Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ
ಮನೆಗೆ ಯಾರಾದರು ಅತಿಥಿಗಳು ಬಂದಾಗ ಅಥವಾ ಹಬ್ಬ, ಶುಭ ಕಾರ್ಯ, ಇಲ್ಲವೆ ಸಂಜೆ ಸಮಯದಲ್ಲಿ ಟೀ ಕಾಫಿ ಕುಡಿಯುವಾಗ ಸ್ನ್ಯಾಕ್ಸ್ ನೆನಪಾಗುತ್ತೆ. ಅದ್ರಲ್ಲೂ ಕುರುಕಲು ತಿಂಡಿ ಇದ್ರೆ ಈ ಸಮಯದಲ್ಲಿ ಬಾಯಿ ರುಚಿಗೆ ಬೆಸ್ಟ್. ಇಂತಹ ರುಚಿ ರುಚಿಯ ತಿಂಡಿಗಳ ಒಐಕಿ ಹತ್ತು ಹಲವು ರೀತಿಯ ತಿಂಡಿಗಳನ್ನು ನಾವು ಅಂಗಡಿಯಿಂದ, ಬೇಕರಿಯಿಂದ ಅಷ್ಟೇ ಏಕೆ ಮನೆಯಲ್ಲೇ ಮಾಡಿ ಸವಿದಿರುತ್ತೇವೆ. ಬಹಳಷ್ಟು ತಿಂಡಿಗಳು ಎಲ್ಲರ ಬಾಯಲ್ಲು ನೀರು ತರಿಸುವುದು ನೋಡಬಹುದು.
ಸಾಮಾನ್ಯವಾಗಿ ಕುರುಕಲು ತಿಂಡಿ ಅಂದಕೂಡಲೇ ಚಕ್ಕುಲಿ ಎಲ್ಲರಿಗೂ ನೆನಪಾಗುತ್ತೆ. ಅಂಗಡಿಗಳಲ್ಲಿ ಈಗ ವಿವಿಧ ಬಗೆಯ ರುಚಿ ರುಚಿಯಾದ ಚಕ್ಲಿ ಸಿಗುತ್ತದೆ. ಹಾಗೆ ಇದರ ರುಚಿಗೆ ನೀವು ಯಾವಾಗಲು ಸವಿಯಲು ಮುಂದಾಗುವುದು ನೋಡಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ಸಿಗುವ ಹಲವು ಬಗೆಯ ಚಕ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗೋದು ನೋಡಬಹುದು.

ಹಾಗೆ ಈ ರುಚಿಯ ಚಕ್ಲಿಗಳಲ್ಲಿ ನಾವಿಂದು ಸುಲಭವಾಗಿ ಹಾಗೆ ಬಹಳ ರುಚಿ ನೀಡುವ ಟೊಮೆಟೋ ಚಕ್ಕುಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಟೊಮೆಟೋ ಬಳಸಿ ಮಾಡುವ ಈ ಚಕ್ಲಿ ವಿಧಾನವೂ ಸವಿಯಲು ಬಹಳ ರುಚಿ ಹಾಗೆ ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ಈ ಟೊಮೆಟೋ ಚಕ್ಲಿ ಮಾಡುವುದು ಹೇಗೆ? ಈ ಚಕ್ಕುಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾಗಿ ಮಾಹಿತಿ ಇಲ್ಲಿದೆ.
ಟೊಮೆಟೋ ಚಕ್ಕುಲಿ ಮಾಡಲು ಬೇಕಾಗುವ ವಸ್ತುಗಳು
- ಟೊಮೆಟೋ
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು
- ಜೀರಿಗೆ
- ಇಂಗು
- ಬೆಣ್ಣೆ
- ಬಿಳಿ ಎಳ್ಳು
- ಒಣ ಮೆಣಸು
- ಉಪ್ಪು
- ಎಣ್ಣೆ
ಟೊಮೆಟೋ ಚಕ್ಕುಲಿ ಮಾಡುವ ವಿಧಾನವೇನು?
