Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರೀತಿ ಸ್ಪೆಷಲ್ ಇಡ್ಲಿ ಎಂದಾದ್ರು ಮಾಡಿದ್ದೀರಾ? ಸಖತ್ ಟೇಸ್ಟಿ..ಸುಲಭದ ರೆಸಿಪಿ
ನೀವು ಬ್ರೇಕ್ ಫಾಸ್ಟ್‌ಗೆ ಎಷ್ಟೊಂದು ವಿಶೇಷವಾದ ಹಾಗೆ ವಿಭಿನ್ನ ರುಚಿಯ ಇಡ್ಲಿ ಮಾಡಿ ಸವಿದಿರುತ್ತೀರಿ. ಇಡ್ಲಿಯಲ್ಲಿ ಹತ್ತಾರು ಬಗೆ ಮಾಡಬಹುದು ಎಂಬುದು ಕೂಡ ನಿಮಗೆ ತಿಳಿದಿದೆ. ಒಂದೊಂದು ಬಗೆಯ ಇಡ್ಲಿಯೂ ಒಂದೊಂದು ಬಗೆಯ ರುಚಿ ನೀಡುತ್ತೆ, ಮಸಾಲೆ ಇಡ್ಲಿ, ರವೆ ಇಡ್ಲಿ, ಅವಲಕ್ಕಿ ಇಡ್ಲಿ, ಮೃದು ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ ಹೀಗೆ ಹತ್ತಾರು ವಿಧದಲ್ಲಿ ಇಡ್ಲಿ ಮಾಡಿ ಸವಿಯಬಹುದು.
ಇನ್ನು ನಾವು ಕೂಡ ಇಡ್ಲಿ ಹಲವು ರೀತಿ ರೆಸಿಪಿಗಳನ್ನು ನೀಡಿದ್ದೇವೆ. ಇಡ್ಲಿ ಕಡಿಮೆ ಎಣ್ಣೆ, ಮಸಾಲೆ ಬಳಸಿ ಮಾಡುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು, ಫೈಬರ್ ಯುಕ್ತ ಆಹಾರ ಆಗಿರೋದ್ರಿಂದ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇದು ಅಚ್ಚು ಮೆಚ್ಚಿನ ಆಹಾರ ಆಗಿರುತ್ತೆ.

ಆದ್ರೆ ಇಡ್ಲಿಯಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಬಗೆಯು ಖಾದ್ಯಗಳಿವೆ. ಬಹಳ ಸುಲಭವಾಗಿ ಒಂದಿಷ್ಟು ಖಾದ್ಯ ಮಾಡಬಹುದಾದರು, ಕೆಲವೊಂದು ವಿಶೇಷ ರುಚಿ ನೀಡುತ್ತದೆ. ಇಂತಹ ವಿಭಿನ್ನ ಶೈಲಿ ಇಡ್ಲಿಯಲ್ಲಿ ನಾವಿಂದು ಅತ್ಯುತ್ತಮ ರುಚಿಯ ಇಡ್ಲಿ ಮಾಡುವ ಕುರಿತು ತಿಳಿಯೋಣ. ಇದೊಂದು ಮಸಾಲೆ ಭರಿತ ಇಡ್ಲಿ ಆಗಿದೆ. ಹಾಗಾದ್ರೆ ಈ ವಿಶೇಷ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ವಿಶೇಷ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಇಂದು ತಿಳಿದುಕೊಳ್ಳೋಣ.
ವಿಶೇಷ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ
- ಸಾಸಿವೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕೊತ್ತಂಬರಿ
- ಕರಿಬೇವು
- ಜೀರಿಗೆ
- ಎಣ್ಣೆ
- ಉಪ್ಪು
- ಕ್ಯಾರೆಟ್
- ತೆಂಗಿನ ತುರಿ
- ಹಸಿ ಮೆಣಸು
- ಸೋಡಾ
ವಿಶೇಷ ಇಡ್ಲಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಜೀರಿಗೆ, ಕರಿಬೇವು, ಉಪ್ಪಿಟ್ಟು ರವೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅಳತೆಗೆ ತೆಗೆದುಕೊಂಡ ಗ್ಲಾಸ್ ಅನ್ನು ಇಟ್ಟುಕೊಳ್ಳಿ. 2 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಕೂಡ ಹಾಕಿ ಫ್ರೈ ಮಾಡಿ.
ಈಗ ಒಲೆ ಮಾಡಿ ಈ ಮಿಶ್ರಣ ತೆಗೆದಿಟ್ಟುಕೊಳ್ಳಿ. ಈಗ ರವೆ ತೆಗೆದುಕೊಂಡ ಗ್ಲಾಸ್‌ನಲ್ಲೇ ಒಂದು ಗ್ಲಾಸ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ ಅನಂತರ ತುರಿದ ಕ್ಯಾರೆಟ್, ತೆಂಗಿನ ತುರಿ, ಹಸಿ ಮೆಣಸು ಹಾಕಿಕೊಂಡಿ ಮಿಕ್ಸ್ ಮಾಡಿ. ಈ ಹಿಟ್ಟು ಮಾಡಲು ಚೆನ್ನಾಗಿ ಕಲಸಿಕೊಳ್ಳಿ. ಹಾಗೆ ಇದಕ್ಕೆ ಅರ್ಧ ನಿಂಬೆ ರಸವನ್ನು ಕೂಡ ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಅನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿ, ಈ ಮಿಶ್ರಣ ಗಟ್ಟಿಯಾದರೆ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಇದನ್ನು 10 ನಿಮಿಷ ನೆನೆಯಲು ಬಿಡಬೇಕು. ಇದು ಗಟ್ಟಿಯಾಗಬೇಕು. ನಂತರ ನೀರನ್ನು ಹೀರಿಕೊಂಡು ಈ ಹಿಟ್ಟು ಗಟ್ಟಿಯಾದ ಹದಕ್ಕೆ ಬರುತ್ತದೆ. ನಂತರ ಅಡುಗೆ ಸೋಡಾ ಹಾಕಿ 1 ನಿಮಿಷ ಈ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು.
ಈಗ ಈ ಹಿಟ್ಟನ್ನು ಎಣ್ಣೆ ಸವರಿಕೊಂಡಿರುವ ಇಡ್ಲಿ ಅಚ್ಚುಗಳಿಗೆ ಹಾಕಿಕೊಂಡು ಅದನ್ನು ಇಡ್ಲಿ ಕುಕ್ಕರ್ ಅಥವಾ ಪಾತ್ರೆಯಲ್ಲಿ ಇಡಬೇಕು. ಒಲೆ ಮೇಲೆ ಮೊದಲೇ ಈ ಕುಕ್ಕರ್ ಅಥವಾ ಪಾತ್ರೆ ಇಟ್ಟು ನೀರು ಕುದಿಯಲು ಬಿಟ್ಟರೆ ಮತ್ತೂ ಒಳ್ಳೆಯದು, 10 ನಿಮಿಷ ಈ ಇಡ್ಲಿ ಬೇಯಿಸಿಕೊಂಡರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೆತ್ತನೆಯ ಮಸಾಲೆ ಇಡ್ಲಿ ರೆಡಿಯಾಗುತ್ತದೆ. ನೀವು ಕೂಡ ಈ ಇಡ್ಲಿ ಮಾಡಬಹುದು.



Click it and Unblock the Notifications
