Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೇಕಾದಾಗ ರುಚಿ ರುಚಿಯ ತಿಳಿಸಾರು ಮಾಡಿ..! ಪುಡಿ ಮಾಡಿಕೊಳ್ಳುವ ವಿಧಾನವಿದು..!
ಸಾಮಾನ್ಯವಾಗಿ ಊಟದ ಜೊತೆಗೆ ಸಾಂಬಾರ್, ಪಲ್ಯ, ಚಟ್ನಿ, ಉಪ್ಪಿನಕಾಯಿ, ಮಜ್ಜಿಗೆ ಹೀಗೆ ಒಂದಲ್ಲಾ ಒಂದು ಇದ್ದೇ ಇರುತ್ತೆ. ಹಾಗೆ ಟೊಮೆಟೋ ಸಾರು ಅಥವಾ ತಿಳಿಸಾರು ಕೂಡ ಎಲ್ಲರ ಅಚ್ಚುಮೆಚ್ಚು. ಮತ್ತೆ ಕೆಲವರು ಗಡಿಬಿಡಿಯಲ್ಲಿದ್ದಾಗ ಅಥವಾ ತರಕಾರಿ ಇಲ್ಲದೇ ಇದ್ದಾಗ ಈ ತಿಳಿಸಾರು ಮಾಡುತ್ತಾರೆ. ಹಾಗೆ ಹೋಟೆಲ್ನಲ್ಲಿ, ಮದುವೆ ಮನೆಯಲ್ಲಿ, ದೇವಾಲಯದಲ್ಲಿ ಬಡಿಸುವ ತಿಳಿಸಾರು ಅದ್ಭುತ ರುಚಿ ನೀಡಲಿದೆ.
ಹಾಗೆ ಊಟದ ಕೊನೆಯಲ್ಲಿ ಸ್ವಲ್ಪ ತಿಳಿಸಾರು ಬಡಿಸಿಕೊಂಡು ಊಟ ಮಾಡಿದರೆ ಆ ಊಟ ಪೂರ್ಣ ಆದಂತೆ ಆಗುತ್ತದೆ. ಕೆಲವರಿಗೆ ರಾತ್ರಿ ಊಟಕ್ಕೆ ತಿಳಿಸಾರು ಬೇಕೇಬೇಕು. ಹಲವು ಪ್ರಕಾರವಾಗಿ, ಹಲವರು ರುಚಿಯಲ್ಲಿ ರಸಂ ಮಾಡಬಹುದು ಎಂಬುದನ್ನು ನಾವು ತಿಳಿದಿದ್ದೇವೆ. ಈಗಂತು ಮಾರುಕಟ್ಟೆಯಲ್ಲಿ ರೆಡಿಮೇಡ್ ರಸಂ ಪೌಡರ್ ತಂದು ಬಿಸಿ ನೀರಿಗೆ ಹಾಕಿ ಒಂದು ಒಗ್ಗರಣೆ ನೀಡಿದರೆ ರುಚಿಕರ ಸಾರು ರೆಡಿಯಾಗುತ್ತೆ.

ಆದ್ರೆ ನಾವು ತಿಳಿಸಾರಿಗೆ ಯಾವ ಮಸಾಲೆಗಳ ಬಳಸುತ್ತೇವೆ ಅನ್ನುವುದರ ಮೇಲೆ ಅದರ ರುಚಿ ಕೂಡ ನಿರ್ಧಾರ ಆಗುತ್ತೆ. ಹಾಗೆ ನಾವು ಪದೇ ಪದೇ ತಿಳಿಸಾರು ಮಾಡುವಾಗಲು ಅಂಗಡಿಯ ಮಸಾಲೆಯನ್ನೇ ಬಳಸಿ ಮಾಡುತ್ತಿರುತ್ತೇವೆ. ಆದ್ರೆ ನಾವಿಂದು ಮನೆಯಲ್ಲೇ ತಿಳಿಸಾರಿನ ಪುಡಿ ಮಾಡಿಕೊಂಡು ನಮಗೆ ಬೇಕಾದಾಗಲೆಲ್ಲ ಅದನ್ನು ಬಳಸಿ ತಿಳಿಸಾರು ಮಾಡುವ ಕುರಿತು ತಿಳಿದುಕೊಳ್ಳೋಣ.
