Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸ್ಪೈಸಿ ಎಗ್ ಮಸಾಲ ಫ್ರೈ ಮಾಡಿ ಸವಿದು ನೋಡಿ..! ಯಾವೆಲ್ಲಾ ಮಸಾಲೆ ಬಳಸಬೇಕು?
ಊಟದ ಜೊತೆಗೆ ಹಲವು ರೀತಿಯ ಖಾದ್ಯಗಳ ಸವಿಯುವುದು ನಿಮ್ಮ ರುಚಿಕರ ಅಡುಗೆಯ ರುಚಿ ಮತ್ತಷ್ಟು ಹೆಚ್ಚಾಗಿಸುತ್ತೆ. ಅದರಲ್ಲು ನಾನ್ ವೆಜ್ ಪ್ರಿಯರು ಹಾಗೆ ವೆಜ್ ಪ್ರಿಯರು ಇಬ್ಬರು ಸವಿಯುವಂತಹ ಮೊಟ್ಟೆಯಿಂದ ಮಾಡುವ ಎಲ್ಲಾ ಖಾದ್ಯ ನಿಮಗೆ ಇಷ್ಟವಾಗಬಹುದು. ಅದರಲ್ಲೂ ಮೊಟ್ಟೆ ಕರಿ, ಮೊಟ್ಟೆ ಸಾಂಬಾರ್, ಮೊಟ್ಟೆ ಫ್ರೈ, ಮೊಟ್ಟೆ ಮಸಾಲೆ ಹೀಗೆ ಹತ್ತು ಹಲವು ರೀತಿಯ ರುಚಿ ರುಚಿ ಖಾದ್ಯ ಮಾಡಿ ಸವಿದಿರುತ್ತೀರಿ.
ಮೊಟ್ಟೆ ಆರೋಗ್ಯಕ್ಕೆ ಬಹಳ ಉತ್ತಮ ಆಹಾರ ಅನ್ನೋದನ್ನು ನೀವು ತಿಳಿದಿದ್ದೀರಿ. ಮೊಟ್ಟೆಯಲ್ಲಿನ ಪ್ರೋಟಿನ್ ದೇಹಕ್ಕೆ ಬಹಳ ಉತ್ತಮ. ಹೀಗಾಗಿ ದಿನಕ್ಕೊಂದು ಬೇಯಿಸಿದ ಮೊಟ್ಟೆ ಸವಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇನ್ನು ಈ ಮೊಟ್ಟೆಯಿಂದ ಮಾಡುವಂತಹ ಹಲವು ಖಾದ್ಯಗಳ ಪೈಕಿ ಮೊಟ್ಟೆ ಬಿರಿಯಾನಿ ಎಲ್ಲರ ಫೇವರಿಟ್ ಆಗಿರಬಹುದು.

ಆದ್ರೆ ನಾವಿಂದು ಊಟದ ರುಚಿ ದುಪ್ಪಟ್ಟಾಗಿಸುವಂತಹ ಖಾರ ಖಾರ ಮಸಾಲೆಯುಕ್ತ ಎಗ್ ಫ್ರೈ ಮಾಡಿ ಸವಿಯೋಣ. ಎಗ್ ಮಸಾಲೆ ಫ್ರೈ ಎಲ್ಲರಿಗೂ ಬಹಳ ಇಷ್ಟವಾಗುವ ಖಾದ್ಯ, ಊಟದ ಜೊತೆಗಂತು ಅದರ ರುಚಿ ದುಪ್ಪಟ್ಟಾಗುತ್ತೆ, ನೀವು ಕೂಡ ಅದ್ಭುತ ರುಚಿಯ ಈ ಮೊಟ್ಟೆ ಮಸಾಲೆಯನ್ನು ಒಮ್ಮೆ ಮಾಡಿ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ.
