Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಚಿಕನ್ ಲವರ್ಸ್ಗಾಗಿ.. ಒಮ್ಮೆ ಚಿಕನ್ ದೋಸೆ ಟ್ರೈ ಮಾಡಿ! ಸಿಕ್ಕಾಪಟ್ಟೆ ಈಸಿ
ದೋಸೆ ಬಹುತೇಕರ ಫೇಮಸ್ ತಿಂಡಿ. ಬೆಳಗ್ಗಿನ ಉಪಾಹಾರಕ್ಕೆ ಮಾತ್ರವಲ್ಲದೆ, ಊಟದ ಬದಲು ಏನನ್ನಾದರೂ ತಿನ್ನಬೇಕೆನಿಸಿದಾಗ ದೋಸೆ ಇಷ್ಟಪಡುತ್ತಾರೆ. ದೋಸೆಯಲ್ಲಿ ಪ್ಲೈನ್ ದೋಸೆ ಮಾತ್ರವಲ್ಲದೆ, ಈರುಳ್ಳಿ ದೋಸೆ, ಮಸಾಲಾ ದೋಸೆ, ಬಟರ್ ದೋಸೆ ಹೀಗೆ ಹಲವಾರು ವಿಧಗಳಿವೆ. ಆದರೆ, ನಾನ್ ವೆಜ್ ಪ್ರಿಯರಿಗೆ ಚಿಕನ್ ದೋಸೆ (Chicken Dosa) ಒಂದು ಸ್ಪೆಷಲ್ ಆಯ್ಕೆ. ಮಕ್ಕಳು, ದೊಡ್ಡವರು ಎನ್ನದೆ ನಾನ್ ವೆಜ್ ಪ್ರಿಯರು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ದೋಸೆ ರುಚಿಕರ ಮಾತ್ರವಲ್ಲದೆ, ಪ್ರೋಟೀನ್ನಿಂದ ಸಮೃದ್ಧವಾಗಿದೆ. ನಾನ್ ವೆಜ್ ತಿನ್ನುವವರಿಗೆ ಇದು ಒಂದು ವಿಭಿನ್ನ ಅನುಭವ ನೀಡುತ್ತದೆ. ಬನ್ನಿ, ಚಿಕನ್ ದೋಸೆ ತಯಾರಿಸುವ ವಿಧಾನದ (Chicken Dosa Recipe) ಬಗ್ಗೆ ತಿಳಿಯೋಣ.
ದೋಸೆ ತಿನ್ನಲು ಇಷ್ಟಪಡುವವರು, ಅದರಲ್ಲೂ ಸ್ಟಫ್ಡ್ ದೋಸೆಗಳನ್ನು ಇಷ್ಟಪಡುವವರು ಮಸಾಲ ದೋಸೆಯ ಬದಲಿಗೆ ಚಿಕನ್ ದೋಸೆ ಟ್ರೈ ಮಾಡಬಹುದು. ನೀವು ಚಿಕನ್ ಕರಿ, ಚಿಕನ್ ಟಿಕ್ಕಾ ಅಥವಾ ಚಿಕನ್ ಬಿರಿಯಾನಿಯನ್ನು ಅನೇಕ ಬಾರಿ ತಿಂದಿರಬಹುದು. ಆದರೆ, ಪ್ರೋಟೀನ್ ಹೆಚ್ಚಿರುವ ಈ ರುಚಿಕರವಾದ ದೋಸೆ ಒಮ್ಮೆ ಟ್ರೈ ಮಾಡಿ. ಈರುಳ್ಳಿ, ಟೊಮ್ಯಾಟೊ ಮತ್ತು ಮಸಾಲೆಯೊಂದಿಗೆ ತಯಾರಿಸಿದ ಚಿಕನ್ ಕೂರವನ್ನು ದೋಸೆಗೆ ಬಳಸಲಾಗುತ್ತದೆ. ಈ ಚಿಕನ್ ದೋಸೆ ರೆಸಿಪಿ ಟಿಫನ್, ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೂ ಉತ್ತಮ ಆಯ್ಕೆ. ಒಮ್ಮೆ ತಿಂದವರು ಮತ್ತೆ ಮತ್ತೆ ಬೇಕೆಂದು ಕೇಳುತ್ತಾರೆ. ಚಿಕನ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಚಿಕನ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಚಿಕನ್ - 400 ಗ್ರಾಂ
• ಈರುಳ್ಳಿ - 2 (ಮಧ್ಯಮ ಗಾತ್ರ)
• ಟೊಮೆಟೊ ಪ್ಯೂರಿ - 1/2
• ಮೆಣಸಿನಕಾಯಿ ಪುಡಿ - 1 ಚಮಚ
• ಮೆಣಸು - 1/2 ಸ್ಪೂನ್
• ಜೀರಿಗೆ - 1 ಚಮಚ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
• ಗರಂ ಮಸಾಲಾ ಪುಡಿ - 1/2 ಸ್ಪೂನ್
• ಎಣ್ಣೆ - 2 ಸ್ಪೂನ್
