Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮುಳ್ಳು ಸೌತೆಕಾಯಿ ಇಡ್ಲಿ ಮಾಡಿದ್ರೆ ಅಚ್ಚರಿ ಪಟ್ಟು ತಿಂತಾರೆ: ಮಾಡೋದು ಹೇಗೆ ಗೊತ್ತಾ?
ನೀವು ಬೆಳಗ್ಗೆ ತಿಂಡಿಗೆ ಹಲವು ರೀತಿಯ ತಿಂಡಿಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಬಹಳ ರುಚಿ ರುಚಿಯ ಹಾಗೆ ವಿಭಿನ್ನ ರೀತಿಯ ತಿಂಡಿಗಳನ್ನು ಕೂಡ ನೀವು ಸವಿಯಲು ಮುಂದಾಗಿರುತ್ತೀರಿ. ಅದ್ರಲ್ಲೂ ವಿಭಿನ್ನ ತರಕಾರಿಗಳ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ, ಹಾಗೆ ದಕ್ಷಿಣ ಭಾರತದಲ್ಲಿ ನಾವು ಇಡ್ಲಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯ ತಿಂಡಿ ಎನ್ನಬಹುದು.
ವಾರದಲ್ಲಿ ಹಲವು ದಿನ ನಾವು ಇಡ್ಲಿ ಮಾಡುವುದು ನೋಡಬಹುದು. ಅದರಲ್ಲೂ ಇಡ್ಲಿಯಲ್ಲಿ ಹಲವು ರೀತಿಯ ಹಾಗೆ ಹಲವು ರುಚಿಯ ಬಗೆಗಳು ಇರುವುದು ನೋಡಬಹುದು. ಹೋಟೆಲ್ಗಳಲ್ಲಿ ನೀಡುವಂತಹ ಬಗೆ ಬಗೆಯ ಇಡ್ಲಿಯನ್ನು ನೀವು ಮನೆಯಲ್ಲೂ ಕೂಡ ಮಾಡಿ ಸವಿದಿರುತ್ತೀರಿ. ಹಾಗಾದ್ರೆ ನೀವು ಎಂದಾದರು ಈ ಸೌತೆಕಾಯಿ ಇಡ್ಲಿ ಮಾಡಿ ಸವಿದಿದ್ದೀರಾ?

ಹೌದು ಸೌತೆಕಾಯಿ ಇಡ್ಲಿ ಬಹಳ ರುಚಿಕರ ಹಾಗೆ ವಿಭಿನ್ನ ಇಡ್ಲಿ ಎನಿಸಿಕೊಂಡಿದೆ. ಹಾಗೆ ಇದನ್ನು ಮಾಡುವುದು ಕೂಡ ಬಹಳ ಸುಲಭ. ಹಾಗಾದ್ರೆ ನಾವಿಂದು ವಿಭಿನ್ನ ರುಚಿ ನೀಡುವ ಹಾಗೆ ವಿಶೇಷ ರೀತಿಯ ಸೌತೆಕಾಯಿ ಇಡ್ಲಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಸೌತೆಕಾಯಿ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಹಿಟ್ಟು ಹೇಗೆ ರೆಡಿ ಮಾಡಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸೌತೆಕಾಯಿ ಹಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಇಡ್ಲಿ ರವೆ
- ಮುಳ್ಳು ಸೌತೆ
- ತೆಂಗಿನಕಾಯಿ ತುರಿ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಸೌತೆಕಾಯಿ ಹಿಟ್ಟು ಮಾಡುವ ವಿಧಾನವೇನು?
ಮೊದಲು ಮುಳ್ಳು ಸೌತೆಕಾಯಿಯನ್ನು ತೊಳೆದು ಕ್ಯಾರೆಟ್ನಂತೆ ತುರಿದುಕೊಳ್ಳಬೇಕು. 1 ಕಪ್ ಸೌತೆಕಾಯಿ ತುರಿ ಬೇಕಾಗುತ್ತದೆ. ಈಗ ಅದೇ ಕಪ್ ಅಳತೆಯಲ್ಲಿ ಅರ್ಧ ಕಪ್ ಇಡ್ಲಿ ರವೆ ತೆಗೆದುಕೊಂಡು ಎರಡನ್ನು ಮೀಶ್ರಣ ಮಾಡಬೇಕು. ಎರಡು ಪದಾರ್ಥಗಳು ಬೆರೆಯುವಂತೆ ಕೈಯಿಂದ ಕಲಸಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮುಕ್ಕಾಲು ಕಪ್ ಅಷ್ಟು ತೆಂಗಿನಕಾಯಿ ತುರಿ, ಹಸಿ ಮೆಣಸು ಹಾಕಿ ಪುಡಿ ಮಾಡಿಕೊಂಡು ಅದನ್ನು ಕೂಡ ಇಡ್ಲಿ ರವೆಯೊಂದಿಗೆ ಸೇರಿಸಿ. ಹಾಗೆ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿಯಾಗಿದೆ ಎನಿಸಿದರೆ ಅದಕ್ಕೆ ನೀರು ಹಾಕಿಕೊಳ್ಳಬೇಕು.
ಹಾಗೆ ಹಿಟ್ಟು ನೀರಾಗಿದೆ ಎನಿಸಿದರೆ ಇಡ್ಲಿ ರವೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷ ಬಿಡಿ. ಈ ಹಿಟ್ಟು ಬಹಳ ತೆಳುವಾಗಿ ಅಥವಾ ಉದ್ದಿನ ಬೇಳೆ ಹಿಟ್ಟಿಗಿಂತಲು ದಪ್ಪವಾಗಿರಲಿ. ಈಗ ಇಡ್ಲಿ ಅಚ್ಚಿನಲ್ಲಿ ಎಣ್ಣೆ ಸವರಿಕೊಂಡು ಈ ಹಿಟ್ಟನ್ನು ಅದರಲ್ಲಿ ಹಾಕಿ ಕುಕ್ಕರ್ನಲ್ಲಿಟ್ಟು ಬೇಯಲು ಬಿಡಿ. ಸುಮಾರು 10ರಿಂದ 12 ನಿಮಿಷಗಳ ಕಾಲ ಬೇಯಲು ಬಿಟ್ಟರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಸೌತೆಕಾಯಿ ಇಡ್ಲಿ ರೆಡಿಯಾಗುತ್ತದೆ.
ನೀವು ಈ ಇಡ್ಲಿಯನ್ನು ತುಪ್ಪ, ಚಟ್ನಿಯ ಜೊತೆಗೆ ಸವಿಯಬಹುದು. ಒಮ್ಮೆ ಮಾಡಿ ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗೆ ವಿಶೇಷ ದಿನಗಳಲ್ಲಿ ಈ ರೀತಿಯ ಇಡ್ಲಿ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ ಹಾಗೆ ಅಚ್ಚರಿ ಕೂಡ ಆಗುತ್ತೆ.



Click it and Unblock the Notifications
