Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮನೆಯಲ್ಲಿ ಸ್ಪೆಷಲ್ ತಿಂಡಿ ರೆಡಿ ಮಾಡಿ..! ಸಖತ್ ರುಚಿಯ ಶಾವಿಗೆ ಬಾತ್ ಸವಿದು ನೋಡಿ!!
ನೀವು ಬೆಳಗ್ಗೆ ತಿಂಡಿಗೆ ವಿಶೇಷ ಖಾದ್ಯಗಳನ್ನು ಮಾಡಿ ಸವಿಯು ಮನಸ್ಸು ಮಾಡಿದ್ರೆ ಯಾವ ತಿಂಡಿ ಮಾಡಬೇಕು ಎಂಬ ಪ್ರಶ್ನೆ ಕಾಡೋದು ಸಹಜ. ಅದರಲ್ಲೂ ಕಡಿಮೆ ಸಮಯದಲ್ಲಿ ಉತ್ತಮವಾಗಿ ರುಚಿ ನೀಡಬೇಕು ಎಂಬುದು ನಿಮ್ಮ ಬಯಕೆ ಆಗಿರುತ್ತೆ. ಅದಲ್ಲದೆ ಯರಾದರು ಅತಿಥಿಗಳು ಬಂದಾಗ, ಸಂಬಂಧಿಕರು ಬಂದಾಗ ಇಲ್ಲವೆ ಮನೆಯಲ್ಲಿ ಶುಭ ಕಾರ್ಯ ನಡೆಯುವಾಗ ಇಂತಹ ಸಂದರ್ಭದಲ್ಲಿ ನೀವು ಹೊಸದಾಗಿ ಅಥವಾ ವಿಶೇಷವಾಗಿ ಸವಿಯಬಹುದಾದ ತಿಂಡಿ ಮಾಡಲು ಮುಂದಾಗುತ್ತೀರಿ.
ಅಂತಹ ವಿಶೇಷ ಸಂದರ್ಭದಲ್ಲಿ ಸವಿ ಸಮಯವನ್ನು ಮತ್ತಷ್ಟು ಸಿಹಿಯಾಗಿಸುವ ಖಾದ್ಯಗಳಲ್ಲಿ ನಾವಿಂದು ಶಾವಿಗೆ ಬಾತ್ ಕುರಿತು ತಿಳಿಯೋಣ. ಶಾವಿಗೆ ಮೂಲಕ ಎಷ್ಟೆಲ್ಲಾ ಖಾದ್ಯಗಳ ಮಾಡಬಹುದು ಎಂಬುದನ್ನು ನೀವೆಲ್ಲಾ ತಿಳಿದಿರುತ್ತೀರಿ. ಶಾವಿಗೆ ಬಾತ್, ಶಾವಿಗೆ ಉಪ್ಪಿಟ್ಟು, ಶಾವಿಗೆ ಪಾಯಸ, ಶಾವಿಗೆ ಕೇಸರಿ ಬಾತ್, ಶಾವಿಗೆ ಚಿತ್ರಾನ್ನ ಕೂಡ ಮಾಡುತ್ತಾರೆ.

ಆದ್ರೆ ನಾವಿಂದು ಅತ್ಯಂತ ರುಚಿಕರವಾಗಿ ಮನೆ ಮಂದಿ ಎಲ್ಲರು ಮತ್ತೆ ಮತ್ತೆ ಸವಿಯಲು ಬಯಸುವಂತಹ ಈ ಶಾವಿಗೆ ಬಾತ್ ಮಾಡುವ ಕುರಿತಂತೆ ಇಂದು ತಿಳಿದುಕೊಳ್ಳೋಣ. ಈ ಶಾವಿಗೆ ಬಾತ್ ಮಾಡುವುದು ಹೇಗೆ?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಶಾವಿಗೆ ಬಾತ್ ಮಾಡುವಾಗ ಯಾವೆಲ್ಲಾ ತಯಾರಿ ಬೇಕಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಶಾವಿಗೆ ಬಾತ್ ಮಾಡಲು ಅಗತ್ಯವಿರುವ ವಸ್ತುಗಳಿವು
- ಶಾವಿಗೆ -250 ಗ್ರಾಮ್
- ಈರುಳ್ಳಿ 1
- ತೆಂಗಿನಕಾಯಿ ತುರಿ
- ಕಡಲೆಕಾಯಿ
- ಕಡಲೆ ಬೇಳೆ
- ಉದ್ದಿನ ಬೇಳೆ
- ನಿಂಬೆ ರಸ
- ಗೋಡಂಬಿ
- ತುಪ್ಪ
- ಅರಿಶಿನ ಪುಡಿ
- ಸಾಸಿವೆ
- ಶುಂಠಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಹಸಿಮೆಣಸಿನಕಾಯಿ
- ಅಡುಗೆ ಎಣ್ಣೆ
- ಉಪ್ಪು
ಶಾವಿಗೆ ಬಾತ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಬಿಡಿ. ಅನಂತರ ಇದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಅನಂತರ ಇದಕ್ಕೆ ರೋಸ್ಟೆಟ್ ಶಾವಿಗೆಯನ್ನು ಹಾಕಿಕೊಳ್ಳಬೇಕು. ಬಳಿಕ 2ರಿಂದ 3 ನಿಮಿಷ ಬೇಯಲು ಬಿಡಬೇಕು. ಅನಂತರ ಒಲೆ ಆಫ್ ಮಾಡಿಕೊಂಡು ನೀರು ಬಸಿದು ಶಾವಿಗೆಯನ್ನು ಬದಿಗಿಟ್ಟುಕೊಂಡು ತಣ್ಣಗಾಗಲು ಬಿಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ತುರಿದ ಶುಂಠಿ, ಹಸಿ ಮೆಣಸು, ಕರಿಬೇವು ಹಾಕಿಕೊಂಡು ಬಿಸಿ ಮಾಡಿ. ನಂತರ ಅರಶಿಣ ಪುಡಿ, ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಉಪ್ಪು ಹಾಕಿ 4 ನಿಮಿಷ ಫ್ರೈ ಮಾಡಿ. ಬಳಿಕ ತಣ್ಣಗಾಗಿರುವ ಶಾವಿಗೆಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ತೆಂಗಿನ ಕಾಯಿ ತುರಿ, ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ.
ಈಗ ಇನ್ನೊಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಕಡಲೆ ಬೀಜ ಹಾಕಿ ಹುರಿದುಕೊಳ್ಳಿ. ನಂತರ ಈ ಕಡಲೆ ಬೀಜವನ್ನು ಶಾವಿಗೆಗೆ ಹಾಕಿಕೊಳ್ಳಿ. ಅನಂತರ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಗೋಡಂಬಿ ಹಾಕಿ ಬಿಸಿ ಮಾಡಿಕೊಂಡು ಗೋಡಂಬಿಯನ್ನು ಕೂಡ ಶಾವಿಗೆ ಬಾತ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಶಾವಿಗೆ ಬಾತ್ ರೆಡಿಯಾಗುತ್ತದೆ. ಮನೆ ಮಂದಿ ಎಲ್ಲಾ ಕುಳಿತು ಸವಿಯಬಹುದಾದ ಈ ಖಾದ್ಯವನ್ನು ಯಾರು ಕೂಡ ಬೇಡ ಅನ್ನೋದಿಲ್ಲ.



Click it and Unblock the Notifications