ಮೊದಲು ಟೊಮೆಟೋವನ್ನು ಮಧ್ಯದಲ್ಲಿ 4 ಭಾಗ ಸೀಳಿಕೊಂಡು ಕುಕ್ಕರ್‌ಗೆ ಹಾಕಿ, ಇದರ ಜೊತೆಗೆ ಒಣ ಮೆಣಸು, ಸ್ವಲ್ಪ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಅನಂತರ ಟೊಮೆಟೋ ತೆಗೆದು ಪ್ಲೇಟ್‌ಗೆ ಹಾಕಿ ಸಿಪ್ಪೆಯನ್ನು ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ಅನಂತರ ಮಿಕ್ಸಿ ಜಾರ್ ಈ ಟೊಮೆಟೋ ಹಾಗೂ ಮೆಣಸು ಹಾಕಿ ನುಣ್ಣಗೆ ರುಬ್ಬಬೇಕು. ನೀರು ಹಾಕದೆ ರುಬ್ಬಿ.
ಈಗ ಒಂದು ತಟ್ಟೆಯಲ್ಲಿ 3 ಕಪ್ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಅರ್ಧ ಕಪ್ ಕಡಲೆ ಹಿಟ್ಟು, ಅರ್ಧ ಚಮಚ ಓಂಕಾಳು ಸೇರಿಸಿಕೊಂಡು ಇಂಗು ಪುಡಿ, ಜೀರಿಗೆ, ಬಿಳಿ ಎಳ್ಳು, ಉಪ್ಪು, ಬೆಣ್ಣೆ ಕರಗಿಸಿಕೊಂಡು ಇದಕ್ಕೆ ಹಾಕಿ ಮೊದಲು ಡ್ರೈ ಮಿಕ್ಸ್ ಮಾಡಿ. ಹಿಟ್ಟಿನೊಂದಿಗೆ ಎಲ್ಲ ವಸ್ತುಗಳು ಬೆರೆಯಬೇಕು. ಕೈಯಿಂದ ಉಂಡೆ ಕಟ್ಟುವಷ್ಟು ಹದಕ್ಕೆ ಇದು ಬರಬೇಕು.
ಈಗ ಟೊಮೆಟೋ ಮೆಣಸಿನ ಪೇಸ್ಟ್ ಅನ್ನು ಜರಡಿ ಹಿಡಿದು ಈ ಹಿಟ್ಟಿಗೆ ಹಾಕಿಕೊಂಡು ಮಿಕ್ಸ್ ಮಾಡಬೇಕು. ಇದಕ್ಕೆ ಟೊಮೆಟೋ ಬೇಯಿಸಿದ ನೀರನ್ನೇ ಮಿಕ್ಸ್ ಮಾಡುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಚಪಾತಿ ಹಿಟ್ಟಿಗಿಂತ ಚೂರು ತೆಳುವಾದ ಹದಕ್ಕೆ ಇದು ಬರಬೇಕು. ಮೃದುವಾಗಿ ಇದು ಬರಬೇಕು.
ಈಗ ಚಕ್ಲಿ ಅಚ್ಚನ್ನು ತೆಗೆದುಕೊಂಡು ಅದಕ್ಕೆ ಹಿಟ್ಟನ್ನು ಹಾಕಿಕೊಂಡು ನೇರವಾಗಿ ಬಾಣಲೆಗೆ ಅಥವಾ ತಟ್ಟೆಯ ಮೇಲೆ ಚಕ್ಲಿಯನ್ನು ಬಿಟ್ಟುಕೊಳ್ಳಬಹುದು. ಎಲ್ಲಾ ಹಿಟ್ಟನ್ನು ಇದೇ ರೀತಿ ವಿಧಾನವಾಗಿ ಚಕ್ಲಿ ಮಾಡಿ. ಮಧ್ಯ ಉರಿಯಲ್ಲಿ ಚೆನ್ನಾಗಿ ಕರಿದುಕೊಳ್ಳಬೇಕು. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ.



Click it and Unblock the Notifications