ನಿಮ್ಮ ನಾಲಿಗೆ ಕೆಟ್ಟಿದ್ದರಂತು ಈ ರುಚಿಯ ಮಸಾಲೆಗಳು ನಿಮ್ಮ ರುಚಿ ದುಪ್ಪಟ್ಟಾಗಿಸುತ್ತೆ. ಹಾಗಾದ್ರೆ ಈ ಎಗ್ ಫ್ರೈ ಮಸಾಲೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಗ್ ಫ್ರೈ ಮಸಾಲ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಮೊಟ್ಟೆ - 6
ಒಣ ಮೆಣಸು
ಜೀರಿಗೆ
ಧನಿಯಾ ಕಾಳು
ದಾಲ್ಚಿನ್ನಿ
ಲವಂಗ - 4
ಖಾರದ ಪುಡಿ
ಗರಂ ಮಸಾಲ ಪುಡಿ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಕಾಳು ಮೆಣಸಿನ ಪುಡಿ
ಎಗ್ ಫ್ರೈ ಮಸಾಲ ಮಾಡುವ ವಿಧಾನವೇನು?
ಮೊದಲು 6 ಮೊಟ್ಟೆಗಳನ್ನು ಬೇಯಿಸಿಕೊಂಡು ಅದರ ಸಿಪ್ಪೆ ತೆಗೆದು ಮಧ್ಯದಲ್ಲಿ ಕತ್ತರಿಸಿ ಎರಡು ಭಾಗ ಮಾಡಿ ಇಟ್ಟುಕೊಳ್ಳಿ. ಈಗ ಒಂದು ಬಾಣಲೆ ಇಟ್ಟು ಅದಕ್ಕೆ ಸೋಂಪುಕಾಳು, ಕಾಳು ಮೆಣಸು, ಜೀರಿಗೆ, ಧನಿಯಾ ಕಾಳು, ಲವಂಗ, ಚಕ್ಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ತೆಗೆದು ಒಂದು ಬೌಲ್ಗೆ ಹಾಕಿ ತಣ್ಣಗಾಗಲು ಬಿಡಿ.
ನಂತರ ಈ ಮಸಾಲೆಗಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಿ. ಪೂರ್ತಿ ನುಣ್ಣಗೆ ಪುಡಿ ಮಾಡಿಕೊಳ್ಳುವ ಅಗತ್ಯವಿಲ್ಲ. ಈಗ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಖಾರದ ಪುಡಿ, ಅರಶಿಣ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಎಲ್ಲಾ ಮೊಟ್ಟೆಗಳನ್ನು ಇದಕ್ಕೆ ಹಾಕಿ 2 ನಿಮಿಷ ಫ್ರೈ ಮಾಡಿ.
ನಂತರ ಎಲ್ಲಾ ಮೊಟ್ಟೆಗಳನ್ನು ತೆಗೆದು ಮತ್ತೊಂದು ತಟ್ಟೆಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಟೊಮೆಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಸ್ವಲ್ಪ, ಉಪ್ಪು ಹಾಕಿಕೊಂಡು ಮತ್ತೆ ಫ್ರೈ ಮಾಡುತ್ತಾ ಮಿಕ್ಸ್ ಮಾಡಿ. ಈಗ ಮಿಕ್ಸಿಯಲ್ಲಿ ರುಬ್ಬಿರುವ ಮಸಾಲೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಳ್ಳಿ.
ನಂತರ ಈ ಮಸಾಲೆಗೆ ಮೊಟ್ಟೆಗಳನ್ನು ಹಾಕಿ, ನಿಧಾನವಾಗಿ ಮಿಕ್ಸ್ ಮಾಡಿ ಎಲ್ಲಾ ಮಸಾಲೆಗಳು ಚೆನ್ನಾಗಿ ಹಿಡಿಯಲು ಬಿಡಿ. 1 ನಿಮಿಷದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿದರೆ ಈ ಎಗ್ ಮಸಾಲೆ ಫ್ರೈ ರೆಡಿಯಾಗುತ್ತೆ.



Click it and Unblock the Notifications