳನ್ನು ಮನೆಯಲ್ಲೇ ಮಾಡಬಹುದು. ಹೌದು ಬಹಳ ಸುಲಭವಾಗಿ ಈ ಕೇಕ್ ಅನ್ನ ಮನೆಯಲ್ಲೇ ಮಾಡಬಹುದು. ಹಲವರು ಮನೆಯಲ್ಲಿ ಕೇಕ್ ಮಾಡಿ ಸವಿದಿರುತ್ತೀರಿ. ಕೆಲವು ಬಾರಿ ಕೇಕ್ ಮಾಡುವಾಗ ಹಾಳಾಗಿರಬಹುದು. ಆದ್ರೆ ಸರಿಯಾದ ಕ್ರಮದಲ್ಲಿ ಮಾಡಿದರೆ ಬಾಯಿ ಚಪ್ಪರಿಸಿ ಸವಿಯಬಹುದು.

ಈ ಕೇಕ್ ಮಾಡಲು ನೀವು ಮೊಸರು, ಹಾಳು ಬಳಸಿರುತ್ತೀರಿ. ಆದ್ರೆ ನಾವಿಂದು ಹಾಲು ಮೊಸರು ಬಳಸದೆಯೇ ಸುಲಭವಾಗಿ ಸ್ಪಾಂಜ್ ಕೇಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಅದರಲ್ಲು ಕುಕ್ಕರ್ನಲ್ಲಿ ಸುಲಭವಾಗಿ ಮಾಡಿ ನೋಡಿ.
ಕುಕ್ಕರ್ನಲ್ಲಿ ಸ್ಪಾಂಜ್ ಕೇಕ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಯಾವೆಲ್ಲಾ ಕ್ರಮ ಅನುಸರಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕುಕ್ಕರ್ನಲ್ಲಿ ಸ್ಪಾಂಜ್ ಕೇಕ್ ಮಾಡಲು ಬೇಕಾಗುವ ವಸ್ತುಗಳು
- ಮೊಟ್ಟೆ - 3
- ಬೇಕಿಂಗ್ ಪೇಪರ್
- ಸಕ್ಕರೆ
- ಸೂರ್ಯಕಾಂತಿ ಎಣ್ಣೆ
- ಮೈದಾ ಹಿಟ್ಟು
- ಬೇಕಿಂಗ್ ಪೌಡರ್
- ಅಡುಗೆ ಸೋಡಾ
- ಎಣ್ಣೆ
ಕುಕ್ಕರ್ನಲ್ಲಿ ಸ್ಪಾಂಜ್ ಕೇಕ್ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆಯನ್ನ ಇಡೀ ಕುಕ್ಕರ್ಗೆ ಹಚ್ಚಿಕೊಳ್ಳಿ. ಬಳಿಕ ಬೇಕಿಂಗ್ ಪೇಪರ್ ಹಾಕಿಕೊಳ್ಳಿ ಕುಕ್ಕರ್ ಸುತ್ತಲೂ ಬೇಕಿಂಗ್ ಪೇಪರ್ ಅಂಟಿಸಬೇಕು. ಬೇಕಿಂಗ್ ಪೇಪರ್ ಇಲ್ಲದಿದ್ದರೆ ಖಾಲಿ ಹಾಳೆಗಳನ್ನು ಸಹ ಅಂಟಿಸಿಕೊಳ್ಳಬಹುದು.
ಬಳಿಕ ಪೇಪರ್ ಮೇಲೆಯೂ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ. ಈಗ ಅಳತೆಗೆ ಒಂದು ಲೋಟ ತೆಗೆದುಕೊಳ್ಳಿ. ಒಂದು ಮಿಕ್ಸಿ ಜಾರ್ಗೆ ಒಂದು ಗ್ಲಾಸ್ ಸಕ್ಕರೆ ಹಾಕಿಕೊಳ್ಳಿ. ಬಳಿಕ ಅದೇ ಗ್ಲಾಸ್ನಲ್ಲಿ ಅರ್ಧದಷ್ಟು ಸೂರ್ಯಕಾಂತಿ ಎಣ್ಣೆ ಹಾಕಿ.
ಬಳಿಕ ಇದೇ ಜಾರ್ಗೆ ಮೊಟ್ಟೆಗಳನ್ನು ರುಬ್ಬಿಕೊಳ್ಳಿ. ಸಕ್ಕರೆ ಕರಗಿ ನೊರೆ ಬರುವವರೆಗೆ ರುಬ್ಬಿಕೊಳ್ಳಬೇಕು. ಇದಾದ ಬಳಿಕ ಜಾರ್ಗೆ 2 ಗ್ಲಾಸ್ ಮೈದಾ ಹಿಟ್ಟು ಹಾಕಿಕೊಂಡು ರುಬ್ಬಿಕೊಳ್ಳಿ. ಈ ರೀತಿ ಕೇಕ್ ಬಟರ್ ಮಾಡಿಕೊಳ್ಳಿ. ಕೇಕ್ ಹಿಟ್ಟು ಗಂಟು ಗಂಟಾಗದಂತೆ ನುಣುಪಾಗಿ ಬರುವಂತೆ ಮಾಡಿ. '
ಬಳಿಕ ಇದನ್ನು ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಅಡುಗೆ ಸೋಡಾ ಹಾಕಿಕೊಳ್ಳಿ. ಬೇಕಿಂಗ್ ಪೌಡರ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕೊನೆಯಲ್ಲಿ ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ಗೆ ಹಾಕಿಕೊಳ್ಳಿ. ದೋಸೆ ಹಿಟ್ಟಿನಂತಹ ಹಿಟ್ಟು ರೆಡಿಯಾದಾಗ ಕುಕ್ಕರ್ಗೆ ಹಾಕಿಕೊಳ್ಳಿ.
ಈಗ ಕುಕ್ಕರ್ ಮುಚ್ಚಳ ಮುಚ್ಚಿ ನೇರವಾಗಿ ಒಲೆ ಮೇಲೆ ಇಡಬೇಡಿ. ಒಲೆ ಮೇಲೆ ಒಂದು ತವ ಇಟ್ಟು ತವ ಬಿಸಿಯಾಗಲು ಬಿಡಿ ತವ ಬಿಸಿಯಾದ ಬಳಿಕ ಅದರ ಮೇಲೆ ಕುಕ್ಕರ್ ಅನ್ನು ಇಡಿ. ಸಣ್ಣ ಉರಿಯಲ್ಲಿ ಬೇಯಲು ಬಿಡಿ. 30 ನಿಮಿಷ ಬೇಯಲು ಬಿಡಿ. ಬಳಿಕ ಮುಚ್ಚಳ ತೆಗೆದು ತಣ್ಣಗಾಗಲು ಬಿಡಿ.
ಕೊನೆಯಲ್ಲಿ ಕುಕ್ಕರ್ನಿಂದ ತೆಗೆದು ಒಂದು ತಟ್ಟೆಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ಪಾಂಜ್ ಕೇಕ್ ರೆಡಿಯಾಗಿರುತ್ತದೆ. ನೀವು ಇದಕ್ಕೆ ಜಾಮ್ ಹಾಕಿಕೊಂಡು ಸವಿಯಬಹುದು. ಇದನ್ನು ಫ್ರಿಡ್ಜ್ನಲ್ಲಿಟ್ಟರೆ ವಾರಗಳ ಕಾಲ ಸವಿಯಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
