Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಸಂಕ್ರಾಂತಿಗೆ ಸ್ಪೆಷಲ್ ಟೇಸ್ಟ್‌ನ ಖಾರ ಪೊಂಗಲ್: ಇಲ್ಲಿದೆ ಸರಿಯಾದ ವಿಧಾನ..
ಸಂಕ್ರಾಂತಿ ಹಬ್ಬದಲ್ಲಿ ಮನೆಯಲ್ಲೊಂದು ಸ್ವೀಟ್ ಮಾಡಿಯೇ ಮಾಡುತ್ತೀರಿ. ಅದರಲ್ಲೂ ವಿಶೇಷವಾಗಿ ಸಂಕ್ರಾಂತಿಗೆ ಎಳ್ಳು ಬೆಲ್ಲದ ಜೊತೆಗೆ ಪೊಂಗಲ್ ಮಾಡಿ ಸವಿಯುವುದು ಕಾಮನ್ ಹಾಗೆ ಖಾರ ಪೊಂಗಲ್ ಈ ದಿನ ಮಾಡುವ ಸಾಮಾನ್ಯ ಖಾದ್ಯ. ಸಂಕ್ರಾಂತಿ ಹಬ್ಬದಂದು ಪೊಂಗಲ್ ಮಾಡದಿದ್ದರೆ ಹಲವರು ಹಬ್ಬವನ್ನೇ ಆಚರಿಸುವುದಿಲ್ಲ. ಹಾಗೆ ತಮಿಳುನಾಡಿನಲ್ಲಿ ಪೊಂಗಲ್ ಇಲ್ಲದೆ ಈ ಹಬ್ಬ ಮುಗಿಯುವುದಿಲ್ಲ.
ನಾವಿಂದು ಈ ಸಂಕ್ರಾಂತಿಗೆ ವಿಶೇಷವಾಗಿ ಖಾರ ಪೊಂಗಲ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಖಾರ ಪೊಂಗಲ್ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ, ಬೆಳಗ್ಗೆ ತಿಂಡಿಗೆ ಸವಿಯಲು ಹಲವು ಇಷ್ಟಪಡುತ್ತಾರೆ. ಖಾರ ಖಾರವಾಗಿ ಬಾಯಿ ರುಚಿಯ ಹೆಚ್ಚಿಸುವ ಈ ತಿಂಡಿ ಸಂಕ್ರಾಂತಿಯಲ್ಲಿ ಕಡ್ಡಾಯ ಎನ್ನುವಂತೆ ಮಾಡುವುದುಂಟು.

ಹಾಗಾದ್ರೆ ಈ ಖಾರ ಪೊಂಗಲ್ ಮಾಡುವ ವಿಧಾನವೇನು? ಸುಲಭವಾಗಿ ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಪೊಂಗಲ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಂದು ತಿಳಿಯೋಣ. ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಪೊಂಗಲ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೆಸರು ಬೇಳೆ- 250 ಗ್ರಾಮ್
- ಅಕ್ಕಿ- 250 ಗ್ರಾಮ್
- ತುಪ್ಪ
- ಬೆಳ್ಳುಳ್ಳಿ
- ಶುಂಠಿ (ಜಜ್ಜಿಕೊಂಡಿರುವುದು)
- ಜೀರಿಗೆ
- ಅರಶಿಣ
- ಕರಿ ಮೆಣಸು
- ಗೋಡಂಬಿ
- ಹಸಿ ಮೆಣಸು
- ಕರಿಬೇವು
- ಕೊತ್ತಂಬರಿ
- ಉಪ್ಪು
- ಎಣ್ಣೆ
- ತೆಂಗಿನಕಾಯಿ
ಪೊಂಗಲ್ ಮಾಡುವ ವಿಧಾನವೇನು?
ಮೊದಲು ಅಕ್ಕಿ ಹಾಗೂ ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಎರಡು ಬಾರಿ ತೊಳೆದುಕೊಳ್ಳಿ. ಹಾಗೆ ಒಂದು ಕುಕ್ಕರ್‌ಗೆ ಹಾಕಿ ಅಳತೆಯ ಕಪ್‌ನಲ್ಲಿ ನೀರು ಹಾಕಿಕೊಳ್ಳಿ. 1 ಗ್ಲಾಸ್ ಅಕ್ಕಿ ಬೇಳೆ ತೆಗೆದುಕೊಂಡಿದ್ದರೆ 2 ಗ್ಲಾಸ್ ಅಥವಾ ಎರಡೂವರೆ ಗ್ಲಾಸ್ ನೀರು ಹಾಕಿಕೊಳ್ಳಬಹುದು. ಈಗ ಕುಕ್ಕರ್‌ಗೆ ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಬೇಯಿಸಿಕೊಳ್ಳಿ.
