Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತಟ್ಟೆ ಇಡ್ಲಿ ಅಲ್ಲ ಮಸಾಲೆ ತಟ್ಟೆ ದೋಸೆ ಮಾಡಿದ್ದೀರಾ? ಇದು ಸ್ಪೆಷಲ್ ಬ್ರೇಕ್ಫಾಸ್ಟ್
ಬೆಳಗ್ಗೆ ಬ್ರೇಕ್ಫಾಸ್ಟ್ಗೆ ನಾವು ಹಲವು ರೀತಿಯ ಬಗೆ ಬಗೆಯ ಖಾದ್ಯಗಳ ಮಾಡಿ ಸವಿದಿರುತ್ತೇವೆ. ವಿಶೇಷವಾಗಿ ನಾವು ದೋಸೆ ಮಾಡಿ ಸವಿಯುವುದು ಸಹ ನೋಡಿದ್ದೇವೆ. ದೋಸೆಯಲ್ಲಿ ಹಲವು ರೀತಿಯ ಬಗೆಯಲ್ಲಿ ಮಾಡುವುದು ಸಹ ನೋಡಿರುತ್ತೇವೆ. ಹೋಟೆಲ್ಗಳಲ್ಲಿ, ರೆಸ್ಟೋರೆಂಟ್ಗಳಲ್ಲಿನ ವಿಶೇಷ ರುಚಿ ದೋಸೆಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಹಾಗೆ ವಿಶೇಷ ರೀತಿಯ ದೋಸೆಗಳ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ದೋಸೆಗಳಲ್ಲಿ ಹತ್ತು ಹಲವು ಮಾದರಿಯ ದೋಸೆ ನೋಡಬಹುದು. ಮಾಸಾಲೆ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ರವೆ ದೋಸೆ, ಬೆಣ್ಣೆ ದೋಸೆ, ನೀರ್ ದೋಸೆ, ಉದ್ದಿನ ದೋಸೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಹಾಗೆ ನಾವಿಂದು ವಿಶೇಷ ದೋಸೆ ಸವಿಯುವ ಸಲುವಾಗಿ ನಾವಿಂದು ತಟ್ಟೆ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ತಟ್ಟೆ ಇಡ್ಲಿ ಮಾಡುವ ಕುರಿತು ತಿಳಿದಿರಬಹುದು. ಆದ್ರೆ ನಾವಿಂದು ತಟ್ಟೆ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಸಣ್ಣ ಸೆಟ್ ದೋಸೆಯಂತೆ ಇರುವ ಈ ದೋಸೆಯು ಬಹಳ ರುಚಿ ಇರಲಿದೆ. ಮಸಾಲೆಗಳು, ತರಕಾರಿಗಳ ಹಾಕಿ ಮಾಡುವ ಈ ತಟ್ಟೆ ದೋಸೆ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ತಟ್ಟೆ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ತಟ್ಟೆ ದೋಸೆ ಮಾಡುವ ವಿಧಾನವೇನು?, ತಟ್ಟೆ ದೋಸೆ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಟ್ಟೆ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅವಲಕ್ಕಿ
- ಟೊಮೆಟೋ
- ಈರುಳ್ಳಿ
- ಹಸಿ ಮೆಣಸು
- ಜೀರಿಗೆ
- ಕೊತ್ತಂಬರಿ
- ಕ್ಯಾರೆಟ್
- ಆಲೂಗಡ್ಡೆ
- ಕ್ಯಾಪ್ಸಿಕಂ
- ಅಡುಗೆ ಸೋಡಾ
- ನಿಂಬೆ ರಸ
- ಉಪ್ಪು
- ಎಣ್ಣೆ
ತಟ್ಟೆ ದೋಸೆ ಮಾಡುವ ವಿಧಾನವೇನು?
ಒಂದು ಕಪ್ಗೆ ಅವಲಕ್ಕಿ ಹಾಕಿ ನೀರು ಹಾಕಿ ತೊಳೆದುಕೊಂಡು ಬಳಿಕ ನೀರು ಹಾಕಿ ನೆನೆಸಿಡಬೇಕು. ಇದು 10 ನಿಮಿಷ ನೆನೆಯಬೇಕು. ಈಗ ಕಾಲು ಕಪ್ ರವೆ ಹಾಕಿಕೊಳ್ಳಿ. ಅದಕ್ಕೆ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಇದನ್ನು ಕೂಡ 10 ನಿಮಿಷಗಳ ಕಾಲ ನೆನೆಸಿಡಬೇಕು. 10 ನಿಮಿಷದ ಬಳಿಕ ಈಗ ಅವಲಕ್ಕಿ ಹಾಕಿ ರವೆಯನ್ನು ಮುಚ್ಚಳ ತೆಗೆದು ನೋಡಿ ಅದು ಸಂಪೂರ್ಣ ಮೆತ್ತಗಾಗಿರಬೇಕು. ಹಾಗೆ 2 ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಇಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ಗೆ ಅವಲಕ್ಕಿ ಹಾಗೂ ರವೆಯನ್ನು ಹಾಕಿಕೊಂಡು 1 ಕಪ್ ಅಕ್ಕಿ ಹಿಟ್ಟು ಹಾಕಿ ಅರ್ಧ ಕಪ್ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಈ ಹಿಟ್ಟನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಈ ಹಿಟ್ಟಿಗೆ ಒಂದು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಿ.
ಹಾಗೆ ಸಣ್ಣದಾಗಿ ಹೆಚ್ಚಿದ ಟೊಮೆಟೋ, ಕ್ಯಾಪ್ಸಿಕಂ, ಹಸಿ ಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ 2 ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿಕೊಂಡು ಹಾಕಿಕೊಳ್ಳಿ. ನಂತರ ಈ ಹಿಟ್ಟಿಗೆ ಉಪ್ಪು, ಅಡುಗೆ ಸೋಡಾ, ಮುಕ್ಕಾಲು ಸ್ಪೂನ್ ನಿಂಬೆ ರಸ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ಹಿಟ್ಟು ರೆಡಿಯಾಗುತ್ತದೆ. ಇಗ ತವಾವನ್ನು ಒಲೆ ಮೇಲೆ ಇಟ್ಟಿ ಕಾಯಿಸಿಕೊಳ್ಳಿ. ಇದಕ್ಕೆ ಕಾವಲಿಯ ಅಗತ್ಯವಿಲ್ಲ ಸಣ್ಣ ತವಾ ಇದ್ದರೆ ಸಾಕು. ತವಾಗೆ ಎಣ್ಣೆ ಹಾಕಿಕೊಳ್ಳದೆ ಹಿಟ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಎಲ್ಲಾ ಹಿಟ್ಟನ್ನು ಹೀಗೆ ಮಾಡಿಕೊಂಡರೆ ನಿಮ್ಮ ಮುಂದೆ ತಟ್ಟೆ ದೋಸೆ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೊಡಿ.



Click it and Unblock the Notifications