• ದೋಸೆ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು
• ಕರಿಬೇವು - ಸ್ವಲ್ಪ
• ಅರಿಶಿನ - 1/2 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ತುಪ್ಪ - ಅಗತ್ಯಕ್ಕೆ ತಕ್ಕಷ್ಟು
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ನೀರು - 3 ಅಥವಾ 4 ಕಪ್
ಚಿಕನ್ ದೋಸೆ ತಯಾರಿಸುವ ವಿಧಾನ
ಚಿಕನ್ ದೋಸೆ ತಯಾರಿಸಲು, ಮೊದಲು ಸ್ಟವ್ ಮೇಲೆ ಪ್ರೆಷರ್ ಕುಕ್ಕರ್ ಇಡಿ. ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಜೀರಿಗೆ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಒಂದು ನಿಮಿಷ ಫ್ರೈ ಮಾಡಿ. ಈಗ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ಈರುಳ್ಳಿ ತುಂಡುಗಳು ಹುರಿದ ಬಳಿಕ ಟೊಮೆಟೊ ಪ್ಯೂರಿ, ಖಾರ, ಅರಿಶಿನ, ಕರಿಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ. ಈಗ ಈರುಳ್ಳಿ ಮಸಾಲಾ ಮಿಶ್ರಣವನ್ನು ಕನಿಷ್ಠ 4 ನಿಮಿಷಗಳ ಕಾಲ ಬೇಯಿಸಿ.

ಇದಾದ ನಂತರ ಈರುಳ್ಳಿ ಮಸಾಲಾ ಮಿಶ್ರಣಕ್ಕೆ ಚಿಕನ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಸುಮಾರು 3 ರಿಂದ 4 ಕಪ್ ನೀರು ಹಾಕಿ ಚಿಕನ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿ. ಕುಕ್ಕರ್ ಮುಚ್ಚಳವನ್ನು ಮುಚ್ಚಿ ಚಿಕನ್ ಚೆನ್ನಾಗಿ ಬೇಯುವವರೆಗೆ ಸುಮಾರು 8 ರಿಂದ 10 ನಿಮಿಷಗಳ ಕಾಲ ಬೇಯಿಸಿ. ಚಿಕನ್ ಬೆಂದ ನಂತರ ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ. ಈಗ ದೋಸೆಗೆ ಚಿಕನ್ ಮಸಾಲಾ ಸಿದ್ಧವಾಗಿದೆ.
ಈಗ ಸ್ಟವ್ ಮೇಲೆ ತವಾ ಇಟ್ಟು ಬಿಸಿ ಮಾಡಿ. ದೋಸೆ ಹಿಟ್ಟನ್ನು ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ನಂತರ ದೋಸೆಯ ಮೇಲೆ 3 ಸ್ಪೂನ್ ಚಿಕನ್ ಮಸಾಲ ಹಾಕಿ, ದೋಸೆಯನ್ನು ಸ್ಟಫಿಂಗ್ನಿಂದ ತುಂಬಿಸಿ. ದೋಸೆಯ ಮೇಲೆ ತುಪ್ಪ ಹಾಕಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ. ಗರಿಗರಿಯಾಗಿ ಬೇಯಿಸಿಕೊಳ್ಳಿ. ಇಷ್ಟು ಮಾಡಿದರೆ, ರುಚಿಕರವಾದ ಚಿಕನ್ ದೋಸೆ ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ನಿಮಗೆ ಇಷ್ಟವಾದ ಚಟ್ನಿ, ಸಾಂಬಾರ್ನೊಂದಿಗೆ ಬಿಸಿ ಇರುವಾಗಲೇ ಸವಿಯಿರಿ.



Click it and Unblock the Notifications
