Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಒಂದು ಹನಿ ಎಣ್ಣೆ ಬಳಸದೆ ಈ ಮಸಾಲ ಶೇಂಗಾ ಕಡಲೆ ಮಾಡಿ! 5 ನಿಮಿಷ ಸಾಕು!
ನೀವು ಮನೆಯಲ್ಲಿದ್ದಾಗ ಸಂಜೆ ಸಮಯದಲ್ಲಿ ಯಾವುದಾದರು ಸ್ನ್ಯಾಕ್ಸ್ ಮಾಡಿ ಸವಿಯಲು ಮುಂದಾಗಿರಬಹುದು. ಇಲ್ಲವೆ ಅಂಗಡಿಯಿಂದ ಖರೀದಿಸಿ ತರುವ ಹಲವು ರೀತಿಯ ತಿಂಡಿಗಳನ್ನು ಸವಿಯೋದು ನಿಮಗೆ ಇಷ್ಟವಾಗಿರಬಹುದು. ಅದ್ರಲ್ಲೂ ಮಸಾಲೆ ಭರಿತ ಯಾವುದಾದರು ತಿಂಡಿಗಳು ಬೇಕು ಅಂದ್ರೆ ಕಡಲೆಗಳು ನಿಮ್ಮ ನೆನಪಿಗೆ ಬರಬಹುದು. ಅಂಗಡಿ, ಬೇಕರಿಗಳಲ್ಲಿ ವಿವಿಧ ರುಚಿಯ ಹಾಗೆ ವಿವಿಧ ಬಗೆಯಲ್ಲಿ ಮಾಡುವ ಮಸಾಲೆ ಭರಿತ ಕಡಲೆಗಳು ಈಗ ಸಿಗುತ್ತವೆ. ಇವು ನಿಮ್ಮ ಬಾಯಲ್ಲಿ ನೀರು ತರಿಸಿರುತ್ತವೆ.
ಆದ್ರೆ ನೀವು ಮನೆಯಲ್ಲಿ ಶೇಂಗಾ ಕಡಲೆ ಬಳಸಿಕೊಂಡು ರುಚಿ ರುಚಿಯಾದ, ಬಾಯಲ್ಲಿ ನೀರು ತರಿಸುವಂತಹ ಮಸಾಲೆ ಕಡಲೆಯನ್ನು ಮಾಡಿದ್ದೀರಾ? ನೀವು ಅಂಗಡಿಯಲ್ಲಿ ಸಿಗುವ ಕೆಂಪು ಕಡಲೆಯನ್ನು ಸವಿದಿರಬಹುದು. ಅದಕ್ಕಿಂತಲೂ ರುಚಿಯಾಗಿ ಮನೆಯಲ್ಲಿಯೇ ನೀವು ಕಡಲೆಯನ್ನು ಮಾಡಬಹುದು. ಬಹಳ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಮಸಾಲೆ ಕಡಲೆ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ಕಡಲೆಯಲ್ಲಿ ಹಲವು ರೀತಿಯ ರುಚಿಯನ್ನು ನಾವು ಸವಿದಿರುತ್ತೇವೆ. ಆದ್ರೆ ಮಸಾಲೆ ಭರಿತ ಕಡಲೆಯನ್ನು ಸಂಜೆಯ ಸಮಯದಲ್ಲಿ ಸವಿಯಲು ಇಷ್ಟಪಡುತ್ತೇವೆ. ಹಾಗೆ ಸವಿಯಲು ಯಾವುದೇ ತಿಂಡಿ ಇಲ್ಲದಿದ್ದಾಗ ಮಸಾಲೆ ಕಡಲೆ ನೆನಪಿಗೆ ಬರಬಹುದು. ನಾವಿಂದು ಈ ಮಸಾಲೆ ಶೇಂಗಾ ಕಡಲೆಯನ್ನು ಮನೆಯಲ್ಲೇ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.
