Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಯಲ್ಲಿ ಈ ರೀತಿಯ ಸ್ಪೆಷಲ್ ಟೀ ಮಾಡಿ: ನೀವೆಂದು ಕುಡಿದಿರೋದಿಲ್ಲ!
ನೀವು ಮನೆಯಲ್ಲಿ ಟೀ ಕುಡಿಯುವುದರಿಂದಲೇ ದಿನ ಆರಂಭಿಸುವ ಅಭ್ಯಾಸ ಹೊಂದಿರಬಹುದು. ಕೆಲವರು ಬೆಡ್ ಮೇಲೆ ಟೀ ಕುಡಿದು ಬಳಿಕ ನಿತ್ಯದ ಕೆಲಸ ಆರಂಭಿಸುತ್ತಾರೆ. ಇನ್ನು ದಿನದಲ್ಲಿ 10 ಟೀ ವರೆಗೂ ಕುಡಿಯುವ ಮಂದಿ ಇದ್ದಾರೆ. ಗಂಟೆಗೊಮ್ಮೆಯಾದರು ಟೀ ಕುಡಿಯುತ್ತಾ ಇರಬೇಕು ಎನ್ನುವ ಮಂದಿಯನ್ನು ಸಹ ನಾವು ನೋಡಿರುತ್ತೇವೆ. ಅದರಲ್ಲೂ ಭಾರತದಲ್ಲಿ ಟೀ ತುಂಬಾನೆ ಫೇಮಸ್.
ಹಾಗೆ ಈಗಂತು ಟೀಯಲ್ಲೂ ಹತ್ತಾರು ಬಗೆ ಇದೆ. ನಾವು ಒಂದಲ್ಲಾ ಒಂದು ಹೊಸ ರೀತಿಯ ಟೀ ಅನ್ನು ನೋಡುತ್ತಲೇ ಇರುತ್ತೇವೆ. ಮಸಾಲೆ ಟೀ, ಶುಂಠಿ ಟೀ, ಜಿರಿಗೆ ಟೀ, ಬೆಲ್ಲದ ಟೀ, ಏಲಕ್ಕಿ ಟೀ ಹೀಗೆ ಹೇಳುತ್ತಾ ಹೋದರೆ ಪಟ್ಟಿಯನ್ನೇ ನಿಮ್ಮ ಮುಂದೆ ಇಡಬಹುದು. ಇಂತಹ ಹಲವು ಟೀಗಳ ನಡುವೆ ನಾವು ನಿತ್ಯ ಒಂದೇ ರೀತಿಯ ಟೀ ಕುಡಿಯಲು ಇಷ್ಟಪಡುತ್ತೇವೆ.

ಕೆಲಸ ಮಾಡಿ ಸುಸ್ತಾದಾಗ, ಹಸಿವಾದಾಗ, ಚಳಿ, ಮಳೆ ಹೀಗೆ ಎಲ್ಲಾ ಕಾರಣಕ್ಕೂ ಪರಿಹಾರವಾಗಿ ನಾವು ಟೀ ಅನ್ನು ಅವಲಂಭಿಸಿರುತ್ತೇವೆ. ಟೀ ಕೆಲವೊಮ್ಮೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದನ್ನು ಕೂಡ ನಾವು ನೋಡಿರುತ್ತೇವೆ. ಹೆಚ್ಚು ಕೆಲಸ ಮಾಡಿದಾಗ, ಒತ್ತಡದಲ್ಲಿದ್ದಾಗ ಒಂದು ಟೀ ಕುಡಿದರೆ ನಿರಾಳರಾಗುತ್ತೇವೆ.
ಟೀ ಪುಡಿಯಲ್ಲಿರುವ ಕೆಫೀನ್ ಅಂಶ ನಮ್ಮ ಮೆದುಳಿಗೆ ಎನರ್ಜಿ ನೀಡುತ್ತದೆ. ಇದರಿಂದ ನೀವು ಹೆಚ್ಚು ಉತ್ಸಾಹ ಭರಿತವಾಗಿ ಕಾಣಿಸಿಕೊಳ್ಳುತ್ತೀರಿ. ಹೀಗೆ ನಿತ್ಯ ಬೆಳಗ್ಗೆ ನೀವು ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದರೆ ಒಂದು ದಿನ ಈ ಟೀ ಕುಡಿಯುವುದನ್ನು ಬಿಟ್ಟರೆ ನೀವು ಏನೋ ಕಳೆದುಕೊಂಡಂತೆ ಪರದಾಡುತ್ತೀರಿ. ಆದ್ರೆ ನಾವಿಂದು ವಿಭಿನ್ನ ರುಚಿಯಲ್ಲಿ ಟೀ ಮಾಡುವುದನ್ನು ತಿಳಿಯೋಣ.
