Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
2 ನಿಮಿಷದಲ್ಲಿ ಬೆಳ್ಳುಳ್ಳಿ ಚಟ್ನಿ ಮಾಡೋದು ಹೇಗೆ? 3 ವಸ್ತು ಇದ್ದರೆ ಸಾಕಾಗುತ್ತೆ!!
ಮನೆಯಲ್ಲಿ ತಿಂಡಿಗೆ ಒಂದು ಚಟ್ನಿ ಮಾಡಿರುತ್ತೀರಿ. ರುಚಿ ರುಚಿಯಾಗಿ ಒಂದಿಷ್ಟು ತಿಂಡಿ ಹೆಚ್ಚಿಗೆ ತಿನ್ನುವಂತೆ ಮಾಡುವ ಹಲವು ಬಗೆಯ ಚಟ್ನಿ ಸವಿದಿರುತ್ತೀರಿ. ಒಂದೊಂದು ತಿಂಡಿಗೂ ಒಂದೊಂದು ಬಗೆಯಲ್ಲಿ ಚಟ್ನಿ ಮಾಡಿ ಸವಿದಿರುತ್ತೀರಿ. ದೋಸೆಗೆ ಒಂದು, ಇಡ್ಲಿ, ಪಲಾವ್, ಚಿತ್ರಾನ್ನ ಹೀಗೆ ಒಂದೊಂದು ರೀತಿ ತಂಡಿ ಮಾಡಿ ಸವಿಯಲು ನೀಡುವುದು ಸಾಮಾನ್ಯ. ಹೆಚ್ಚಾಗಿ ತೆಂಗಿನ ಕಾಯಿ ಬಳಸಿ, ಹಾಗೆ ಹುರಿಗಡಲೆ, ಕಡಲೆ ಬೀಜದಂತಹ ವಿಶೇಷ ರುಚಿಯ ಚಟ್ನಿ ಕೂಡ ಮಾಡಿ ಸವಿಯುತ್ತೇವೆ.
ಇನ್ನು ವಿಶಿಷ್ಟ ರುಚಿಯಲ್ಲಿ ಕೆಲವೊಂದು ಚಟ್ನಿ ಮಾಡಿ ಸವಿಯೋದು ಇದೆ. ಅದರಲ್ಲೂ ಟೊಮೆಟೋ ಚಟ್ನಿ, ಹಸಿ ಮೆಣಸಿನ ಚಟ್ನಿ, ತರಕಾರಿ ಚಟ್ನಿ ಹಾಗೆ ಬೆಳ್ಳುಳ್ಳಿ ಚಟ್ನಿ ಕೂಡ ತಿಂಡಿ, ಊಟಕ್ಕೆ ಅದ್ಭುತ ರುಚಿ ನೀಡಲಿದೆ. ನಾವಿಂದು ಈ ಬೆಳ್ಳುಳ್ಳಿ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಬೆಳ್ಳುಳ್ಳಿ ಚಟ್ನಿ ಒಮ್ಮೆ ಮಾಡಿದರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ.

ಈ ಬೆಳ್ಳುಳ್ಳಿ ಚಟ್ನಿ ತಿಂಡಿಗೆ ನೀವು ಮಾಡಿದ್ರೆ ಒಳ್ಳೆಯ ರುಚಿ ನೀಡುತ್ತೆ. ಈ ಚಟ್ನಿಯನ್ನು ಮಾಡಿ ಒಂದಿಷ್ಟು ದಿನ ಇಟ್ಟು ಕೂಡ ಸವಿಯಬಹುದು. ಹಾಗಾದ್ರೆ ಈ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಬೆಳ್ಳುಳ್ಳಿ ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೆಳ್ಳುಳ್ಳಿ
- ಸಾಸಿವೆ
- ಜೀರಿಗೆ
- ಉಪ್ಪು
- ಎಣ್ಣೆ
- ಒಣ ಮೆಣಸು
- ಈರುಳ್ಳಿ
- ಉದ್ದಿನ ಬೇಳೆ
- ಹುಣಸೆ ಹಣ್ಣು
- ಇಂಗು
- ಕರಿಬೇವು
ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನವೇನು?
ಮೊದಕು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿ ಇದಕ್ಕೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಗುಂಟೂರು ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಬೇಕಾದರೆ ನೀವು ಇಲ್ಲಿ ಜೀರಿಗೆ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಬಹುದು. ಈ ಮಸಾಲೆಯನ್ನು ತಣ್ಣಗಾಗಲು ಬಿಡಬೇಕು.
ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ, ಹುಣಸೆ ಹಣ್ಣು, ಉಪ್ಪು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು, ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಪಾತ್ರೆಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಉದ್ದಿನ ವೇಳೆ, ಇಂಗು, ಕರಿಬೇವು ಹಾಕಿಕೊಳ್ಳಿ. ಹಾಗೆ ಇದಕ್ಕೆ ರುಬ್ಬಿಕೊಂಡಿರುವ ಚಟ್ನಿಯನ್ನು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜಾರ್ ಅನ್ನು ತೊಳೆದು ಸ್ವಲ್ಪ ನೀರು ಮಾಡಿ ಇದಕ್ಕೆ ಹಾಕಿಕೊಳ್ಳಿ. 2ರಿಂದ 3 ನಿಮಿಷ ಕುದಿಯಲು ಬಿಡಿ. ಸಣ್ಣ ಉರಿಯಲು ಕುದಿಯಲು ಬಿಡಬೇಕು.
ಈಗ ಒಲೆ ಆಫ್ ಮಾಡಿಕೊಂಡು ಬೆಳಗ್ಗೆ ತಿಂಡಿಯ ಜೊತೆಗೆ ಸವಿಲು ನೀಡಿದರೆ ನಿಮ್ಮ ಮುಂದೆ ರುಚಿ ರುಚಿಯ ಬೆಳ್ಳುಳ್ಳಿ ಚಟ್ನಿ ರೆಡಿಯಾಗುತ್ತದೆ. ಇದನ್ನು ಒಂದು ವಾರಗಳ ಕಾಲ ಇಟ್ಟು ಬೇಕಾದರು ಸವಿಯಬಹುದು. ನೀವು ಕೂಡ ಒಮ್ಮೆ ಮನೆಯಲ್ಲ ಈ ಬೆಳ್ಳುಳ್ಳಿ ಚಟ್ನಿ ಮಾಡಿ ನೋಡಿ. ಎಲ್ಲಾ ಖಾದ್ಯಗಳ ಜೊತೆಗೂ ಇದು ಅದ್ಭುತ ರುಚಿ ನೀಡಲಿದೆ.



Click it and Unblock the Notifications
