Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
1 ತಿಂಗಳ ಕಾಲ ಇಟ್ಟು ಸವಿಯಬಹುದು ಈ ಈರುಳ್ಳಿ ಚಟ್ನಿ; ಎಲ್ಲಾ ತಿಂಡಿ, ಊಟಕ್ಕೂ ಇದು ಸೈ!
ಬೆಳಗಿನ ತಿಂಡಿ ಹಾಗೆ ಊಟದ ಸಮಯಕ್ಕೆ ಸೈಡ್ ಡಿಷ್ ಆಗಿ ನೀವು ಹಲವು ರೀತಿ ಖಾದ್ಯಗಳ ಸವಿದಿರುತ್ತೀರಿ. ಅದ್ರಲ್ಲೂ ಊಟಕ್ಕೆ ರುಚಿ ತರುವಂತಹ ಚಟ್ನಿ, ಪಲ್ಯ, ಸೇರಿ ಹಲವು ರೀತಿ ಖಾದ್ಯಗಳ ಮಾಡಿರುತ್ತೀರಿ. ಹೀಗೆ ಊಟ ಹಾಗೆ ತಿಂಡಿಗೆ ಸಾಂಬಾರ್ ಜೊತೆಗೆ ಒಂದಿಷ್ಟು ಖಾದ್ಯ ಇದ್ದೇ ಇರಲಿದೆ. ಹಾಗೆ ಬೆಳಗ್ಗೆ ತಿಂಡಿಗೆ ಮಾಡುವ ಚಟ್ನಿ ಮಧ್ಯಾಹ್ನದ ಊಟಕ್ಕೂ ಸವಿಯಲು ಬಂದರೆ ಅದ್ಭುತವಾಗಿರಲಿದೆ. ಹೀಗಾಗಿ ಹಲವರು ಬೆಳಗ್ಗೆ ತಿಂಡಿಗೆ ಮಾಡುವ ಚಟ್ನಿಯುವ ಎಲ್ಲಾ ಖಾದ್ಯದೊಂದಿಗೆ ಹಾಗೆ ಊಟದೊಂದಿಗೂ ರುಚಿ ಬರುವಂತ ಆಯ್ಕೆಯನ್ನೇ ಮಾಡುತ್ತಾರೆ.
ಅದ್ರಲ್ಲೂ ಒಂದು ಸಲ ಮಾಡಿದ ತಿಂಡಿ ಹಲವು ದಿನಗಳ ಕಾಲ ಸವಿಯಲು ಸಿಗುವಂತಿದ್ದರೆ ಸಮಯವೂ ಉಳಿಸಬಹುದು. ಹೀಗಾಗಿ ನಾವಿಂದು ಒಂದು ತಿಂಗಳ ಕಾಲ ಇಟ್ಟು ಸವಿಯಬಹುದಾದ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ರುಚಿ ರುಚಿಯ ಈರುಳ್ಳಿ ಚಟ್ನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಈರುಳ್ಳಿ ಚಟ್ನಿಯೂ ತಿಂಡಿಯೊಂದಿಗೆ ಹಾಗೆ ಊಟದೊಂದಿಗೂ ಬಹಳ ರುಚಿ ನೀಡಲಿದೆ.

ಈರುಳ್ಳಿ ಬಳಸಿ ಮಾಡುವ ಈ ಚಟ್ನಿ ಬಹಳ ರುಚಿ ನೀಡಲಿದೆ. ಯಾವುದೇ ತಿಂಡಿ ಇದ್ದರೂ ಈ ಚಟ್ನಿ ಅದ್ಭತ ರುಚಿ ತರಲಿದೆ. ಹಾಗೆ ಊಟದೊಂದಿಗೆ ಕೂಡ ಇದನ್ನು ಸವಿಯಬಹುದು. ಇದರ ವಿಶೇಷ ಎಂದರೆ ನೀವು ಬಹಳ ಕಾಲ ಇದನ್ನು ಇಟ್ಟು ಸವಿಯಬಹುದು, ಹಾಗಾದ್ರೆ ಈ ಈರುಳ್ಳಿ ಚಟ್ನಿ ಮಾಡುವುದು ಹೇಗೆ? ಈ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ಇಲ್ಲಿದೆ.
ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ
- ಬೆಳ್ಳುಳ್ಳಿ
- ಸಾಸಿವೆ
- ಜೀರಿಗೆ
- ಮೆಂತ್ಯ
- ದನಿಯಾ ಕಾಳು
- ಕರಿಬೇವು
- ಖಾರದ ಪುಡಿ
- ಉಪ್ಪು
- ಎಣ್ಣೆ
- ಹುಣಸೆ ಹುಳಿ
- ಇಂಗು
- ಒಣ ಮೆಣಸು
ಈರುಳ್ಳಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ದನಿಯಾ ಕಾಳು, ಜೀರಿಗೆ, ಸಾಸಿವೆ, ಮೆಂತ್ಯ ಹಾಕಿಕೊಂಡು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಹುರಿದ ಬಳಿಕ ಇದನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಈಗ ಇದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಸ್ಲೈಸ್ ಮಾಡಿದ ಈರುಳ್ಳಿಗಳನ್ನು ಹಾಕಿಕೊಳ್ಳಿ. 6ರಿಂದ 7 ಈರುಳ್ಳಿಗಳನ್ನು ಬಳಸಿಕೊಳ್ಳಿ.
3 ನಿಮಿಷದ ಬಳಿಕ ಹುಣಸೆ ಹುಳಿ, ಉಪ್ಪು ಹಾಕಿಕೊಂಡು ಹುರಿದುಕೊಳ್ಳಬೇಕು. ಕೆಂಪು ಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ. ಅನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊದಲು ಹುರಿದುಕೊಂಡಿದ್ದ ದನಿಯಾ, ಸಾಸಿವೆ ಜೀರಿಗೆ ಮೆಂತ್ಯಗಳ ಹಾಕಿ, ಖಾರದ ಪುಡಿ ಸಹ ಹಾಕಿ. ಈಗ ನುಣ್ಣಗೆ ಪುಡಿ ಮಾಡಿ ಒಂದು ಬೌಲ್‌ಗೆ ಹಾಕಿಕೊಳ್ಳಿ.
ಈಗ ಅದೇ ಜಾರ್‌ಗೆ ಹುರಿದುಕೊಂಡ ಈರುಳ್ಳಿ, ಹುಣಸೆ ಹುಳಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿಯೇ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಹುರಿದುಕೊಂಡು ಬಳಿಕ ಇದಕ್ಕೆ ಒಣ ಮೆಣಸು, ಕರಿಬೇವು, ಇಂಗು, ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ರುಬ್ಬಿಕೊಂಡಿದ್ದ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿಕೊಂಡು ಹುರಿದುಕೊಳ್ಳಿ.
2 ನಿಮಿಷ ಬಿಟ್ಟು ಮೊದಲು ರುಬ್ಬಿದ್ದ ಮಸಾಲೆ ಪುಡಿಗಳನ್ನು ಇದಕ್ಕೆ ಹಾಕಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಬೇಕು. ಇದು ಗಟ್ಟಿಯಾಗಿ ಇರಲಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇದು ಎಣ್ಣೆ ಬಿಟ್ಟುಕೊಳ್ಳಲು ಆರಂಭಿಸಲಿದೆ. ಹಾಗೆ ಉಪ್ಪು ಸೇರಿಸಿಕೊಂಡು ಮಿಶ್ರಣ ಮಾಡಿ ಕುದಿಬರುತ್ತಾ, ಮಿಕ್ಸ್ ಮಾಡುತ್ತಾ ಇರಿ. ಇದು 15 ರಿಂದ 20 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದು ಕೆಂಪು ಬಣ್ಣಕ್ಕೆ ತಿರುಗಲಿದೆ. ಇಷ್ಟಾದರೆ ಎಲ್ಲರಿಗೂ ಇಷ್ಟವಾಗುವ ಚಟ್ನಿ ಸಿದ್ದವಾಗುತ್ತೆ.



Click it and Unblock the Notifications
