Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಹೆಲ್ತ್ಗೆ ಗುಡ್, ಟೇಸ್ಟಿಗೆ ಬೆಸ್ಟ್! ಇಂಥ ಶುಂಠಿ ಚಟ್ನಿ ನೀವು ಇನ್ನೂ ಟ್ರೈ ಮಾಡಿಲ್ಲ
ಈ ಶುಂಠಿ ಚಟ್ನಿ ಬಾಯಲ್ಲಿ ನೀರೂರಿಸುತ್ತೆ. ದೋಸೆ ಜೊತೆ ಸಾಂಬಾರ್ ಅಲ್ಲ, ಇದನ್ನು ಟ್ರೈ ಮಾಡಿ ಆರೋಗ್ಯವಾಗಿರ್ತೀರಾ. ಹೌದು, ದಕ್ಷಿಣ ಭಾರತ ಶೈಲಿಯ ಶುಂಠಿ ಚಟ್ನಿ (Ginger Chutney), ರುಚಿಯಲ್ಲಿ ಅದ್ಭುತ ಮತ್ತು ಆರೋಗ್ಯಕ್ಕೂ ಉತ್ತಮ. ಇದು ಇಡ್ಲಿ, ದೋಸೆ ಜೊತೆಹೆ ಸವಿಯಲು ಹೇಳಿ ಮಾಡಿಸಿದಂತಿದೆ. ಸಾಂಬಾರ್ ಮತ್ತು ಕಾಯಿ ಚಟ್ನಿಯೊಂದಿಗೆ ಶುಂಠಿ ಚಟ್ನಿ ಸವಿದರೆ ಊಟದ ರುಚಿಯೇ ಬದಲಾಗುತ್ತೆ. ಇದು ಜೀರ್ಣಕ್ರಿಯೆಗೂ ಸಹಾಯಕ. ಇಂತಹ ಆರೋಗ್ಯಕರ ಹಾಗೂ ರುಚಿಕರವಾದ ಶುಂಠಿ ಚಟ್ನಿಯನ್ನು ಮನೆಯಲ್ಲಿಯೇ ಮಾಡಿ ಸವಿಯಿರಿ.
ಶುಂಠಿಯಲ್ಲಿರುವ ಜಿಂಜರಾಲ್ ಎಂಬ ಅಂಶವು ಉರಿಯೂತ ನಿವಾರಕ ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಶುಂಠಿ ಚಟ್ನಿ ಒಂದು ಆರೋಗ್ಯಕರವಾದ ಖಾದ್ಯವಾಗಿದೆ. ಇದನ್ನು ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದು. ಇದು ಪರಾಟ, ದಾಲ್-ರೈಸ್ ಅಥವಾ ಯಾವುದೇ ಇತರೆ ಆಹಾರದೊಂದಿಗೆ ಸವಿಯಲು ಸೂಕ್ತ. ಈಗ ಶುಂಠಿ ಚಟ್ನಿಯನ್ನು ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ. ಶುಂಠಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಶುಂಠಿ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಶುಂಠಿ - 100 ಗ್ರಾಂ
• ಬೆಳ್ಳುಳ್ಳಿ - 4 ರಿಂದ 5 ಎಸಳು (2 ಸ್ಪೂನ್)
• ಕಡಲೇ ಬೇಳೆ - 1 ಸ್ಪೂನ್
• ಉದ್ದಿನ ಬೇಳೆ - 1 ಸ್ಪೂನ್
• ಮೆಂತ್ಯ ಕಾಳು - 1/4 ಸ್ಪೂನ್
• ಜೀರಿಗೆ - 1 ಸ್ಪೂನ್
• ಹುಣಸೆಹಣ್ಣು - 50 ಗ್ರಾಂ
• ಒಣ ಕೆಂಪು ಮೆಣಸಿನಕಾಯಿ - 25 ರಿಂದ 30
• ಕೊತ್ತಂಬರಿ ಬೀಜಗಳು - 1 ಸ್ಪೂನ್
• ಎಣ್ಣೆ - 2 ರಿಂದ 3 ಸ್ಪೂನ್
• ಉಪ್ಪು - ರುಚಿಗೆ ತಕ್ಕಂತೆ
• ನೀರು - ಅರ್ಧ ಕಪ್
• ಸಾಸಿವೆ - 1 ಸ್ಪೂನ್
• ಇಂಗು - ಚಿಟಿಕೆ
• ಕರಿಬೇವಿನ ಎಲೆಗಳು - ಸ್ವಲ್ಪ
• ಕೆಂಪು ಮೆಣಸಿನಕಾಯಿಗಳು - 2 ರಿಂದ 3
• ಬೆಲ್ಲ - 1 ಸಣ್ಣ ತುಂಡು

ಶುಂಠಿ ಚಟ್ನಿ ಮಾಡುವ ವಿಧಾನ
ಮೊದಲಿಗೆ, ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ. 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ. ತಣ್ಣಗಾದ ಬಳಿಕ, ಹುಣಸೆಹಣ್ಣು, ಉಪ್ಪು ಮತ್ತು ಬೆಲ್ಲ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನುಣ್ಣಗೆ ಅಥವಾ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬಹುದು. ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಒಣ ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಷ್ಟು ಮಾಡಿದರೆ ಶುಂಠಿ ಚೆಟ್ನಿ ರೆಡಿ.

ಶುಂಠಿ ಚಟ್ನಿಯ ಆರೋಗ್ಯಕರ ಗುಣಗಳು
ಶುಂಠಿಯು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಮೊದಲೇ ಹೇಳಿದಂತೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಚಟ್ನಿಯನ್ನು ತಯಾರಿಸಲು ಕೇವಲ 5 ನಿಮಿಷ ಸಾಕು. ಇದು ನಿಮ್ಮ ಊಟಕ್ಕೆ ಒಂದು ವಿಶೇಷ ರುಚಿಯನ್ನು ನೀಡುತ್ತದೆ. ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ, ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಉತ್ತಮ.



Click it and Unblock the Notifications