1 ಸೀಟಿ ಹೊಡೆಸಿಕೊಂಡರೆ ಸಾಕಾಗುತ್ತದೆ. ನಂತರ ಇದರ ಮುಚ್ಚಳ ತೆಗೆದು ಹದವಾಗಿದೆಯೇ ನೋಡಿ. ಒಂದು ವೇಳೆ ಅಕ್ಕಿ ಬೇಳೆ ಬೇಯದೇ ಇದ್ದರೆ ಕುಕ್ಕರ್ ಮುಚ್ಚಳ ತೆಗೆದು ಮತ್ತೆ ನೀರು ಹಾಕಿಕೊಂಡು ಮುಚ್ಚಳ ಹಾಕದೆಯೇ ಬೇಯಿಸಿಕೊಳ್ಳಬಹುದು. ನಿಮಗೆ ಯಾವ ಹದಕ್ಕೆ ಬೇಕೋ ಆ ಹದಕ್ಕೆ ಬೇಯಿಸಿಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ.
ಅನಂತರ ಜೀರಿಗೆ, ಗೋಡಂಬಿ, ಶುಂಠಿ, ಹಸಿ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿ. 1 ನಿಮಿಷ ಫ್ರೈ ಮಾಡಿಕೊಂಡು ಅರಶಿಣ, ಹಾಗೆ ಸಣ್ಣಗಾಗಿ ಹೆಚ್ಚಿಕೊಂಡಿರುವ ತೆಂಗಿನಕಾಯಿ ಹಾಕಿಕೊಂಡು ಫ್ರೈ ಮಾಡಿ ಆಫ್ ಮಾಡಿಕೊಳ್ಳಿ. ಈಗ ಕುಕ್ಕರ್‌ನಲ್ಲಿರುವ ಪೊಂಗಲ್‌ಗೆ ಈ ಒಗ್ಗರಣೆಯನ್ನು ಹಾಕಿಕೊಳ್ಳಿ. ಒಗ್ಗರಣೆ ಹಾಕಿದ ಬಳಿಕ ಮತ್ತೆ ಒಲೆ ಮೇಲೆ ಕಾಯಿಸಬೇಡಿ. ಕೊನೆಯಲ್ಲಿ ಕೊತ್ತಂಬರಿ, ಹಾಗೂ ತುಪ್ಪ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಖಾರ ಪೊಂಗಲ್ ರೆಡಿಯಾಗುತ್ತದೆ. ಹಬ್ಬದಲ್ಲಿ ಇದನ್ನು ಸವಿದು ನೋಡಿ.
ಹಬ್ಬಕ್ಕೆ ಮಾಡಿ ಸಖತ್ ರುಚಿಯ ಸಿಹಿ ಪೊಂಗಲ್..! ಮಾಡೋದು ಹೇಗೆ?
ನಾವು ಇದಕ್ಕೂ ಮೊದಲು ಸಿಹಿ ಪೊಂಗಲ್ ಮಾಡುವುದು ಹೇಗೆ ಎಂಬುದನ್ನು ಕೂಡ ತಿಳಿಸಿದ್ದೇವೆ. ಈ ಮೇಲಿನ ಲಿಂಕ್ ಮೂಲಕ ಅದನ್ನು ಕೂಡ ನೀವು ನೋಡಬಹುದು. ಸಿಹಿ ಪೊಂಗಲ್ ಅತ್ಯುತ್ತಮ ರುಚಿಯ ಪೊಂಗಲ್ ಆಗಿದೆ. ಹಬ್ಬದಲ್ಲಿ ಸಿಹಿ ಮಾಡುವ ಉದ್ದೇಶವಿದ್ದರೆ ಸಿಹಿ ಪೊಂಗಲ್ ಮೊದಲ ಆಯ್ಕೆಯಾಗುತ್ತದೆ.



Click it and Unblock the Notifications