ಹಾಗಾದ್ರೆ ಮನೆಯಲ್ಲೇ ತಿಳಿಸಾರಿನ ಪುಡಿ ಮಾಡಿಕೊಳ್ಳುವುದು ಹೇಗೆ? ತಿಳಿಸಾರಿನ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಈ ತಿಳಿಸಾರಿನ ಪುಡಿ ಮಾಡಿಕೊಳ್ಳಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಿಳಿಸಾರಿನ ಪುಡಿ ಮಾಡಲು ಬೇಕಾಗುವ ವಸ್ತುಗಳು
- ಬ್ಯಾಡಗಿ ಮೆಣಸು- 20
- ಕರಿಬೇವು
- ಜೀರಿಗೆ
- ಧನಿಯಾ ಕಾಳು
- ಮೆಂತ್ಯ
- ಸಾಸಿವೆ
- ಕಾಳು ಮೆಣಸು
- ಇಂಗು
- ಉಪ್ಪು
- ಎಣ್ಣೆ
ತಿಳಿಸಾರಿನ ಪುಡಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಳು ಮೆಣಸು, ಮೆಂತ್ಯ ಹಾಕಿ ಹುರಿದುಕೊಳ್ಳಿ. ನಂತರ ಜೀರಿಗೆ, ಸಾಸಿವೆ, ಧನಿಯಾ ಕಾಳು ಕೂಡ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಎಣ್ಣೆ ಸ್ವಲ್ಪ ಜಾಸ್ತಿ ಹಾಕಿ ಹುರಿದುಕೊಳ್ಳಿ. 2 ನಿಮಿಷ ಹುರಿದುಕೊಂಡ ಬಳಿಕ ಮತ್ತೆ ಇದಕ್ಕೆ ಕರಿಬೇವು ಹಾಕಿ.
ಅನಂತರ ಬ್ಯಾಡಗಿ ಮೆಣಸು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ. 2 ನಿಮಿಷಗಳ ಕಾಲ ಹುರಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಎಲ್ಲಾ ಮಸಾಲೆಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎಲ್ಲಾ ಮಸಾಲೆಗಳನ್ನು ಕೂಡ ಹಾಕಿ ರುಬ್ಬಿಕೊಳ್ಳಬೇಕು.
ರುಬ್ಬಿಕೊಳ್ಳುವಾಗ 1 ಸ್ಪೂನ್ ಉಪ್ಪು ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಈ ಪುಡಿ ನುಣ್ಣಗೆ ಆಗಬೇಕು ಆ ರೀತಿ ಪುಡಿ ಮಾಡಿಕೊಳ್ಳಿ. ಆದ್ರೆ ಅದು ಗಟ್ಟಿಯಾಗಿ ಇಲ್ಲವೆ ಅಂಟಾದ ರೀತಿಯಲ್ಲಿ ಬರಬಹುದು, ಏಕೆಂದರೆ ಎಣ್ಣೆ ಹಾಕಿರುವ ಕಾರಣ ಈ ರೀತಿ ಅಂಟಾಗುತ್ತದೆ. ಹಾಗೆ ಇದರ ಪುಡಿಯನ್ನು ಒಂದು ತಟ್ಟೆಗೆ ಹಾಕಿಕೊಂಡು ಮತ್ತೆ ತಣ್ಣಗಾಗಲು ಬಿಡಿ.
ಕೆಲ ಸಮಯದಲ್ಲಿ ಇದು ಸಂಪೂರ್ಣ ತಣ್ಣಗಾದಾಗ ಪುಡಿ ಪುಡಿಯಾಗುತ್ತದೆ. ಅನಂತರ ನೀವು ಯಾವುದಾದರು ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಇಷ್ಟಾದರೆ ನಿಮಗೆ ಬೇಕಾದಾಗ ತಿಳಿ ಸಾರು ಮಾಡಿ ಸವಿಯಲು ಇಡಬಹುದು. ಹಾಗೆ ಈ ಪುಡಿಯನ್ನು ತಿಂಗಳ ಕಾಲ ಸವಿಯಬಹುದು. ನೀವು ಕೂಡ ಇದೇ ರೀತಿ ತಿಳಿ ಸಾರಿನ ಪುಡಿಯನ್ನು ಮನೆಯಲ್ಲಿ ಮಾಡಿಟ್ಟುಕೊಳ್ಳಿ.



Click it and Unblock the Notifications
