Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬಾಯಲ್ಲಿ ನೀರು ತರಿಸುವ ಪಾಲಕ್ ಗ್ರೇವಿ ಮಾಡಿ..! ಎಲ್ಲಾ ತಿಂಡಿಗೂ ಅತ್ಯುತ್ತಮ ರುಚಿ!!
ನಮ್ಮ ದೇಹಕ್ಕೆ ಸೊಪ್ಪು ಬಹಳ ಉಪಯುಕ್ತ. ಸೊಪ್ಪಿನಲ್ಲಿರುವ ಕಬ್ಭಿಣಾಂಶ ನಮ್ಮ ದೇಹಕ್ಕೆ ಒಂದಿಷ್ಟು ಶಕ್ತಿ ಪೂರೈಸಲಿದೆ. ಹೀಗಾಗಿ ಹಿರಿಯರು ಸೊಪ್ಪು ತರಕಾರಿ ಸೇವಿಸಬೇಕು ಎನ್ನುತ್ತಾರೆ. ಅದರಲ್ಲೂ ಪಾಲಕ್ ಸೊಪ್ಪಿನ ಆರೋಗ್ಯಕರ ಅಂಶಗಳ ಬಗ್ಗೆ ನಮಗೆ ತಿಳಿದೇ ಇದೆ. ಪಾಲನ್ನಲ್ಲಿ ಅತ್ಯುತ್ತಮ ಪೋಷಕಾಂಶಗಳು, ಖನಿಜಗಳು ಅಡಗಿವೆ.
ರಕ್ತ ಹೀನತೆಯ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಸೊಪ್ಪು ಹೆಚ್ಚು ಬಳಸುವುದು ಸೂಕ್ತ. ಏಕೆಂದರೆ ಇದರಲ್ಲಿರುವ ಕಬ್ಬಿಣಾಂಶ ಹಾಗೂ ಪೋಟ್ಯಾಶಿಯಂ ಅಂಶವು ನಿಮ್ಮಲ್ಲಿ ರಕ್ತ ಹೀನತೆಯಂತಹ ಸಮಸ್ಯೆ ಬಗೆಹರಿಸಲಿದೆ. ಪಾಲಕ್ ಸೊಪ್ಪಿನಲ್ಲಿ ನೈಟ್ರೇಜ್ ಅಂಶ ಹೇರಳವಾಗಿರುವುದರಿಂದ, ಬಿಪಿ ಸಮಸ್ಯೆ ಎದುರಿಸುವವರು ಬಿಪಿ ನಿಯಂತ್ರಣದಲ್ಲಿಡಲು ಈ ಸೊಪ್ಪಿನ ಖಾದ್ಯ ಬಳಸಬಹುದು.

ಇಷ್ಟೆಲ್ಲಾ ಉಪಯೋಗವಿರುವ ಈ ಸೊಪ್ಪಿನಿಂದ ನಾವು ರುಚಿಕರ ಚಟ್ನಿ, ಸಾರು ಮಾಡಿದ್ದೇವೆ. ಹಾಗೆ ಇಂದು ನಾವು ಪಾಲಕ್ನಿಂದ ಮಾಡಲಾಗುವ ಗ್ರೇವಿಯ ಕುರಿತು ತಿಳಿದುಕೊಳ್ಳೋಣ. ಈ ಗ್ರೇವಿ ನಿಮ್ಮ ಆರೋಗ್ಯಕ್ಕೂ ಉತ್ತಮ ಹಾಗೆ ಸವಿಯಲು ಕೂಡ ಬಹಳ ರುಚಿಕರವಾಗಿರುತ್ತೆ. ದೋಸೆ, ಚಪಾತಿ, ಪೂರಿ ಸೇರಿದಂತೆ ಎಲ್ಲಾ ತಿಂಡಿಗಳಿಗೂ ಇದು ಅತ್ಯುತ್ತಮ ಖಾದ್ಯವಾಗಿದೆ.
ಹಾಗಾದ್ರೆ ನಾವಿಂದು ಈ ಪಾಲಕ್ ಸೊಪ್ಪಿನ ಗ್ರೇವಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಪಾಲಕ್ ಗ್ರೇವಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಂಡು ನಾವು ಸಹ ಮನೆಯಲ್ಲಿ ಟ್ರೈ ಮಾಡೋಣ.