ಮಸಾಲೆ ದೋಸೆಗೆ ಹಾಕುವ ಈ ಚಟ್ನಿ ಮಾಡುವುದು ಹೇಗೆ?: 5 ನಿಮಿಷದಲ್ಲಿ ಮಾಡಬಹುದು
ಟೀ ಅನ್ನು ನೀವು ಎಂದಿಗೂ ಈ ರೀತಿ ಮಾಡಿ ಕುಡಿದಿರುವುದಿಲ್ಲ. ಹಾಗಾದ್ರೆ ಹೊಸ ರೀತಿ, ರುಚಿ ರುಚಿಯ ಟೀ ಮಾಡುವುದನ್ನು ನೋಡೋಣ. ವಿಭಿನ್ನ ರುಚಿಯ ಟೀ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಟೀ ಮಾಡುವುದು ಹೇಗೆ?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಳ್ಳೋಣ.
ಸ್ಪೆಷಲ್ ಟೀ ಮಾಡಲು ಬೇಕಾಗುವ ಪದಾರ್ಥಗಳು
ಹಾಲು
ಟೀ ಪುಡಿ
ಬಾದಾಮ್ ಪುಡಿ
ಸಕ್ಕರೆ ಅಥವಾ ಬೆಲ್ಲ
ಶುಂಠಿ
ಏಲಕ್ಕಿ
ನೀರು
ಸ್ಪೆಷಲ್ ಟೀ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ನೀರು ಬಿಸಿಯಾದ ಬಳಿಕ ಅದಕ್ಕೆ ಟೀ ಪುಡಿ, ಜಜ್ಜಿಕೊಂಡಿರುವ ಶುಂಠಿ, ಪುಡಿ ಮಾಡಿಕೊಂಡ ಏಲಕ್ಕಿ ಹಾಕಿ ಮಿಕ್ಸ್ ಮಾಡಿಕೊಂಡು 5 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಒಲೆಯನ್ನು ಆಫ್ ಮಾಡಿಕೊಂಡು ಟೀ ಕೆಳಗೆ ಇಳಿಸಿಕೊಳ್ಳಿ. ಹಾಗೆ ಜರಡಿ ಹಿಡಿದು ಮತ್ತೊಂದು ಪಾತ್ರೆಗೆ ಟೀ ಹಾಕಿಕೊಳ್ಳಿ. ಇಲ್ಲಿಗೆ ಟೀ ಪೂರ್ಣ ಆಗಿರುವುದಿಲ್ಲ. ಇದು ಬರಿ ಡಿಕಾಕ್ಷನ್ ಅಷ್ಟೆ.
ಬಾಯಲ್ಲಿ ನೀರು ತರಿಸುವ ಪಾಲಕ್ ಗ್ರೇವಿ ಮಾಡಿ..! ಎಲ್ಲಾ ತಿಂಡಿಗೂ ಅತ್ಯುತ್ತಮ ರುಚಿ!!
ಈಗ ಮತ್ತೆ ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಹಾಲು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಹಾಲು ಬಿಸಿಯಾದ ಬಳಿಕ ಇದಕ್ಕೆ ಬಾದಾಮ್ ಪುಡಿಯನ್ನು ಹಾಕಿ, ಹಾಗೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿರುಗಿಸಿಕೊಳ್ಳಿ. ಬಾದಾಮ್ ಪುಡಿ ಗಟ್ಟಿಯಾಗಲು ಬಿಡಬಾರದು. ಹೀಗಾಗಿ 5 ನಿಮಿಷ ತಿರುಗಿಸುತ್ತಲೇ ಇರಬೇಕು. 5 ನಿಮಿಷ ಬಳಿಕ ಈಗ ಮೊದಲು ಮಾಡಿಕೊಂಡಿದ್ ಡಿಕಾಕ್ಷನ್ ಅನ್ನು ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಮಿಕ್ಸ್ ಮಾಡಿ 2 ನಿಮಿಷ ಕುದಿಸಿಕೊಳ್ಳಬೇಕು. 2 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ನೇರವಾಗಿ ಲೋಟಕ್ಕೆ ಹಾಕಿಕೊಂಡು ಸವಿಯಬಹುದು. ಈ ಸ್ಪೆಷಲ್ ಟೀ ವಿಭಿನ್ನ ರುಚಿ ನೀಡುತ್ತದೆ. ನಿತ್ಯ ಮಾಡಲು ಆಗಲಿಲ್ಲ ಎಂದರೆ ಆಗಾಗ ಇಲ್ಲವೆ ಅತಿಥಿಗಳು ಬಂದಾಗ ಈ ಟೀ ಮಾಡಿ ಅವರಿಗೆ ನೀಡಿ. ಇದರ ರುಚಿಗೆ ನೀವು ಕೂಡ ಫಿದಾ ಆಗುತ್ತೀರಿ.



Click it and Unblock the Notifications