ಶೇಂಗಾ ಮಸಾಲೆ ಕಡಲೆ ಮಾಸಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ಮಸಾಲ ಶೇಂಗಾ ಕಡಲೆ ಮಾಡಲು ಬೇಕಾಗುವ ಪದಾರ್ಥಗಳು
- ಶೇಂಗಾ
- ಖಾರದ ಪುಡಿ
- ಅರಶಿಣ
- ಉಪ್ಪಿ
- ಚಾಟ್ ಮಸಾಲ
ಮಸಾಲ ಶೇಂಗಾ ಕಡಲೆ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ಹಸಿ ಶೇಂಗಾ ಬೀಜವನ್ನು ಹಾಕಿಕೊಂಡು ಹುರಿದುಕೊಳ್ಳಬೇಕು. ಕಡಲೆ ಗರಿ ಗರಿಯಾಗುವಂತೆ ಹುರಿಯಬೇಕು. ಸಣ್ಣ ಉರಿಯಲ್ಲಿ ಇಟ್ಟುಕೊಂಡು ಹುರಿಯಬೇಕು. ಸಿಪ್ಪೆ ಬಿಟ್ಟುಕೊಂಡರೂ ಸಮಸ್ಯೆಯಿಲ್ಲ ಆದ್ರೆ ಚೆನ್ನಾಗಿ ಹುರಿದುಕೊಳ್ಳಬೇಕು. ಗರಿಗರಿಯಾಗಬೇಕು. ಇದಕ್ಕೆ ಎಣ್ಣೆ ಬಳಸದೆಯೇ ಮಾಡಬಹುದು.
ಈಗ ಹುರಿದ ಶೇಂಗಾವನ್ನು ತೆಗೆದು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ಖಾರದ ಪುಡಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಸ್ಪೂನ್ ಚಾಟ್ ಮಸಾಲ, ಅರಶಿಣ, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದೊಂದು ಪೇಸ್ಟ್ ರೀತಿಯಲ್ಲಿ ಬರಬೇಕು. ಈಗ ಫ್ರೈ ಮಾಡಿಕೊಂಡ ಕಡಲೆ ಮೇಲೆ ಈ ಪೇಸ್ಟ್ ಅನ್ನು ಹಾಕಿಕೊಂಡು ಎಲ್ಲಾ ಕಡಲೆಗೂ ಮಿಶ್ರಣ ಹಿಡಿಯುವಂತೆ ಕೈಯಿಂದ ಮಿಕ್ಸ್ ಮಾಡಿ.
ಮಸಾಲೆ ಎಲ್ಲಾ ಕಡಲೆಗೂ ಹಿಡಿಯುವಂತೆ ಮಾಡಿಕೊಳ್ಳಿ. ಚೆನ್ನಾಗಿ ಮಸಾಲೆ ಅಂಟಿಕೊಂಡಿರಬೇಕು. ಈಗ ಈ ಮಸಾಲೆ ಹಚ್ಚಿರುವ ಕಡಲೆಯನ್ನು ಒಂದು ಬಾಣಲೆಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಮತ್ತೆ ಫ್ರೈ ಮಾಡಬೇಕು. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಹುರಿದುಕೊಳ್ಳಿ. ಎಣ್ಣೆ ಹಾಕುವ ಅಗತ್ಯವಿಲ್ಲ.
ಇದನ್ನ ರೋಸ್ಟ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಒಂದು ವೇಳೆ ಇದು ಬಣ್ಣ ಬರಲಿಲ್ಲ ಅಥವಾ ಆ ಬಣ್ಣ ನಿಮಗೆ ಹಿಡಿಸಲಿಲ್ಲ ಎಂದರೆ ಮೊದಲು ಮಸಾಲೆ ಮಿಕ್ಸ್ ಮಾಡುವಾಗ ಕೆಂಪು ಬಣ್ಣವನ್ನು ಸೇರಿಸಿಕೊಂಡರೆ ಈ ಕಡಲೆ ಕೆಂಪು ಬಣ್ಣದಲ್ಲಿ ಬರಲಿದೆ. ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯಾದ ಶೇಂಗಾ ಮಸಾಲೆ ಕಡಲೆ ಸಿದ್ದವಾಗುತ್ತೆ. ಇದನ್ನು ಕೆಲವು ದಿನಗಳ ಕಾಲ ಇಟ್ಟು ಸವಿಯಬಹುದು.



Click it and Unblock the Notifications