ಪಾಲಕ್ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಪಾಲಕ್ ಸೊಪ್ಪು 2 ಕಟ್ಟು
- ಈರುಳ್ಳಿ 1
- ಟೊಮೆಟೋ
- ಹಸಿ ಮೆಣಸಿನಕಾಯಿ
- ಫ್ರೆಶ್ ಕ್ರೀಮ್
- ಶುಂಠಿ-ಬೆಳ್ಳುಳ್ಳಿ ಪೇಸ್ಟ್
- ಖಾರದ ಪುಡಿ
- ಧನಿಯಾ ಪುಡಿ
- ಅರಿಶಿನದ ಪುಡಿ
- ಗರಂ ಮಸಾಲ
- ಕಡ್ಲೆಹಿಟ್ಟು
- ಜೀರಿಗೆ
- ಬೆಳ್ಳುಳ್ಳಿ
- ಸಕ್ಕರೆ
- ಉಪ್ಪು
- ಎಣ್ಣೆ
ಪಾಲಕ್ ಗ್ರೇವಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಚೆನ್ನಾಗಿ ಶೋಧಿಸಿಕೊಂಡಿರುವ ಪಾಲಕ್ ಸೊಪ್ಪನ್ನು ಹಾಕಿಕೊಳ್ಳಿ. ಸೊಪ್ಪು ಹೆಚ್ಚಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗೆ ಇಡಿಯಾಗಿ ಹಾಕಿ. 5 ನಿಮಿಷ ಸೊಪ್ಪು ಬೆಂದರೆ ಸಾಕು. ನಂತರ ಪಾತ್ರೆಯಿಂದ ಸೊಪ್ಪು ತೆಗೆದು ಅದನ್ನು ತಣ್ಣೀರಿನ ಬೌಲ್ಗೆ ಹಾಕಬೇಕು.
ಸೊಪ್ಪು ತಣ್ಣಗಾದ ಬಳಿಕ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಡಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಬಿಸಿಯಾದಾಗ ಅದಕ್ಕೆ ಜೀರಿಗೆ, ಚಿಕ್ಕದಾಗಿ ಹೆಚ್ಚಿಕೊಂಡ ಹಸಿ ಮೆಣಸು, ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
ಈಗ ಇದಕ್ಕೆ ಅರಶಿನ, ಖಾರದ ಪುಡಿ, ಧನಿಯಾ ಪುಡಿ, ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡುತ್ತಾ ಬಿಸಿ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಟೊಮೆಟೋ, ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿ. ಇದಾದ ಬಳಿಕ ರುಬ್ಬಿಕೊಂಡಿರುವ ಪಾಲಕ್ ಸೊಪ್ಪಿನ ಪೇಸ್ಟ್ ಅನ್ನು ಹಾಕಿಕೊಳ್ಳಿ. ಮಿಕ್ಸಿ ಜಾರ್ಗೆ ನೀರು ಹಾಕಿ ಅದನ್ನು ಕೂಡ ಬಾಣಲೆಗೆ ಹಾಕಿ ಹಾಗೆ ಸ್ವಲ್ಪ ಸಕ್ಕರೆ ಹಾಕಿ ಕಲಸಿಕೊಂಡು 5 ನಿಮಿಷ ಕುದಿಯಲು ಬಿಡಿ.
ಕುದಿಬರಲು ಆರಂಭಿಸಿದಾಗ ಫ್ರೇಶ್ ಕ್ರೀಮ್ ಹಾಕಿ ಕ್ರೀಮ್ ಇಲ್ಲದಿದ್ದರೂ ನಡೆಯಲಿದೆ. ಇದಕ್ಕೆ ಗರಂ ಮಸಾಲೆ ಹಾಕಿ 3 ನಿಮಿಷ ಕುದಿಸಿಕೊಳ್ಳಿ. ಒಟ್ಟು 5 ನಿಮಿಷ ಕುದಿಬಂದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ ಇದಕ್ಕೆ ಒಗ್ಗರಣೆ ಹಾಕಿ.
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿದರು ನಡೆಯುತ್ತೆ. ಇದಕ್ಕೆ ಜೀರಿಗೆ, ಸಣ್ಣಗೆ ಹೆಚ್ಚಿರುವ ಬೆಳ್ಳುಳ್ಳಿ, ಒಣ ಮೆಣಸು 2 ಹಾಕಿ ಫ್ರೈ ಮಾಡಿ. 1 ನಿಮಿಷದ ಬಳಿಕ ಇದನ್ನು ತೆಗೆದು ಪಾಲಕ್ ಗ್ರೇವಿಗೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ಗ್ರೇವಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೆಸಿಪಿ ಟ್ರೈ ಮಾಡಿ ನೋಡಿ.



Click it and Unblock the Notifications
